ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
Intense lobbying for Rajya Sabha seat in Belgaum: Kadadi's term ends: Many leaders in the forefront
ಪಾರೇಶ ಭೋಸಲೆ
ಬೆಳಗಾವಿ : ಸದ್ಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಅಧಿಕಾರವಧಿ ಇದೇ ಜೂನ್ ತಿಂಗಳಲ್ಲಿ ಕೊನೆ ಆಗುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯಸಭಾ ಸದಸ್ಯ ಸ್ಥಾನಕ್ಕಾಗಿ ಲಾಬಿ ಜೋರಾಗಿದ್ದು, ಪ್ರಭಾಕರ್ ಕೋರೆ, ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಹಲವು ಮುಖಂಡರು ರಾಜ್ಯಸಭೆಗೆ ಹೋಗಲು ಮುಂಚೂನೆಯಲ್ಲಿ ಇದ್ದಾರೆ ಎನ್ನುವ ಚರ್ಚೆ ಈಗ ಜಿಲ್ಲೆಯಲ್ಲಿ ಜೋರಾಗಿದೆ.
ಹೌದು ಓದುಗರೇ….... ಕಳೆದ 25ರ ಜೂನ್ 2020ರಲ್ಲಿ ಈರಣ್ಣ ಕಡಾಡಿ ಅವರಿಗೆ ಒಲಿಯದ ಬಂದ ಭಾಗ್ಯ ಎಂಬAತೆ ಈರಣ್ಣ ಕಡಾಡಿ ಅವರು ಬಿಜೆಪಿ ಪಕ್ಷದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಬಿಜೆಪಿ ಪಕ್ಷದ ವರಿಷ್ಠರು ಬೆಳಗಾವಿ ಜಿಲ್ಲೆಯ ಯಾವ ಮುಖಂಡರ ಅಭಿಪ್ರಾಯವನ್ನು ಕೇಳದೆ ಈರಣ್ಣ ಕಡಾಡಿ ಅವರ ಹೆಸರು ಘೋಷಣೆ ಮಾಡಿದ್ದರು.
ಆದರೆ ಬರುವ ಇದೇ 25 ಜೂನ್ 2026ರಂದು ಈರಣ್ಣ ಕಡಾಡಿ ಅವರ ರಾಜ್ಯಸಭೆ ಸದಸ್ಯ ಸ್ಥಾನದ ಅಧಿಕಾರವಾಧಿ ಕೊನೆಯಾಗಲಿದ್ದು, ಪಕ್ಷದ ವರಿಷ್ಠರು ಈರಣ್ಣ ಕಡಾಡಿ ಅವರನ್ನು ಮತ್ತೊಂದು ಅವಧಿಗೆ ಮುಂದೆವರೆಸುತ್ತಾರೋ ಅಥವಾ ಮತ್ತೆ ಬೇರೆ ಮುಖಂಡನಿಗೆ ಅವಕಾಸ ನೀಡುತ್ತಾರೆ ಎನ್ನುವದು ಈಗ ಯಕ್ಷ ಪ್ರಶ್ನೆಯಾಗಿದೆ.
ಅದರ ಜೊತೆಗೆ ಈಗ ಮಾಜಿ ಸಂಸದರಾದ ಪ್ರಭಾಕರ್ ಕೋರೆ ಹಾಗೂ ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ ಅವರುಗಳು ಸೇರಿದಂತೆ ಜಿಲ್ಲೆಯ ಇನ್ನೂ ಕೆಲವು ಬಿಜೆಪಿ ಮುಖಂಡರು ರಾಜ್ಯಸಭಾ ಸದಸ್ಯ ಸ್ಥಾನಕ್ಕಾಗಿ ಪ್ರಯತ್ನ ನಡೆಸಿದ್ದಾರೆ ಎನ್ನುವ ಮಾತು ಈಗ ದಟ್ಟವಾಗಿ ಕೇಳಿಬರುತ್ತಿದೆ. ಕೆಲವು ಬೆಳಗಾವಿ ಜಿಲ್ಲೆಯ ಮುಖಂಡರು ಬಿಜೆಪಿ ವರಿಷ್ಠರ ಮುಂದೆ ರಾಜ್ಯಸಭೆ ಸದಸ್ಯ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ ಎನ್ನುವ ಮಾತು ಕೂಡಾ ಕೇಳಿಬರತೊಡಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸಂಸತ್ತ ಪ್ರವೇಶ ಮಾಡಲು ಕೆಲವು ಮುಖಂಡರು ತೆರೆಯಮರೆಯಲ್ಲಿ ದೆಹಲಿ ಪರೇಡ್ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಇವೆಲ್ಲದರ ನಡುವೆ ಬಿಜೆಪಿ ವರಿಷ್ಠರ ಒಲವು ಯಾರ ಕಡೆಗೆ ವಾಲಲಿದೆ ಎನ್ನುವದನ್ನು ಕಾಲವೇ ನಿರ್ಧರಿಸಬೇಕಿದೆ.
