ಕರ್ಜಗಿಯ ಶಿವಾ ಇಂಡಷ್ಟ್ರೀಸ್‌ನಲ್ಲಿ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚಾರಣೆ

ಕರ್ಜಗಿಯ ಶಿವಾ ಇಂಡಷ್ಟ್ರೀಸ್‌ನಲ್ಲಿ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚಾರಣೆ International Biofuel Day celebrated at Shiva Industries, Karjagi

ಹಾವೇರಿ 19: ಕಾರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಬೆಂಗಳೂರು, ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ ಹಾವೇರಿ, ಸಾಮಾಜಿಕ ಅರಣ್ಯ ಇಲಾಖೆ ಹಾವೇರಿ, ಕೃಷಿ ಇಲಾಖೆ ಹಾವೇರಿ, ಗ್ರಾಮ ಪಂಚಾಯತಿ ಕರ್ಜಗಿ, ಹಾವೇರಿ ಜಿಲ್ಲಾ ಜೈವಿಕ ಇಂಧನ ಪ್ರಾತ್ಯಕ್ಷಿಕೆ ಕೇಂದ್ರ ಹನುಮನಮಟ್ಟಿ, ಐ.ಸಿ.ಎಂ.ಆರ್‌. ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ, ಜಿಲ್ಲಾ ಮುಂದಾಳು ಸಂಸ್ಥೆಯಾದ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ, ರಾಣೇಬೆನ್ನೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಕರ್ಜಗಿಯ ಶಿವಾ ಇಂಡಷ್ಟ್ರೀಸ್ ನಲ್ಲಿ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯನ್ನು ದಿನಾಂಕ 18.08.2025ರಂದು ಹಮ್ಮಿಕೊಳ್ಳಲಾಗಿತ್ತು. 

2025-26ನೇ ಸಾಲಿನ ಗ್ರಾಮಿಣ ಕೃಷಿ ಕಾರ್ಯನುಭವ ಶಿಬಿರದ ನಿಮಿತ್ತ ಪ್ರಾಸ್ತಾವಿಕವಾಗಿ ಹನುಮನಮಟ್ಟಿಯ ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಪ್ರಿಯಾ ಪಿ ರವರು ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಹಾಗೂ ಬೆಳೆ ಉತ್ಪಾದನೆಯಲ್ಲಿ ಕೃಷಿ ಅರಣ್ಯ ಹಾಗೂ ಕೃಷಿ ಹೊಂಡ, ಜೈವಿಕ ಇಂಧನ ಉತ್ಪಾದನೆ ಅದರ ಉಪಯೋಗದ ಮಹತ್ವ ಕುರಿತು ಮಾತನಾಡಿದರು. 

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಉಪ ಅರಣ್ಯಸಂರಕ್ಷಣಾಧಿಕಾರಿಗಳು, ಸಾಮಾಜಿ ಅರಣ್ಯ ವಿಭಾಗ ಹಾವೇರಿಯ ಚಂದ್ರಶೇಖರ ಪಾಟೀಲ್ ರವರು ಎಲ್ಲಾ ಗಣ್ಯರೊಂದಿಗೆ ಜೈವಿಕ ಇಂಧನ ಸಸಿಗಳಿಗೆ ನೀರು ಹಾಕುವುದರ ಮೂಲಕ ಹಾಗೂ ರೈತರಿಗೆ ಸಸಿ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಲನೆ ನೀಡಿದರು. ಕೃಷಿ ಅರಣ್ಯದ ಮಹತ್ವ ಮತ್ತು ಅರಣ್ಯ ಕೃಷಿ ಅಳವಡಿಸಿಕೊಂಡು ಮತ್ತು ಕೀಟಗಳನ್ನು ಹೇಗೆ ನಿರ್ವಹಣೆ ಮಾಡಬಹುದೆಂದು ತಿಳಿಸಿದರು. ರೈತರು ತಮ್ಮ ಜಮೀನುಗಳಲ್ಲಿ ಬೇವು, ಹೊಂಗೆ, ಸಿಮರೂಬಾ ಇತ್ಯಾದಿ ಗಡಗಳನ್ನು ಮೂರು ವರ್ಷ ಸಂರಕ್ಷಣೆ ಮಾಡಿದರೆ ಪ್ರೋತ್ಸಾಹ ಧನವನ್ನೂ ನೀಡಲಾಗುವುದೆಂದು ಹೇಳಿದರು. 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ಜಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲತಾ ಕಳ್ಳಿಹಾಳ ರವರು ಮಾತನಾಡುತ್ತಾ 2025-26ನೇ ಸಾಲಿನ ಗ್ರಾಮಿಣ ಕೃಷಿ ಶಿಬಿರವು ಒಂದು ತಿಂಗಳು ನಮ್ಮ ಗ್ರಾಮದಲ್ಲಿ ಹಮ್ಮಿಕೊಂಡಿದ್ದು, ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳಿಂದ ರೈತರು ಪ್ರಯೋಜನ ಪಡೆಯಬೇಕೆಂದು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಕೃಷಿ ನಿರ್ದೇಶಕರಾದ ವಿ.ಪಿ. ದ್ಯಾಮಣ್ಣನವರ್ ಮಾತನಾಡುತ್ತಾ, ರೈತರ ಹಿಂದಿನ ಜೀವನದ ಬಗ್ಗೆ ಹಾಗೂ ಇತ್ತೀಚಿನ ದಿನಗಳಲ್ಲಿ ರೈತರ ಎದುರಿಸುತ್ತಿರುವ ಸಮಸ್ಯಗಳ ಬಗ್ಗೆ ತಿಳಿಸಿದರು. 

