ಬೆಂಗಳೂರು, ಫೆ.28 : ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಎನ್.ಎ ಹ್ಯಾರಿಸ್ ಫೌಂಡೇಶನ್ ವತಿಯಿಂದ ಶಾಂತಿ ನಗರ ಮಟ್ಟದಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಮಾ.7ರಂದು ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು
ಫೌಂಡೇಷನ್ ನ ಸಂಸ್ಥಾಪಕ ಮೊಹಮ್ಮದ್ ನಲ್ಪಾಡ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 8 ರಂದು ಅಂತಾರಾಷ್ಟ್ರೀಯ ದಿನವಾಗಿದ್ದು, ಅದರ ಅಂಗವಾಗಿ ಮಾ.1 ರಂದು ಆಸ್ಟ್ರೀನ್ ಟೌನ್ ನಲ್ಲಿರುವ ನಂದಾ ಫುಟ್ ಬಾಲ್ ಮೈದಾನದಲ್ಲಿ ಜಿಲ್ಲಾ ಮಟ್ಟದ ಕ್ರೀಡೋತ್ಸವವನ್ನು ಆಯೋಜಿಸಿದೆ. ಈ ಕ್ರೀಡೋತ್ಸವಕ್ಕೆ ಬೆಂಗಳೂರು ನಗರದ ವಿವಿಧ ಭಾಗಗಳಿಂದ ಮಹಿಳೆಯರು ಭಾಗವಹಿಸಲಿದ್ದು, ಇದರಲ್ಲಿ ವಿಜೇತರಾದವರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ
ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಪರಿಸರ ವಾದಿ ಸಾಲುಮರದ ತಿಮ್ಮಕ್ಕ, ಸುಮಂಗಲ ಸೇವಾಶ್ರಮದ ಸುಶೀಲಮ್ಮ, ಶಾಸಕಿ ಸೌಮ್ಯ ರೆಡ್ಡಿ, ಉಪ ಪೊಲೀಸ್ ಆಯುಕ್ತೆ ಸಾರಾ ಫಾತೀಮಾ, ಮಾಜಿ ಸಚಿವೆ ರಾಣಿ ಸತೀಷ್ ಸೇರಿದಂತೆ ಅನೇಕ ಮಹಿಳಾ ಸಾಧಕಿಯರು ಪಾಲ್ಗೊಳ್ಳಲಿದ್ದು ಅವರಿಗೆ ಈ ಬಾರಿಯ ನಲಪಾಡ್ ಮಹಿಳಾ ಅವಾರ್ಡ್ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.