ದೇವಗಿರಿಯ ಪುಟ್ಟರಾಜ ಗವಾಯಿ ಮಠದಲ್ಲಿ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚಾರಣೆ
International Biofuel Day celebrated at Puttaraja Gawai Mutt, Devagiri
ಹಾವೇರಿ 19 : ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಮಹಾವಿದ್ಯಾಲಯ ಹನುಮನಮಟ್ಟಿ, ಬಿ.ಎಸ್. ಸಿ. (ಡಾನ್ಸ್) ಮತ್ತು ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳ ಕೃಷಿ ಕಾರ್ಯಾನುಭವ ಶಿಬಿರದ ಪ್ರಯುಕ್ತ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಹಾಗೂ ಬೆಳೆ ಉತ್ಪಾದನೆಯಲ್ಲಿ ಕೃಷಿ ಅರಣ್ಯ ಮತ್ತು ಕೃಷಿ ಹೊಂಡದ ಮಹತ್ವ ಎಂಬ ವಿಷಯದ ಅನುಗುಣವಾಗಿ ದಿನಾಂಕ 18.08.2025 ರ ಸೋಮವಾರ ಶ್ರೀ ಪಟ್ಟರಾಜ ಗವಾಯಿ ಮಠ, ದೇವಗಿರಿ ಗ್ರಾಮದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಾಸ್ತಾವಿಕವಾಗಿ ಹನುಮನ ಮಟ್ಟಿಯ ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಪ್ರಿಯಾ ಪಿ ರವರು ಕೃಷಿ ಹೊಂಡ ಮಹತ್ವ, ಜೈವಿಕ ಇಂಧನ ಉತ್ಪಾದನೆ ಬಗ್ಗೆ ಮತ್ತು ಮಣ್ಣಿನ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಹಾವೇರಿಯ ಮಾಜಿ ಶಾಸಕರು ಹಾಗೂ ಪ್ರಗತಿಪರ ರೈತರಾದ ಶಿವರಾಜ ಸಜ್ಜನ್ ರವರು ಎಲ್ಲಾ ಗಣ್ಯರೊಂದಿಗೆ ಜೈವಿಕ ಇಂಧನ ಸಸಿಗಳಿಗೆ ನೀರು ಹಾಕುವುದರ ಮೂಲಕ ಹಾಗೂ ರೈತರಿಗೆ ಸಸಿ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಲನೆ ನೀಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿ ಅರಣ್ಯ ವಿಭಾಗ ಹಾವೇರಿಯ ಚಂದ್ರಶೇಖರ ಪಾಟೀಲ್‌ಇವರು ಮಾತನಾಡುತ್ತಾ ಕೃಷಿ ಅರಣ್ಯದ ಮಹತ್ವ ಮತು ್ತಅರಣ್ಯ ಕೃಷಿ ಅಳವಡಿಸಿಕೊಂಡು ಮತ್ತು ಕೀಟಗಳನ್ನು ಹೇಗೆ ನಿರ್ವಹಣೆ ಮಾಡಬಹುದೆಂದು ತಿಳಿಸಿದರು.ರೈತರುತಮ್ಮ ಜಮೀನುಗಳಲ್ಲಿ ಬೇವು, ಹೊಂಗೆ, ಸಿಮರೂಬಾ ಇತ್ಯಾದಿ ಗಡಗಳನ್ನು ಮೂರು ವರ್ಷ ಸಂರಕ್ಷಣೆ ಮಾಡಿದರೆ ಪ್ರೋತ್ಸಾಹ ಧನವನ್ನೂ ನೀಡಲಾಗುವುದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಬೆಂಗಳೂರು, ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ ಹಾವೇರಿ, ಸಾಮಾಜಿಕ ಅರಣ್ಯ ಇಲಾಖೆ ಹಾವೇರಿ,ಕೃಷಿ ಇಲಾಖೆ ಹಾವೇರಿ, ಗ್ರಾಮ ಪಂಚಾಯತಿ ದೇವಗಿರಿ, ಹಾವೇರಿ ಜಿಲ್ಲಾ ಜೈವಿಕ ಇಂಧನ ಪ್ರಾತ್ಯಕ್ಷಿಕೆ ಕೇಂದ್ರ ಹನುಮನಮಟ್ಟಿ, ಐ.ಸಿ.ಎಂ.ಆರ್. ಕೃಷಿ ವಿಜ್ಞಾನಕೇಂದ್ರ ಹನುಮನಮಟ್ಟಿ, ಜಿಲ್ಲಾ ಮುಂದಾಳು ಸಂಸ್ಥೆಯಾದ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ, ರಾಣೇಬೆನ್ನೂರು, ಹಾಗೂ ವಿವಿಧ ಇಲಾಖೆಗಳು ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಗೂ ದೇವಗಿರಿ ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸುಮಾರು 150ಕ್ಕೂ ಹೆಚ್ಚು ರೈತ ಮತ್ತು ರೈತ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 