ಹುಣಶೀಕಟ್ಟಿಯಲ್ಲಿ ರುದ್ರಮುನಿ ಶಿವಯೋಗಿ ಮಠದ ಶಿಲಾಮೂರ್ತಿ ಪ್ರತಿಷ್ಠಾಪನೆ

ಹುಣಶೀಕಟ್ಟಿಯಲ್ಲಿ ರುದ್ರಮುನಿ ಶಿವಯೋಗಿ ಮಠದ ಶಿಲಾಮೂರ್ತಿ ಪ್ರತಿಷ್ಠಾಪನೆ  Installation of the stone idol at Rudramuni Shivayogi Matha in Hunashikatti

ಹುಣಶೀಕಟ್ಟಿ 16 : ಗ್ರಾಮದ ರುದ್ರಮುನಿ ಶಿವಯೋಗಿ ಮಠದಲ್ಲಿ ನೂತನ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಧರ್ಮಸಭೆ ಭಕ್ತಿಭಾವದಿಂದ ನಡೆಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾಗವಹಿಸಿ, ದೇವರು ಹಾಗೂ ಧರ್ಮಗುರುಗಳ ಆಶೀರ್ವಾದದಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ಹೇಳಿದರು.  

ಮಠ-ಮಂದಿರಗಳು ಪೂಜಾ ಸ್ಥಳಗಳ ಜೊತೆಗೆ ಮಾನವೀಯ ಮೌಲ್ಯ, ಭಕ್ತಿ, ಸಂಸ್ಕಾರ ಹಾಗೂ ಸಹೋದರತ್ವ ಬೆಳೆಸುವ ಕೇಂದ್ರಗಳಾಗಬೇಕು. ಧರ್ಮದ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ನಡೆಯಬೇಕು ಎಂದು ಅವರು ಕರೆ ನೀಡಿದರು.  ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ಎಂಟು ವರ್ಷಗಳಲ್ಲಿ 150ಕ್ಕೂ ಹೆಚ್ಚು ಮಠ-ಮಂದಿರಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮಠಾಧೀಶರು, ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.