ಹಿಂದೂ ಸಂಪ್ರದಾಯದಂತೆ ಗಣೇಶ ಮೂರ್ತಿ ಪ್ರತಿಷ್ಟಾಪನೆ: ಸಚಿನ ಮಡಿವಾಳರ
Installation of Ganesh idol according to Hindu tradition: Sachina Madiwala
ಶಿಗ್ಗಾವಿ 14: ಸನಾತನ ಹಿಂದೂ ಧರ್ಮದ ರಕ್ಷಣೆಗೆ ಈ ಸಮೂಹ ಕೊಡುಗೆ ಬಹಳಷ್ಟಿದ್ದು ಸನಾತನ ಹಿಂದೂ ಸಂಪ್ರದಾಯದಂತೆ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗುತ್ತಿದೆ ಎಂದು ಮುಖಂಡ ಸಚಿನ್ ಮಡಿವಾಳರ ಹೇಳಿದರು.
ಪಟ್ಟಣದ ಹಳೇಪೇಟೆ ಓಣಿಯಲ್ಲಿ ಐತಿಹಾಸಿಕ ಗಜಾನನೋತ್ಸವ ಸೇವಾ ಸಮಿತಿವತಿಯಿಂದ ಗ್ರಾಮದೇವಿ ಪಾದಗಟ್ಟಿಯಲ್ಲಿ ಗಣಪತಿ ಪ್ರತಿಷ್ಠಾಪನೆ ಗೊಳ್ಳಲಿರುವ ಸ್ಥಳದಲ್ಲಿ ಧ್ವಜಸ್ತಂಭ ಪ್ರತಿಷ್ಠಾಪನೆ ಮಾಡಿ ಮಾತನಾಡಿದ ಅವರು ಕಳೆದ 50 ವರ್ಷಗಳಿಂದ ಪ್ರತಿಷ್ಠಾಪಿಸುತ್ತ ಬರುತ್ತಿರುವ ಈ ಗಣೇಶ ಮೂರ್ತಿಗೆ ಅದರದೇ ಆದ ಐತಿಹಾಸಿಕ ಹಿನ್ನೆಲೆ ಇರುವ ಹಳೇಪಟೆ ಓಣಿಯಲ್ಲಿ ಪ್ರತಿಷ್ಟಾಪನೆ ಮಾಡಲಿರುವ ಗಣಪತಿಯು ದಕ್ಷಿಣ ಮುಖವಾಗಿ ಪ್ರತಿಷ್ಟಾಪನೆಗೊಂಡು ಅಲ್ಲದೇ ಸ್ಥಳದ ಪಕ್ಕದಲ್ಲಿರುವ ಭಾವಿಯಲ್ಲಿಯೇ ಗಣಪತಿ ವಿಸರ್ಜನೆಗೂ ಮುನ್ನ ವಿಶೇಷ ಪೂಜೆ ನೆರವೇರಸಿಅನ್ನಸಂತರೆ್ಣ ನೆರವೇರುತ್ತದೆ. ನಂತರ ಪಟ್ಟಣದಾದ್ಯಂತ ವಿಜೃಂಬಣೆಯ ಮೆರವಣಿಗೆ ಮಾಡಿ ನಂತರ ವಿಸರ್ಜಿಸಲಾಗುತ್ತದೆ. ಯುವ ಸಮೂಹದಿಂದ ಕೂಡಿದ ಗಜಾನನೋತ್ಸವ ಸೇವಾ ಸಮೀತಿಯಲ್ಲಿ ಯುವಕರ ದಂಡೆ ಇದೆ ಎಂದರು.
ಈ ಸಂದರ್ಭದಲ್ಲಿ ಮಂಜುನಾಥ ಕಂಕಣವಾಡ, ವಿನಾಯಕ ಮಾಳವಾದೆ,ರಾಜು ವನಹಳ್ಳಿ ಆಕಾಶ ಪಾಟೀಲ, ಮಹದೇವ ವನಹಳ್ಳಿ, ವಿನಾಯಕ ಬಿಂದಲಗಿ, ವಾಗೆಶ ಜಕ್ಕನವರ, ಅಭಿಷೇಕ್ ಬತ್ತಿ,ಸುನಿಲ್ ಬಿಂದಲಗಿ, ಕುಮಾರ್ ಮಾದಹ್ಳಳಿ, ರಾಜು ಕಟ್ಟಿಮನಿ, ಸಂತೋಷ ಸಂತಬಾನವರ, ನವೀನ ಹೂವನವರ, ಮಾಲತೇಶ ಮಾವೂರ, ಪ್ರಕಾಶ ಬತ್ತಿ, ಮಾಲತೇಶ ಮಡಿವಾಳರ, ಅಜೀತ ಕಟ್ಟಿಮನಿ, ಜಯಪ್ಪ ನಂದಿ, ಕಿರಣ ಬನ್ನಿಕೊಪ್ಪ, ರವಿ ಹೊನ್ನಣ್ಣವರ, ಪ್ರವೀಣ್ ಕಟ್ಟಿಮನಿ. ಯಲ್ಲಪ್ಪ ಕಂಕಣವಾಡ, ಮಂಜುನಾಥ ಚಕ್ರಗೌಡ್ರ, ನಿಂಗಪ್ಪ ಬೆಳವಲಕೊಪ್ಪ,ಅರುಣ್ ಬನ್ನಿಕೊಪ್ಪ , ಅಕ್ಷಯ್ ಶಿವಪೂಜಿ ಸೇರಿದಂತೆ ಸಮೀತಿ ಸದಸ್ಯರು ಪಟ್ಟಣದ ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 