ಪಟ್ಟಣದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ

ಪಟ್ಟಣದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ Installation of the Ganapathi idol in the town

ಲೋಕದರ್ಶನ ವರದಿ 

ಕಂಪ್ಲಿ 15 :  ಗಣೇಶ ಚತುರ್ಥಿ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವೈವಿಧ್ಯಮಯ ಗಣಪನ ಮೂರ್ತಿಗಳನ್ನು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ. ಗೋಲ್ಡನ್ ಗಣಪ, ಮಹಾರಾಜ, ಛತ್ರಪತಿ, ಸೌದತ್ತಿ ಯಲ್ಲಮ್ಮ ದೇವಿ ಹೊತ್ತ ಗಣಪತಿ, ಹೀಗೆ ನಾನಾ ಅಪಕರ್ಷಣೆಯ ವಿಘ್ನನಿವಾರಕನನ್ನು ಕೂರಿಸಲಾಗಿದೆ. ವರ್ಷಕ್ಕೊಮ್ಮೆ ಆಗಮಿಸುವ ಗಣಪತಿಯನ್ನು ಯುವಕರ ಮಂಡಳಿಯವರು ವಿಜೃಂಭಣೆಯಿಂದ ಪ್ರತಿಷ್ಠಾಪಿಸಿ, ಸಂಭ್ರಮದಿಂದ ಪೂಜಿಸಿದರು. ಪಟ್ಟಣದ 9/15ನೇ ವಾರ್ಡಿನ ಗಾಂಧಿನಗರದ ಮುಖ್ಯರಸ್ತೆ ಬದಿಯಲ್ಲಿ ಯಂಗ್ ಸ್ಟಾರ​‍್ಸ‌ ಯುವಕರ ಮಂಡಳಿಯಿಂದ ಸೌದತ್ತಿ ಯಲ್ಲಮ್ಮನನ್ನು ತಕೆ ಮೇಲೆ ಹೊತ್ತ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಈ ಸಂದರ್ಭದಲ್ಲಿ ಮಂಡಳಿಯವಾರದ ರಾಘವೇಂದ್ರ, ಯಶ್ವಂತ, ಓಬಳೇಶ, ವಿಜಯಕುಮಾರ, ಜೋಗಿ, ನಂದು, ಮಹೇಶ, ಮಲ್ಲೇಶಿ, ರವಿ, ಮಲ್ಲಿಕಾರ್ಜುನ, ನಾಗಾರ್ಜುನ ಇದ್ದರು. ಇಲ್ಲಿನ ಇಂದಿರಾನಗರದಲ್ಲಿ ಗಜಾನನ ಯುವ ಚೇತನ ಯುವಕರ ಸಂಘದಿಂದ 41ನೇ ವಾರ್ಷಿಕೋತ್ಸವದ ಪ್ರಯುಕ್ತ ಕಂಪ್ಲಿ ಕಾ ಅಧಿಪತಿಯ ಛತ್ರಪತಿ ಸಂಭಾಜಿ ಮಹಾರಾಜ್ ಗಣಪ, ನಡುವಲ ಮಸೀದಿ ಬಳಿಯ ಸಂತೆ ಮಾರುಕಟ್ಟೆ ರಸ್ತೆ ಬದಿಯಲ್ಲಿ ಸರಾಫ್ ವರ್ತಕರ ಮತ್ತು ಕೆಲಸಗಾರರ ಸಂಘ ಮತ್ತು ಗಜಾನನ ಉತ್ಸವ ಸಮಿತಿಯಿಂದ ಪ್ರತಿಷ್ಠಾಪನೆಗೊಂಡು ಗಣಪ ಜನರ ಕಣ್ಮನ ಸೆಳೆಯಿತು.

ಸರಾಫ್ ವರ್ತಕರ ಸಂಘದ ಅಧ್ಯಕ್ಷ ಜಗದೀಶ ಜಿ.ರಾಯ್ಕರ್, ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಡಿ.ಮೌನೇಶ್ ಇದ್ದರು. ಇಲ್ಲಿನ ಭಾರತ್ ಚಿತ್ರಮಂದಿರದ ಕೂಲಿಕಟ್ಟೆ ಬಸವೇಶ್ವರ ಹತ್ತಿರ ಹಿಂದೂ ಯುವ ಸೇನೆಯಿಂದ ಮಹಾರಾಜ ಗಣಪ, ಹೀಗೆ ಸಾರ್ವಜನಿಕ ಸ್ಥಳ ಸೇರಿದಂತೆ ಗಲ್ಲಿಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿದ ಗಣಪಗಳು ಜನರನ್ನು ತನ್ನತ್ತ ಆಕರ್ಷಿಸುತ್ತಿವೆ. ಮಹಿಳೆಯರು, ಮಕ್ಕಳು ಸೇರಿದಂತೆ ಜನರು ಪ್ರತಿಷ್ಠಾಪಿಸ ಗಣಪತಿ ಸ್ಥಳಕ್ಕೆ ಭೇಟಿ ನೀಡಿ, ಗಣಪತಿ ವೀಕ್ಷಣೆ ಜೊತೆಗೆ ದರ್ಶನ ಪಡೆದು, ಇಷ್ಟಾರ್ಥಗಳು ಈಡೇರಿಸುವಂತೆ ಬೇಡಿದರು.