ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ

ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ  International Day Against Drug Abuse

ಲೋಕದರ್ಶನ ವರದಿ 

ಬೆಳಗಾವಿ 30: ದಿನಾಂಕ 29-06-2026ರಂದು ಎಫ್‌.ಪಿ.ಎ.ಐ, ಬೆಳಗಾವಿ ಶಾಖೆ, ಸರ್ಕಾರಿ ಚಿಂತಾಮಣರಾವ್ ಪಿ.ಯು. ಕಾಲೇಜು, ಶಹಾಪೂರ, ಬೆಳಗಾವಿ ಹಾಗೂ ಶಹಾಪೂರ ಪೊಲೀಸ್ ಠಾಣೆಯ ಸಹಯೋಗದಲ್ಲಿ “ಅಂತರಾಷ್ಟ್ರೀಯ ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರೋಧಿ ದಿನ”ವನ್ನು ಆಚರಿಸಲಾಯಿತು.  ಕಾರ್ಯಕ್ರಮವನ್ನು ವೇದಿಕೆಯ ಗಣ್ಯರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಉದ್ಘಾಟಕರಾಗಿ ಆಗಮಿಸಿದ್ದ ಡಾ. ವಿ. ಸಿ. ಬಾವಡೆಕರ, ಅಧ್ಯಕ್ಷರು, ಎಫ್‌.ಪಿ.ಎ.ಐ. ಬೆಳಗಾವಿ ಶಾಖೆ, ಅವರು ಮಾತನಾಡಿ ಯುವಕರು ಮದ್ಯಪಾನ, ಧೂಮಪಾನ, ತಂಬಾಕು ಹಾಗೂ ಮಾದಕ ವಸ್ತುಗಳಿಂದ ದೂರವಿದ್ದು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದು ಕರೆ ನೀಡಿದರು.  

ಮುಖ್ಯ ಅತಿಥಿಗಳಾದ ಶಹಾಪೂರ ಪೊಲೀಸ್ ಠಾಣೆಯ ಸಿದ್ದಪ್ಪ ಎಸ್‌. ಮಾನಿ, ಪೊಲೀಸ್ ಇನ್ಸ್ಪೆಕ್ಟರ್, ಅವರು ಮಾದಕ ವ್ಯಸನವು ಸ್ನೇಹಿತರ ಒತ್ತಡದಿಂದ ಆರಂಭವಾಗಿ ನಂತರ ಚಟವಾಗಿ ಮಾರು​‍್ಡತ್ತದೆ ಎಂದು ತಿಳಿಸಿ, ವಿದ್ಯಾರ್ಥಿಗಳು ಕ್ರೀಡೆ, ಯೋಗ, ಧ್ಯಾನ ಹಾಗೂ ಶಿಕ್ಷಣದ ಕಡೆ ಗಮನ ಹರಿಸಬೇಕೆಂದು ಹೇಳಿದರು. ಜೊತೆಗೆ ಮಾದಕ ದುರಾಚಾರ ಕಂಡುಬಂದರೆ ಮಾಹಿತಿ ನೀಡುವಂತೆ ಮನವಿ ಮಾಡಿದರು.  

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.  ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ವಿಜಯಾ ನಾಯಿಕ ವಹಿಸಿದ್ದರು. ಅವರು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತವೆ ಎಂದು ಹೇಳಿ, ಮಾದಕ ವ್ಯಸನದಿಂದ ದೂರವಿರುವಂತೆ ಕರೆ ನೀಡಿದರು.  ವಿ.ಡಿ. ಮುಚ್ಚನಂಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಪೊಲೀಸ್ ಸಿಬ್ಬಂದಿ, ಕಾಲೇಜು ಉಪನ್ಯಾಸಕರು, ಎಫ್‌.ಪಿ.ಎ.ಐ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.