ಜನರ, ಪಕ್ಷಕ್ಕಾಗಿ ಸೇವೆ ಮಾಡಿದ ತೃಪ್ತಿ ನನಗಿದೆ : ಕಡಾಡಿ
ನನ್ನ ಪಕ್ಷನಿಷ್ಠೇ ಹಾಗೂ ಪ್ರಾಮಾಣಿಕತನದಿಂದ ಪಕ್ಷಕ್ಕಾಗಿ ನಾನು ಮಾಡಿದ ಕಾರ‍್ಯವನ್ನು ಗುರುತಿಸಿ ಕಳೆದ 25 ಜೂನ 2020ರಲ್ಲಿ ಪಕ್ಷದ ವರಿಷ್ಠರು ನನ್ನ ರಾಜ್ಯ ಸಭೆ ಸದಸ್ಯನನ್ನಾಗಿ ಮಾಡಿ ದೆಹಲಿಯತ್ತ ನನ್ನ ರಾಜಕೀಯ ಜೀವನ ಸಾಗುವಂತೆ ಮಾಡಿದ್ದಾರೆ. ಪಕ್ಷದ ವರಿಷ್ಠರ ಮಾರ್ಗದರ್ಶನದಲ್ಲಿ ಕಳೆದ 5 ವರ್ಷದ ಅವಧಿಯಲ್ಲಿ ಪಕ್ಷಕ್ಕಾಗಿ ದುಡಿಯುವದರ ಜೊತೆಗೆ ಜನಸೇವೆ ಮಾಡಿದ್ದೇನೆ ಎನ್ನುವ ತೃಪ್ತಿ ನನಗಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಹೇಳಿದ್ದಾರೆ.
ಲೋಕದರ್ಶನದ ಜೊತೆ ಮಾತನಾಡಿರುವ ಅವರು, ಜಿಲ್ಲೆಯ ಜನರ ಸಂಕಷ್ಟಗಳನ್ನು ನಿವಾರಣೆ ಮಾಡಲು ತಾವು ರಾಜ್ಯಸಭೆಯಲ್ಲಿ ಧ್ವನಿ ಎತ್ತು ಮೂಲಕ ಜನರ ಕಷ್ಟದಲ್ಲಿ ಭಾಗಿಯಾಗಿದ್ದೇನೆ. ಬೆಳಗಾವಿ ಜಿಲ್ಲೆಯ ಜನರ ಧ್ವನಿಯಾಗಿ ಸಂಸತ್ತಿನಲ್ಲಿ ಮಾತನಾಡಿದ್ದೇನೆ. ಜನರ ಕಷ್ಠ, ಸಮಸ್ಯೆಗಳನ್ನು ಕೊಂಡೊಯ್ದು ಸಂಸತ್ತಿನಲ್ಲಿ ಸರಕಾರಮಟ್ಟದಲ್ಲಿ ಚರ್ಚೆಗೆ ಹಾಕಿದ್ದೇನೆ ಎನ್ನುವ ತೃಪ್ತಿ ನನಗಿದೆ. ಅದೇ ರೀತಿಯಾಗಿ ಪಕ್ಷದ ವರಿಷ್ಠರು ನನಗೆ ಕಳೆದ ಐದು ವರ್ಷದಲ್ಲಿ ನೀಡಿರುವ ಜವ್ದಾರಿಯನ್ನು ಸರಿಯಾಗಿ ನಿಭಾಯಿಸುವ ಮೂಲಕ ಪಕ್ಷದ ಹಿತಕ್ಕಾಗಿ ಕೂಡಾ ಐದು ವರ್ಷದಲ್ಲಿ ಕೆಲಸ ಮಾಡಿದ್ದೇನೆ ಎನ್ನುವ ತೃಪ್ತಿ ನನಗಿದೆ ಎಂದು ಕಡಾಡಿಯವರು ಹೇಳಿದ್ದಾರೆ.
ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ದ : ನನ್ನ ಅಧಿಕಾರಾವಧಿಯುವ ಬರುವ ಇದೇ 25 ಜೂನ್ 2026ರಂದು ಕೊನೆಗೊಳ್ಳಲಿದ್ದು, ಪಕ್ಷದ ವರಿಷ್ಠರು ನನ್ನನ್ನೆ ರಾಜ್ಯಸಭಾ ಸದಸ್ಯರನ್ನಾಗಿ ಮುಂದೆ ವರಿಸಿದರೆ ಮುಂದೆ ವರೆಯುತ್ತೇನೆ. ಅಥವಾ ಬೇರೆ ಇನ್ನಾರಿಗೆ ನೀಡಿದರೂ ಸಹಕಾರ ನೀಡುತ್ತೇನೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಲೋಕದರ್ಶನಕ್ಕೆ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 