ಸಾಧನೆಗೆ ಆಸಕ್ತಿ ಮುಖ್ಯ ಗೌರೀಶ ಅಕ್ಕಿ
Interest in achievement is the key to success.
ಸಾಧನೆಗೆ ಆಸಕ್ತಿ ಮುಖ್ಯ ಗೌರೀಶ ಅಕ್ಕಿ
ಯಲಬುರ್ಗಾ 03: ಉನ್ನತ ಹುದ್ದೆಗೆ ಹೋಗಲು? ಹಾಗೂ ಸಾಧನೆ ಮಾಡಲು ಆ ವ್ಯಕ್ತಿಯ ಆಸಕ್ತಿ ಮುಖ್ಯವಾಗುತ್ತದೆ ಎಂದು ಬೆಂಗಳೂರಿನ ಆಲ್ಮಾ ಮೀಡಿಯಾ ಸಂಸ್ಥಾಪಕ ? ಸುದ್ಧಿ ನಿರೂಪಕ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತರಾದ ಗೌರೀಶ ಅಕ್ಕಿಯವರು ಹೇಳಿದರು. ತಾಲೂಕಿನ ಮುಧೋಳ ಗ್ರಾಮದ ಶ್ರೀ ತ್ರಿಲಿಂಗೇಶ್ವರ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮೊಬೈಲನೆಂಬ ಆಯುಧ ಒಳ್ಳೆಯದಕ್ಕೂ ಇದೆ ಕೆಟ್ಟದಕ್ಕೂ ಇದೆಅದರ ಸದುಪಯೋಗ ಮಾಡಿಕೊಳ್ಳಿಎಂದು ವಿದ್ಯಾರ್ಥಿಗಳಿಗೆ ಕರೆ ನೀಡುತ್ತಾ ತಮ್ಮದೆ ಆದ ಸ್ಥಾನಮಾನಗಳಿಂದ ಗೌರವ ಬರಬೇಕಾದರೆ ತಮ್ಮ ವ್ರತ್ತಿಯಲ್ಲಿ ಶ್ರದ್ಧೆ ? ಪ್ರಾಮಣಿಕತೆ ಮುಖ್ಯವಾಗಿರುತ್ತವೆ ಅಂತಹ ನಡಾವಳಿಕೆಯನ್ನು ತಾವು ರೂಢಿಸಿಕೊಳ್ಳ ಬೇಕಾಗಿದೆ . ಆಕರ್ಷಣೆಗೆ ಬಲಿಯಾಗದೆ ಆದರ್ಶಕ್ಕೆ ಮಾರು ಹೋಗಬೇಕು ನಮ್ಮ ಗೆಳೆಯರ ಸಂಪರ್ಕ ಒಳ್ಳೆಯದಾಗಿರಲಿಚಿಕ್ಕ ವಿಚಾರಗಳಿಗೆ ಆಸ್ಪದ ಮಾಡಿ ಮನಸ್ಥಾಪ ಮಾಡಿಕೊಳ್ಳಬೇಡಿಸಾಧ್ಯವಾದರೆ ಒಳ್ಳೆ ಕೆಲಸ ಮಾಡಿ ಕೆಟ್ಟ ಕೆಲಸಕ್ಕೆ ಎಂದೂ ಮನಸ್ಸು ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು . ಪಾಲಕರು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು ಆದರೆ ಮಕ್ಕಳು ತೆಗೆದು ಕೊಳ್ಳುವ ನಿರ್ಧಾರಕ್ಕೆ ಅಡ್ಡಗಲ್ಲು ಹಾಕಬೇಡಿ ಎಂದರು ಮಕ್ಕಳಲ್ಲಿರುವ ಸೂಪ್ತ ಪ್ರತಿಭೆ ಯನ್ನು ಹೊರತರಲು ಹೆತ್ತವರು ಸಹಕರಿಸಬೇಕು ಅಂದಾಗ ಆ ಮಕ್ಕಳ ಸರ್ವಾಂಗೀಣ ಅಭಿವ್ರದ್ಧಿ ಆಗುವಲ್ಲಿ ಎರಡು ಮಾತಿಲ್ಲ ಎಂದರು.ಸಣ್ಣ ಪುಟ್ಟ ಕಷ್ಟಗಳು ಎಲ್ಲರಿಗೂ ಇರಬಹುದು ಆದರೆ ಅವುಗಳ ನೆಪದಲ್ಲಿ ನಮ್ಮ ಬಾಳಿನಲ್ಲಿ ಹಿನ್ನಡೆ ಆಗಕೂಡದು ? ಕಷ್ಟಗಳನ್ನ ಸವಲಾಗಿ ಸ್ವೀಕರಿಸಿ ಜೀವನವನ್ನು ಪಾವನ ಮಾಡಿಕೊಳ್ಳ ಬೇಕು "ನಿಮ್ಮ ಪಾದದ ಧೂಳ ನನ್ನ ತಲೆ ಮೇಲೆ ಇರಲಿ ಆದರೆ ಕಣ್ಣುಗಳ ಮೇಲೆ ಬೀಳದಿರಲಿ" ಎನ್ನುವ ಕವಿವಾಣಿಯನ್ನು ಸ್ಮರಿಸುತ್ತಾ ಸಂಕುಚಿತತೆಯಿಂದ ಹೊರ ಬಂದಾಗ ಉನ್ನತಿಗೆ ಬರಬೇಕು ಆ ದಿಶೆಯಲ್ಲಿ ಆತ್ಮ ವಿಶ್ವಾಸ ಹೊಂದಿರಿ ಎಂದರುಒಳ್ಳೆ ಮೌಲ್ಯಗಳಿಂದ ಒಳ್ಳೆ ಸಮಾಜ ಕಟ್ಠಿರಿ ಎಂದರು. ವಿಧಾನ ಪರಿಷತ ಸದಸ್ಯರಾದ ಶಶೀಲ್ ನಮೋಶಿ ಮಾತನಾಡಿ ಐದು ಲಕ್ಷ ಅನುದಾನ ತ್ರಿಲಿಂಗೇಶ್ವರ ಶಾಲೆಗೆ ಕೊಡುವದಾಗಿ ಘೋಷಿಸಿದರು.ಶಿವಶರಣಪ್ಪ ಬಳಿಗಾರ ನಿರೂಪಿಸಿದರುಅಮರಯ್ಯ ವಂದಿಸಿದರುಪ್ರಕಟಣೆಯ ಕ್ರಪೆಗೆವೀರಣ್ಣ ನಿಂಗೋಜಿ9008585482
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 