ವಿಜಯಪುರ 10: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಶನಿವಾರ ಬೆಳಿಗ್ಗೆ 8:30 ಗಂಟೆಗೆ ವಿಶ್ವವಿದ್ಯಾನಿಲಯದ ಮುಖ್ಯದ್ವಾರದಿಂದ ಸೈಕಲ್ ಜಾಥಾವನ್ನು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ, ಕುಲಸಚಿವ ಶಂಕರಗೌಡ ಸೋಮನಾಳ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರು ಸುಮಾರು 50 ಸೈಕಲ್ ಗಳೊಂದಿಗೆ ಭಾಗವಹಿಸಿದ್ದರು. ಮತ್ತು ನಗರದ ಅಂಬೇಡ್ಕರ್ ಕ್ರೀಡಾಂಗಣದ ಸೈಕಲ್ ತರಬೇತುದಾರರು ಅಲ್ಕಾ ಪಡ್ತಾರೆ ಅವರ ತಂಡ ಸೈಕಲ್ಗಳೊಂದಿಗೆ ಭಾಗವಹಿಸಿತ್ತು ಮತ್ತು ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಹಾಗೂ ಕ್ರೀಡಾ ನಿರ್ದೇಶಕ ಡಾ. ಹನುಮಂತಯ್ಯ ಪೂಜಾರಿ, ಡಾ. ಜ್ಯೋತಿ ಉಪ್ಯಾದೆ, ಡಾ. ಅಶ್ವಿನಿ ಕೆ.ಎನ್ ಮತ್ತು ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಸಂಚಾಲಕಿ ಡಾ. ಲಕ್ಷ್ಮೀದೇವಿ ವೈ ಭಾಗವಹಿಸಿದ್ದರು.