ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ: 24 ಮೋಟಾರ ಸೈಕಲ್ ವಶ
Inter-district bike thief arrested: 24 motorcycles seized
ಜಮಖಂಡಿ 19: ಅಂತರ್ ಜಿಲ್ಲಾ ಬೈಕ್‌ಗಳ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಭರ್ಜರಿ ಬೇಟೆಯಾಡಿದ ಶಹರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಮದುರಖಂಡಿ ಗ್ರಾಮದ ಲಕ್ಕಪ್ಪ ಬೋರವ್ವ ಮಾದರ ಬಂಧಿತ ಆರೋಪಿಯು ಸುಮಾರು 11 ಲಕ್ಷ ಮೌಲ್ಯದ ವಿವಿಧ ಕಂಪನಿಯ ಒಟ್ಟು 24 ಮೋಟಾರ ಸೈಕಲ್‌ಗಳನ್ನು ಕಳ್ಳತನ ಮಾಡಿದನ್ನು ವಶಪಡಿಸಿಕೊಂಡು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಎಸ್,ಪಿ, ಸಿದ್ದಾರ್ಥ ಗೋಯಲ್ ತಿಳಿಸಿದರು.
ನಗರದ ಶಹರ ಪೋಲಿಸ್ ಠಾಣೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳಿನಲ್ಲಿ ಒಟ್ಟು 46 ಮೋಟಾರ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮೋಟಾರು ಸೈಕಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಸಿಬ್ಬಂದಿ ವರ್ಗದವರು ಕಠಿಣ ಶ್ರಮವಹಿಸಿದ್ದಾರೆ ಎಂದರು.
ಸಿದ್ದಾಪೂರ ಗ್ರಾಮದ ಯಲ್ಲಪ್ಪ ಭೀಮಪ್ಪ ಕಾಗವಾಡ ಇವರು ತಮ್ಮ ಮೋಟಾರ ಸೈಕಲ್ ಕಳುವಾದ ಬಗ್ಗೆ ನೀಡಿದೆ ಲಿಖಿತ ದೂರನ್ನು ಆಧರಿಸಿ ಸಿಸಿ ಕ್ಯಾಮರಾ, ಟೆಕ್ನಿಕಲ್, ಮೊಬೈಲ್ ಟಾವರ್ ಆದರಿಸಿ ಕೇವಲ ಒಂದೇ ಬೈಕ್ ಕಳವು ಅಧಾರಗಿಟ್ಟುಕೊಂಡು ವಿವಿಧ ಜಿಲ್ಲೆ ತಾಲೂಕು ಕೇಂದ್ರಗಳಲ್ಲಿ ಕಳುವಾದ ಬೈಕ್ ವಿವರ ಪಡೆದು ಆಪಾದಿತನಿಂದ 24 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಯು ಬಾಗಲಕೋಟ ಜಿಲ್ಲೆಯ ಜಮಖಂಡಿ ಶಹರ, ಮುಧೋಳ, ಲೋಕಾಪೂರ, ಬನಹಟ್ಟಿ ಹಾಗೂ ಬೆಳಗಾವಿ ಜಿಲ್ಲೆ ಮೂಡಲಗಿ, ಮುರಗೋಡ, ಸವದತ್ತಿ ಮತ್ತು ವಿಜಯಪೂರ ಜಿಲ್ಲೆಯ ಗಾಂಧಿಚೌಕ್, ಬಬಲೇಶ್ವರ, ಬಸವನ ಬಾಗೇವಾಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿದ್ದಾನೆ. ಸುಮಾರು ಅಂದಾಜು 11 ಲಕ್ಷ ಕಿಮ್ಮತ್ತಿನ, ವಿವಿಧ ಕಂಪನಿಯ ಒಟ್ಟು 24 ಮೋಟಾರ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಹೆಚ್ಚುವರಿ ಎಸ್,ಪಿ,ಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ, ಜಮಖಂಡಿ ಡಿಎಸ್‌ಪಿ, ಎಸ್ ರೋಷನ್ ಜಮೀರ್ ಮಾರ್ಗದರ್ಶನದಲ್ಲಿ ಸಿಪಿಐ ಮಲ್ಲಪ್ಪ ಮಡ್ಡಿ ನೇತೃತ್ವದಲ್ಲಿ ಶಹರ ಪಿಎಸ್‌ಐ, ಗಳಾದ ಅನೀಲ ಕುಂಬಾರ, ಕ್ರೈಂ, ಪಿಎಸ್‌ಐ, ಎನ್. ಕೆ. ಕಾಜಗಾರ ಹಾಗೂ ಸಿಬ್ಬಂದಿಗಳಾದ ಸಂಗಪ್ಪ ಕೋಟಿ, ಪರಶುರಾಮ ಘಾಟಗೆ, ಪ್ರಕಾಶ ಹೊಸಮನಿ, ಮುತ್ತಪ್ಪ ಮಾಂಗ, ನಾಗರಾಜ ಬಿಸಲದಿನ್ನಿ, ರಾಜು ಪೂಜೇರಿ, ರಾಜಶೇಖರ ಮನಗೂಳಿ ಅವರನ್ನೊಳಗೊಂಡ ತಂಡ ರಚನೆ ಮಾಡಿ, ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯ ವೈಖರಿಯನ್ನು ಶ್ಲಾಘಿಸಿ ಸೂಕ್ತ ಬಹುಮಾನವನ್ನು ಘೋಷಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿಎಸ್‌ಪಿ, ಎಸ್ ರೋಷನ್ ಜಮೀರ, ಸಿಪಿಐಗಳಾದ ಮಲ್ಲಪ್ಪ ಮಡ್ಡಿ, ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್‌ಐ ಗಳಾದ ಅನೀಲ ಕುಂಬಾರ, ನಾಗರಾಜ ಕಾಜಗಾರ, ಗ್ರಾಮೀಣ ಪಿಎಸ್‌ಐ, ಗಂಗಾಧರ ಪೂಜೇರಿ, ಸಾವಳಗಿ ಪಿಎಸ್‌ಐ, ಅಪ್ಪಣ್ಣ ಐಗಳಿ, ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 