ಅಂತರ ವಿಜ್ಞಾನ ಮೇಳ ಉದ್ಘಾಟನೆ: ಹೆಚ್‌.ಎನ್‌.ಮೊಹಮ್ಮದ್

ಅಂತರ ವಿಜ್ಞಾನ ಮೇಳ ಉದ್ಘಾಟನೆ: ಹೆಚ್‌.ಎನ್‌.ಮೊಹಮ್ಮದ್ Inter-Science Fair inaugurated by: H.N. Mohammed


ಹೊಸಪೇಟೆ 29:  ಹೊಸಪೇಟೆ ನಗರದ ಅಂಜುಮನ್ ಶಾದಿಮಹಲ್ ಸಭಾಂಗಣದಲ್ಲಿ ಹೊಸಪೇಟೆ  ಅಂತರ ಶಾಲಾ ವಿಜ್ಞಾನ ಮೇಳ -2025ನ್ನು ಆಯೋಜಿಸಲಾಗಿತ್ತು. ಈ ಮೇಳವು ವಿದ್ಯಾರ್ಥಿಗಳ ವೈಜ್ಞಾನಿಕ ಪ್ರತಿಭೆ ಮತ್ತು ಸಂಶೋಧನಾ ಯೋಜನೆಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಯಿತು. ನಗರದ ಮಸ್ಜೀದೆ ಎ ತಾಹೇಬಾ ಮತ್ತು ಎಜೆ ಅಕಾಡೆಮಿ ಆಫ್ ರಿಸರ್ಚ್‌ ಅಂಡ್ ಡೆವಲಪ್‌ಮೆಂಟ್ ಸಂಸ್ಥೆಗಳು ಸೇರಿ ಈ ವಿಜ್ಞಾನ ಮೇಳವನ್ನು ಆಯೋಜಿಸಿದ್ದವು. 

ಈ ವಿಜ್ಞಾನ ಮೇಳದಲ್ಲಿ ಒಟ್ಟು 20 ಶಿಕ್ಷಣ ಸಂಸ್ಥೆಗಳಿಂದ 56 ವಿದ್ಯಾರ್ಥಿ ತಂಡಗಳು ಭಾಗವಹಿಸಿದ್ದವು. ಪ್ರತಿಯೊಂದು ತಂಡವು ತಮ್ಮದೇ ಆದ ಸಂಶೋಧನಾ ಆಧಾರಿತ ಯೋಜನೆಗಳು ಮತ್ತು ಹೊಸ ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸುವುದು, ಮತ್ತು ವಿಷಯಗಳನ್ನು ವಿಶ್ಲೇಷಣೆ ಮಾಡಿ ಯೋಚಿಸುವ ಸಾಮರ್ಥ್ಯವನ್ನು ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿತ್ತು. ಸಂಘಟಕರು ತಿಳಿಸಿದಂತೆ, ಕೇವಲ ಮಾದರಿಗಳ ಬದಲಿಗೆ, ವಿಜ್ಞಾನ ಮೇಳವು ದತ್ತಾಂಶ, ಮಾದರಿಗಳು ಮತ್ತು ಪ್ರಯೋಗಗಳ ಮೂಲಕ ಸಂಶೋಧನಾ ಕೆಲಸಗಳಿಗೆ ಹೆಚ್ಚಿನ ಮಹತ್ವ ನೀಡಿತು. 

ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಹೆಚ್‌.ಎನ್‌.ಮೊಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ, ಸಂಶೋಧನಾತ್ಮಕ ಮತ್ತು ಪ್ರಶ್ನೆಗಳನ್ನು ಕೇಳುವ ಮನೋಭಾವ ಬೆಳೆಸುವ ಶಿಕ್ಷಣದ ಅಗತ್ಯ ಇದೆ ಎಂದು ಹೇಳಿದರು. ಕೇವಲ ಪಾಠಗಳನ್ನು ಓದುವ ಬದಲು ಇಂತಹ ಮೇಳಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಗೆಡುವ ಸಾಧ್ಯವಾಗುತ್ತದೆ, ಇಲ್ಲಿ ಮಕ್ಕಳು ಭಾಗವಹಿಸುವುದರಿಂದ ಅವರಲ್ಲಿ ಮತ್ತಷ್ಟು ಸ್ಪೂರ್ತಿ ದೊರೆಯುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮೊಹಮದ್ ಅಲಿ ಅಕ್ರಂ ಷಾ ನೊಂಗ್ಜಾಯ್ ರವರು ಮಾತಾನಾಡಿ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಕಾರ್ಯದಲ್ಲಿ ಸ್ವಂತಿಕೆ ಮತ್ತು ಸರಿಯಾದ ಕ್ರಮಬದ್ಧ ವಿಧಾನ ಅನುಸರಿಸಬೇಕು, ಮಕ್ಕಳ ಕಲಿಕೆಯ ಅನುಭವಗಳಲ್ಲಿ ವಿಜ್ಞಾನ ಮತ್ತು ನಾವೀನ್ಯತೆಯನ್ನು ಸಂಯೋಜಿಸುವ ಮಹತ್ವವನ್ನು ತಿಳಿ ಹೇಳಿದರು.   ಈ ಕಾರ್ಯಕ್ರಮದಲ್ಲಿ ಅಯೋಜಕರಾದ ಎಜೆ ಅಕಾಡೆಮಿ ನಿರ್ದೇಶಕರಾದ ಮೊಹಮ್ಮದ್ ಅಬ್ದುಲ್ ಜಾವೀದ್, ಹೊಸಪೇಟೆ ಇಂಟರ್ ಸ್ಕೂಲ್ ಸೈನ್ಸ್‌ ಫೇರ್ ಸಂಯೋಜಕರಾಧ ಸೈಯ್ಯದ್ ಫಿರೋಜ್ ಪೀರಾನ್, ಮಜೀದ್ ಎ ತಾಹೇಬ್ ಕಮಿಟಿಯ ಉಪಾಧ್ಯಕ್ಷರಾದ ಡಿ.ಯೂನಸ್, ಕಾರ್ಯದರ್ಶಿಗಳಾದ ಅಬ್ದುಲ್ ಅಮೀದ್ ಷಾ, ಯೂನಸ್, ಅಬ್ದುಲ್ ಷಾ ಭಾಗವಹಿಸಿದ್ದರು.