ಇತಿಹಾಸ ತಿಳಿದುಕೊಳ್ಳಲು ಶಾಸನಗಳು ಪ್ರಧಾನ ಆಧಾರ

ಇತಿಹಾಸ ತಿಳಿದುಕೊಳ್ಳಲು ಶಾಸನಗಳು ಪ್ರಧಾನ ಆಧಾರ Inscriptions are the main basis for understanding history.

ಇತಿಹಾಸ ತಿಳಿದುಕೊಳ್ಳಲು ಶಾಸನಗಳು ಪ್ರಧಾನ ಆಧಾರ 

ಧಾರವಾಡ 24: ಭಾರತದ ಚರಿತ್ರೆ ಸನಾತನ ಪರಂಪರೆ ಮತ್ತು ಸಂಸ್ಕ್ರತಿಯನ್ನು ಹೊಂದಿದೆ. ಇದನ್ನು ತಿಳಿದುಕೊಳ್ಳಲು ಶಾಸನಗಳು ಪ್ರಧಾನ ಆಧಾರವಾಗಿವೆ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಹೇಳಿದರು. ಜೆ.ಎಸ್‌.ಎಸ್‌. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಕನ್ನಡ ಸಂಶೋಧನಾ ಕೇಂದ್ರ ಕ.ವಿ.ವಿ. ಮತ್ತು ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ಬಿ.ಎ. ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಶಾಸನಗಳ ಪಡಿಯಚ್ಚನ್ನು ತೆಗೆಯುವ ಹಾಗೂ ಪರಂಪರೆ ಉಳಿಸುವ ಅರಿವನ್ನು ಮೂಡಿಸುವ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಡಾ. ಡಿ. ವೀರೆಂದ್ರ ಹೆಗ್ಗಡೆ ಅವರ 58 ನೇ ಪಟ್ಟಾಭಿಷೇಕ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕ್ರಿ.ಪೂ. 3 ನೇ ಶತಮಾನದಿಂದ ನಮಗೆ ಇತಿಹಾಸ ತಿಳಿಯಲು ಶಾಸನಗಳು ದೊರೆತಿವೆ. ಮೌರ್ಯ ಚಕ್ರವರ್ತಿ ಅಶೋಕನನ್ನು ಶಾಸನಗಳ ಜನಕ ಎಂದು ಕರೆಯಲಾಗಿದೆ. 1837 ರಲ್ಲಿ ಜೆಮ್ಸ್‌ ಪ್ರಿನ್ಸೆಪ್ ಅವರು ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಯನ್ನು ಓದುವ ಮೂಲಕ ಅಶೋಕನ ಶಾಸನಗಳನ್ನು ಓದಲು ಸಾಧ್ಯವಾಯಿತು. ಆ ಕಾರಣದಿಂದಾಗಿ ಜೇಮ್ಸ್‌ ಪ್ರಿನ್ಸೆಪ್ ಅವರನ್ನು ಭಾರತದ ಶಾಸನಗಳ ಪಿತಾಮಹ ಎಂದು ಕರೆಯಲಾಗಿದೆ. ಇದುವರೆಗೂ ಸಾವಿರಾರು ಶಾಸನಗಳು ಭಾರತದಲ್ಲಿ ದೊರಕಿದ್ದು ಇದರಿಂದ ರಾಜ್ಯದ ವಿಸ್ತಾರ, ಲಿಪಿ, ಭಾಷೆ, ಧರ್ಮ, ಆಡಳಿತ ವ್ಯವಸ್ಥೆ ಮುಂತಾದ ವಿಷಯಗಳನ್ನು ತಿಳಿದುಕೊಳ್ಳಲು ನೆರವಾಗಿವೆ. ಡಾ. ವಿರೇಂದ್ರ ಹೆಗ್ಗಡೆ ಅವರು ಪರಂಪರೆ ಉಳಿಸಲು ಅನೇಕ ಜಿನಾಲಯ ಮತ್ತು ದೇವಾಲಯಗಳನ್ನು ಜೀರ್ಣೊದ್ಧಾರ ಗೊಳಿಸಿದ್ದಾರೆ ಎಂದರು. ಅತಿಥಿಗಳಾದ ಡಾ. ಎಸ್‌. ಕೆ. ಮೇಲಕರ ನಿರ್ದೇಶಕರು ಕನ್ನಡ ಸಂಶೋಧನಾ ಕೇಂದ್ರ ಕ.ವಿ.ವಿ. ಇವರು ಜೇಮ್ಸ್‌ ಪ್ರಿನ್ಸೆಪ್ ಅವರು ಅಷ್ಟೇ ಅಲ್ಲದೇ ತಜ್ಞರಾದ ಜೇಮ್ಸ್‌ ಪ್ಲಿಟ್, ಶ್ರೀನಿವಾಸ ರಿತ್ತಿ, ಶ್ರೀನಿವಾಸ ಪಾಡಿಗಾರ ಮತ್ತು ಆರ್‌. ಎಮ್‌. ಷಡಕ್ಷರಯ್ಯ ಹೀಗೆ  ಮುಂತಾದ ವಿದ್ವಾಂಸರು ಶಾಸನ ಶಾಸ್ತ್ರಕ್ಕೆ ಪ್ರಧಾನ ಕೊಡುಗೆ ನೀಡಿದ್ದಾರೆ ಎಂದರು.ವಿದ್ಯಾರ್ಥಿಗಳಿಗೆ  ಶಾಸನಗಳ ಪಡಿಯಚ್ಚನ್ನು ತೆಗೆಯುವ ವಿಧಾನದ ಬಗ್ಗೆ ಮತ್ತು ಪಡಿಯಚ್ಚು ಹೇಗೆ ತೆಗೆಯಬೇಕೆಂದು ಪ್ರದರ್ಶಿಸಿದರು. ಮತ್ತೊರ್ವ ಅತಿಥಿಗಳಾದ ಎಸ್‌.ಸಿ.ಪಾಟೀಲ ವಿಶ್ರಾಂತ ಕುಲಪತಿಗಳು ಲಲಿತಕಲಾ ವಿ.ವಿ. ಇವರು ಪರಂಪರೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಿದರು. ವಿದ್ಯಾರ್ಥಿಗಳಿಗೆ ಕುಂಟುಂಬದ ವಂಶಾವಳಿ ತಿಳಿದುಕೊಳ್ಳುವಂತೆ ಕರೆ ನೀಡಿದರು. ಕುಮಾರಿ ಅರ್ಚನಾ ಪಾಟೀಲ ಸ್ವಾಗತಿಸಿದರು.  ಕು. ಶ್ರೀರಕ್ಷಾ ವಂದಿಸಿದರು.    ಡಾ. ಆರ್‌.ವಿ.ಚಿಟಗುಪ್ಪಿ,  ರೇಣುಕಾ ಜಿ., ಮಹಾಂತೇಶ ಆರ್‌. ಉಪಸ್ಥಿತರಿದ್ದರು