ಹಿರೇಬೆಂಡಿಗೇರಿ ಹಿರೇಮಠದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ರಥೋತ್ಸವ
Interfaith mass wedding and chariot festival at Hirebendigeri Hiremath
ಶಿಗ್ಗಾವಿ 18: ಯುಗಾದಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಹಿರೇ ಬೆಂಡಿಗೇರಿ ಹಿರೇಮಠದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ವಿಶ್ವರಾಧ್ಯರ ರಥೋತ್ಸವ ಜರಗುವವು ಎಂದು ಭಾವೈಕ್ಯ ಹಿರೇಮಠದ ಸಮಿತಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ದಿ 19 ರಂದು ಗುರುವಾರ ಮಧ್ಯಾಹ್ನ 12:30 ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಜರುಗುವವು ಹಾಗೂ ಅಂದೇ ಸಾಯಂಕಾಲ 4:00 ಗಂಟೆಗೆ ಶ್ರೀ ವಿಶ್ವರಾಧ್ಯರ ರಥೋತ್ಸವ ಜರಗುವುದು. ಅಲ್ಲದೇ ಇವೆಲ್ಲ ಕಾರ್ಯಕ್ರಮಗಳು ಗಂಜಿಗಟ್ಟಿ ಶ್ರೀಗಳಾದ ಷ.ಬ್ರ. ಶಿವಲಿಂಗೇಶ್ವರ ಶ್ರೀಗಳು. ಬಂಕಾಪುರ ಅರಳೆಲೆ ಮಠದ ಷ.ಬ್ರ.ರೇವಣಸಿದ್ದೇಶ್ವರ ಶ್ರೀಗಳು. ಹಿರೇಮಣಿಕಟ್ಟಿ ಷ. ಬ್ರ. ವಿಶ್ವರಾಧ್ಯ ಶ್ರೀಗಳು.
ಶಿಗ್ಗಾವಿ ವಿರಕ್ತ ಮಠದ ಮ. ನಿ. ಪ್ರ. ಸಂಗನಬಸವ ಶ್ರೀಗಳು.ಹಿರೇ ಬೆಂಡಿಗೇರಿ ಹಿರೇಮಠದ ನೂತನ ಷ. ಬ್ರ.ವಿಶ್ವೇಶ್ವರ ಶ್ರೀಗಳು. ಹಾಗೂ ಹರ ಗುರು ಚರಮೂರ್ತಿಗಳು. ರಾಜಕೀಯ ಮುಖಂಡರು ಸಮಾಜ ಸೇವಕರು ತಾಲೂಕಿನ ಎಲ್ಲ ಸ್ತರದ ನಾಯಕರು ಹಾಗೂ ಹಿರೇಬೆಂಡಿಗೇರಿ ಗ್ರಾಮದ ಸಮಸ್ತ ನಾಗರಿಕರು ತಾಯಂದಿರು ಭಕ್ತರು ಪಾಲ್ಗೊಳ್ಳುವರು ಎಂದರು . ಈ ಸಂದರ್ಭದಲ್ಲಿ ವಿಶ್ವರಾಧ್ಯರ ರಥೋತ್ಸವ ದಾನ ಮಾಡಿದ ಜನಾಬ್, ಮೌಲಾಸಾಬ್ ತಹಸಿಲ್ದಾರ್. ಬಸವರಾಜ್ ಹುಬ್ಬಳ್ಳಿ , ವೇದಮೂರ್ತಿ ಮೃತ್ಯುಂಜಯ ಹಿರೇಮಠ. ಬಸಪ್ಪ ಬಂಗಿ. ಶೇಖಪ್ಪ ನಾಶಿಪುಡಿ. ಹನುಮಂತಪ್ಪ ಮಂಟೂರ್. ಯಂಕಪ್ಪ ಮಂಟೂರ್. ಕೃಷ್ಣಪ್ಪ ಬಡಿಗೇರ್. ಈರ್ಪ ಮಲ್ಲೂರ್. ಗುರುಪಾದ ಲಂಗೂಟಿ. ಈರ್ಪ ನಾಗಪ್ಪನವರ್. ಗೋವಿಂದಪ್ಪ ಧರ್ಮಣ್ಣವರ ಸೇರಿದಂತೆ ಇನ್ನೂ ಅನೇಕ ಮುಖಂಡರು ಪಾಲ್ಗೊಂಡಿದ್ದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 