ನೀಡ್ಸ್‌ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ತಿಪ್ಪೇಶಪ್ಪ ಕನ್ನಮ್ಮನವರ ರವರು ಜೈವಿಕ ಇಂಧನದ ಬಗ್ಗೆ ರೈತರಿಗೆ ಮಾಹಿತಿ ನೀಡುವುದರ ಮುಖಾಂತರ ಭೂಗರ್ಭದಲ್ಲಿ ದೊರೆಯುವ ಪಳಯುಳಿಕೆಯುಕ್ತ ಇಂಧನಗಳು ಮುಗಿದುಹೋಗುವ ಸಂಪನ್ನೂಲಗಳಾಗಿದ್ದು ಇದರ ಪರ್ಯಾಯವಾಗಿ ಜೈವಿಕ ಇಂಧನಕ್ಕೆ ಬಳಕೆಯು ಪರಿಸರ ಸ್ನೇಹಿ ಹಾಗೂ ರೈತರಿಗೆ ಆದಾಯ ತರುವ ಒಂದು ನೈಸರ್ಗಿಕ ಇಂಧನವಾಗಿದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಹನುಮನಮಟ್ಟಿ ಕೃಷಿ ತಾಂತ್ರಿಕ ವಿಭಾದ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ವೇತಾ ಜಿ. ಮಾತನಾಡುತ್ತಾ ಮಳೆ ನೀರಿನ ಸಂರಕ್ಷಣೆ, ಕೃಷಿ ಹೊಂಡದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಕೃಷಿ ಸಮಾಜದ ನಿರ್ದೇಶಕರಾದ ಬಸವರಾಜ ಡೊಂಕಣ್ಣನವರ ಮಾತನಾಡಿ ರೈತರು ಕಾಡು ಪ್ರಾಣಿಗಳಿಂದ ಬೆಳೆಗಳನ್ನು ಸಂರಕ್ಷಿಸುವ ಕುರಿತು ತಿಳಿಸಿದರು. ಪ್ರಗತಿಪರ ರೈರತಾದ ನಿಜಲಿಂಗಪ್ಪ ಬಸಗಣ್ಣೆ ಇವರು ಜೈವಿಕ ಇಂಧನ ಮೂಲ ಸಸಿಗಳ ಬಗ್ಗೆ ರೈತರಿಗೆ ಮನವರಿಗೆ ಮಾಡಿದರು. 

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಪಿ.ಎಲ್‌. ಪಾಟೀಲ್ ಇವರು ಮಾತನಾಡುತ್ತಾ ಕೃಷಿ ಹೊಂಡ ಅಳವಡಿಕೆ ಬಗ್ಗೆ ಮತ್ತು ಮಣ್ಣಿನ ಫಲವತ್ತತೆ, ಕೃಷಿ ಅರಣ್ಯ ಹಾಗೂ ಬೆಳೆಗಳಲ್ಲಿ ಬರುವಂತಹ ಕೀಟಗಳ ಬಗ್ಗೆ, ಜಾನುವಾರುಗಳ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಅಂತಾರಾಷ್ಟ್ರೀಯ ಜೈವಿಕ ಇಂಧನ ಪ್ರಯುಕ್ತ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಹಿಪ್ಪೆ, ಸಿಮರೂಬಾ, ಹೊಂಗೆ, ಬೇವಿನ ಬೀಜಗಳು, ಬೇವಿನ ಹಿಂಡಿ, ಜೈವಿಕ ಡೀಸಲ್, ಜೈವಿಕ ಸಾಬೂನು, ಜೈವಿಕ ಗೊಬ್ಬರ, ಗ್ಲೀಸರಿನ್ ಇತ್ಯಾದಿ ವಸ್ತುಗಳ ತಯಾರಿಕೆಯಿಂದ ಪರ್ಯಾಯ ಆದಯಾಯ ಗಳಿಸುವ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ತಿಳಿಸಿದರು. 

ಕಾರ್ಯಕ್ರಮದಲ್ಲಿ ಕಾರ್ನಾಟಕ ರಾಜ್ಯ ಜೈವಿಕ ಇಂಧನ ಮಂಡಳಿ ಬೆಂಗಳೂರು, ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ ಹಾವೇರಿ, ಸಾಮಾಜಿಕ ಅರಣ್ಯ ಇಲಾಖೆ ಹಾವೇರಿ, ಕೃಷಿ ಇಲಾಖೆ ಹಾವೇರಿ, ಗ್ರಾಮ ಪಂಚಾಯತಿ ಕರ್ಜಗಿ, ಹಾವೇರಿ ಜಿಲ್ಲಾ ಜೈವಿಕ ಇಂಧನ ಪ್ರಾತ್ಯಕ್ಷಕೆ ಕೇಂದ್ರ ಹನುಮನಮಟ್ಟಿ, ಐ.ಸಿ.ಎಂ.ಆರ್‌. ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ, ಜಿಲ್ಲಾ ಮುಂದಾಳು ಸಂಸ್ಥೆಯಾದ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ, ರಾಣೇಬೆನ್ನೂರು, ಹಾಗೂ ವಿವಿಧ ಇಲಾಖೆಗಳು ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಗೂ ಕರ್ಜಗಿ ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸುಮಾರು 180ಕ್ಕೂ ಹೆಚ್ಚು ರೈತ ಮತ್ತು ರೈತ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಹನುಮಟ್ಟಿಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.