ಹಾವೇರಿ ಜ.16: ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮ ಫೆ. 10 ರಂದು ನಡೆಯಲಿದ್ದು, ಅಂದು ಜಿಲ್ಲೆಯಲ್ಲಿನ 1 ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ .ತಪ್ಪದೇ ಜಂತುಹುಳು ನಿವಾರಣಾ ಮಾತ್ರೆ(ಅಲ್ಬೆಂಡಾಜೋಲ್) ನುಂಗಿಸುವ ಮೂಲಕ ಜಂತುಹುಳು ಸೋಂಕು ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಅಂಗನವಾಡಿ ಮಕ್ಕಳು, ಸಕರ್ಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾಥರ್ಿಗಳು, ಪದವಿ ಪೂರ್ವ ಕಾಲೇಜುಗಳು, ತಾಂತ್ರಿ ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ ದಾಖಲಾದ ಮಕ್ಕಳಿಗೆ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಮಾತ್ರೆಗಳನ್ನು ಕಡ್ಡಾಯವಾಗಿ ನುಂಗಿಸಬೇಕು. ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮದಂದು ಗೈರಾದ ಹಾಗೂ ಅನಾರೋಗ್ಯದಿಂದ ಮಾತ್ರೆಗಳನ್ನು ಸ್ವೀಕರಿಸದೇ ಇರುವ ಮಕ್ಕಳಿಗೆ ಫೆಬ್ರುವರಿ 17 ರಂದು ಮನೆ ಮನೆ ಭೇಟಿ ಸಂದರ್ಭದಲ್ಲಿ ಮಾತ್ರೆಗಳನ್ನು ನೀಡಿ ನುಂಗಲು ತಿಳಿಸಬೇಕು ಹಾಗೂ ಜಂತುಹುಳುಗಳಿಂದ ಉಂಟಾದಗುವ ದುಷ್ಪರಿಣಾಗಳ ಕುರಿತು ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಕೈಗಾರಿಕಾ ತರಬೇತಿ ಕೇಂದ್ರಗಳು, ಬಾಲಮಂದಿರಗಳು, ವಿಶೇಷ ಅಗತ್ಯತೆಯುಳ್ಳ ಮಕ್ಕಳ ಕೇಂದ್ರಗಳು, ಇಟ್ಟಿಗೆ ಭಟ್ಟಿಗಳು ಮತ್ತು ವಲಸೆ ಕಾಮರ್ಿಕ ಮಕ್ಕಳನ್ನು ಈ ಕಾರ್ಯಕ್ರಮದಡಿ ಸೇರಿಸಿಕೊಳ್ಳಿ ಹಾಗೂ ಕೇಂದ್ರೀಯ ವಿದ್ಯಾಲಯ ಹಾಗೂ ನವೋದಯ ವಿದ್ಯಾಲಯಗಳನ್ನು ತೊಡಗಿಸಿಕೊಳ್ಳಬೇಕು. ಈ ಕಾರ್ಯಕ್ರಮದ ಕುರಿತು ಗೋಡೆಬರಹ, ಧ್ವನಿವರ್ಧಕ, ಶಾಲಾ ಮಕ್ಕಳಿಂದ ಪ್ರಭಾತಪೇರಿ ಆಯೋಜಿಸಿ ಜಾಗೃತಿ ಮೂಡಿಸಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕತರ್ೆಯರಿಗೆ ಮಾಸಿಕ ಸಭೆಗಳಲ್ಲಿ ಮಾಹಿತಿ ನೀಡಿ. ಶಾಲೆಯಿಂದ ಹೊರಗಳಿದ ಮಕ್ಕಳ ಸಮುದಾಯ ಸಜ್ಜುಗೊಳಿಸಲು ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.
ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ ಅವರು ಮಾತನಾಡಿ, ಜಿಲ್ಲೆಯ 1 ರಿಂದ 19 ವರ್ಷದೊಳಗಿನ 5,60,794 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ (ಅಲ್ಬೆಂಡಾಜೋಲ್) ನೀಡುವ ಗುರಿ ಹಾಕಿಕೊಳ್ಳಲಾಗಿದೆ. 5,60,794ಗಳ ಅವಶ್ಯಕತೆ ಇದ್ದು ಈಗಾಗಲೇ ದಾಸ್ತಾನು ಮಾಡಿಕೊಳ್ಳಲಾಗಿದೆ. 1 ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ 3 ರಿಂದ 19 ವರ್ಷದ ಮಕ್ಕಳಿಗೆ ಒಂದು ಪೂತರ್ಿ ಮಾತ್ರೆ ನುಂಗಿಸಲಾಗುವುದು. ಅನಾರೋಗ್ಯದ ಮಕ್ಕಳಿಗೆ ಹಾಗೂ ಇತರೆ ಔಷಧಿ ಸೇವಿಸುತ್ತಿರುವ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆಯನ್ನು ನುಂಗಿಸುವುದಿಲ್ಲ. ಈ ಕಾರ್ಯಕ್ರಮದಿಂದ ಕೈಬಿಟ್ಟು ಹೋದ ಮಕ್ಕಳಿಗೆ ಫೆಬ್ರುವರಿ 17 ರಂದು ಮನೆ ಮನೆ ಭೇಟಿ ಸಂದರ್ಭದಲ್ಲಿ ಮಾತ್ರೆ ನುಂಗಿಸಲಾಗುವುದು. ಯಾವುದೇ ವೈದ್ಯಕೀಯ ಸಹಾಯಕ್ಕೆ 104ಕ್ಕೆ ಕರೆಮಾಡಬಹುದು ಅಥವಾ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬಹುದು. 55504 ಸಕರ್ಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ, 16,435 ಖಾಸಗಿ ಶಾಲಾ ಶಿಕ್ಷಕರಿಗೆ, 63,963 ಅಂಗನವಾಡಿ ಹಾಗೂ 40,621 ಆಶಾ ಕಾರ್ಯಕತರ್ೆಯರಿಗೆ ಕಾರ್ಯಕ್ರಮದ ಕುರಿತು ತರಬೇತಿ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸೆಪ್ಟೆಂಬರ್ -2019ರ ಮಾಹೆಯಲ್ಲಿ ಜರುಗಿದ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ 1 ರಿಂದ 19 ವರ್ಷದೊಳಗಿನ 1,63,03,326 ಮಕ್ಕಳ ಗುರಿ ಹಾಕಿಕೊಳ್ಳಲಾಗಿತ್ತು. 1,58,04,524 ಮಕ್ಕಳು ಜಂತುಹುಳು ಮುಕ್ತರಾಗಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯಕ್, ಜಿಲ್ಲಾ ವಾತರ್ಾಧಿಕಾರಿ ಡಾ.ಬಿ.ಆರ್.ರಂಗನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ, ವಿವಿಧ ಆರೋಗ್ಯ ಇಲಾಖಾ ಅಧಿಕಾರಿಗಳು, ವೈದ್ಯರು, ನಗರ ಸ್ಥಳೀಯ ಮತ್ತು ಗ್ರಾಮೀಣ ಸಂಸ್ಥೆಗಳ ಅಧಿಕಾರಿಗಳು, ತಹಶೀಲ್ದಾರಗಳು ಉಪಸ್ಥಿತರಿದ್ದರು.