ಲಾರಿ ಚಾಲಕರಿಗೆ ವಿಮಾ ಯೋಜನೆ
Insurance scheme for lorry drivers
ಬೆಳಗಾವಿ 13 : ಟ್ರಕ್ ಚಾಲಕರ ಸುರಕ್ಷತೆ, ಆರೋಗ್ಯ ಮತ್ತು ಸಾಮಾಜಿಕ ಗೌರವವನ್ನು ಕೇಂದ್ರಬಿಂದುವಾಗಿ ಹೊಂದಿರುವ ‘ಅಭಯ ಸಾರಥಿ’ ಕಾರ್ಯಕ್ರಮವನ್ನು ಐಐಟಿ ದೆಹಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಫೋರ್‌ಸೈಟ್ ಫೌಂಡೇಶನ್, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಹಾಗೂ ಎನ್‌ಎಚ್‌ಐಟಿ ಹತ್ತರಗಿ ಟೋಲ್ ಪ್ಲಾಜಾ (ವಿ್ಲ್ಢೂವಿಸ್ಲಹಿ48) ಇವರ ಸಹಯೋಗದಲ್ಲಿ ಸ್ಥಳೀಯ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ ಟ್ರಕ್ ಚಾಲಕರಿಗಾಗಿ ‘ಅಭಯ ಹೆಲ್ತ್ ಕ್ಯಾಂಪ್’ ಎಂಬ ಹೆಸರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ಪರೀಕ್ಷೆಯ ಜೊತೆಗೆ ಟೆಲಿ-ಮೆಡಿಸಿನ್ ಸೌಲಭ್ಯ, ಕಣ್ಣುಗಳ ತಪಾಸಣೆ ಹಾಗೂ ಅಗತ್ಯವಿದ್ದಲ್ಲಿ ಸ್ಥಳದಲ್ಲೇ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಗುತ್ತದೆ.
ಇದಲ್ಲದೆ ಟ್ರಕ್ ಚಾಲಕರಿಗೆ ಆರೋಗ್ಯ ವಿಮೆ (ಇನ್ಷುರನ್ಸ್) ಕುರಿತು ಮಾಹಿತಿ, ಅರ್ಹತೆಗೆ ಅನುಗುಣವಾಗಿ ಲಭ್ಯವಿರುವ ವಿವಿಧ ಸರ್ಕಾರಿ ಮತ್ತು ಖಾಸಗಿ ಪ್ರಯೋಜನಗಳ ವಿವರಗಳನ್ನು ನೀಡಲಾಗುತ್ತದೆ. ಜೊತೆಗೆ ‘ಸಾರಥಿ ಸಾಥಿ’ ಮೊಬೈಲ್ ಆ್ಯಪ್‌ನಲ್ಲಿ ನೋಂದಣಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಆ್ಯಪ್ ಮೂಲಕ ಟ್ರಕ್ ಚಾಲಕರು ಪರಸ್ಪರ ಸಂಪರ್ಕ ಸಾಧಿಸುವುದರ ಜೊತೆಗೆ ತಮ್ಮ ಮಕ್ಕಳನ್ನು ಉಚಿತ ಕೌಶಲ್ಯಾಭಿವೃದ್ಧಿಗೆ ಅಮೂಲ್ಯ ಅವಕಾಶವೂ ಪಡೆಯಬಹುದು.
ಈ ಉಚಿತ ಆರೋಗ್ಯ ಶಿಬಿರದ ಉಪಯೋಗ ಪಡೆಯಲು ಕೂಡಲೇ ಹತ್ತರಗಿ ಟೋಲ್ ಪ್ಲಾಜಾ (ವಿ್ಲ್ಢೂವಿಸ್ಲಹಿ48) ಸಮೀಪದಲ್ಲಿ ಪಡೆಯಬಹುದು. ಶಿಬಿರದಲ್ಲಿ ನೋಂದಣಿ ಮಾಡಲು ಟ್ರಕ್ ಚಾಲಕರು ಮಾನ್ಯವಾದ ಹೆವಿ ವಾಹನ ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯವಾಗಿರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಟ್ರಕ್ ಚಾಲಕರು ಭಾಗವಹಿಸಿ ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 