ಶಿವಯೋಗದಿಂದ ಅಂತರಂಗ ಶುದ್ಧಿ: ಡಾ. ರಾಜಶೇಖರ

ಶಿವಯೋಗದಿಂದ ಅಂತರಂಗ ಶುದ್ಧಿ: ಡಾ. ರಾಜಶೇಖರ Inner purification through Shiva Yoga: Dr. Rajashekar

ಲೋಕದರ್ಶನ ವರದಿ 

ಬೆಳಗಾವಿ  06: ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ಕರುಣಿಸಿದ ಇಷ್ಟಲಿಂಗ ಪೂಜೆ ಶಿವಯೋಗದಿಂದ ಅಂತರಂಗ ಶುದ್ಧಿಯಾಗುತ್ತದೆ. ಇಷ್ಟಲಿಂಗ ಪೂಜಾ ವಿಧಿ-ವಿಧಾನವನ್ನು ವೈಜ್ಞಾನಿಕವಾಗಿ ವೈಚಾರಿಕವಾಗಿ ನಿರೂಜಿಸಲಾಗಿದೆ. ಇದನ್ನು ಪ್ರತಿಯೊಂದು ಮನೆಯ ಹಿರಿಯರು ತಮ್ಮ ಕಿರಿಯರಿಗೆ ಇದರ ವಿಶೇಷತೆಯನ್ನು ಕಲಿಸಬೇಕೆಂದು ಜೆಎನ್ ಎಮ್ ಸಿ ನಿವೃತ್ತ ಪ್ರಾಚಾರ್ಯ ಡಾ.ಎಚ್ ಬಿ. ರಾಜಶೇಖರ ಕರೆ ಕೊಟ್ಟರು.ನಗರದ ಶ್ರೀ ಕಾರಂಜಿಮಠದ 299ನೇಯ ಮಾಸಿಕ ಶಿವಾನುಭದ ಕಾರ್ಯಕ್ರಮದ ನಿಮಿತ್ತವಾಗಿ ಸೋಮವಾರ ನಡೆದ "ವಿಶ್ವಗುರು ಬಸವಣ್ಣನವರ ಜಂಯತಿ" ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶೀಮಠದ ಪೀಠಾಧಿಗಳಾದ ಪೂಜ್ಯಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಮಾರಂಭದಲ್ಲಿ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ ಜೆಎನ್‌ಎಮ್‌ಸಿ ಪ್ರಾಧ್ಯಾಪಕರು, ಸಾಹಿತಿ ಡಾ. ಅವಿನಾಶ ಕವಿ ಅವರು, " ವಿಶ್ವಗುರು ಬಸವಣ್ಣನವರ ಬಹುಮುಖ ವ್ಯಕ್ತಿತ್ವ" ಕುರಿತು ಚಿಂತನ ಪರ ಉಪನ್ಯಾಸ ನೀಡಿದರು.ಡಾ.ಎಪ್ ವಿ. ಮಾನ್ಸಿ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾದ ರತ್ನಪ್ರಭಾ ಬೆಲ್ಲದ, ಬೆಳಗಾವಿ  ಬಸವೇಶ್ವರ ಕೋ-ಅಪರೇಟಿವ ಬ್ಯಾಂಕಿನ ನಿರ್ದೇಶಕರಾದ ಸರಳಾ ಹೀರೇಕರ, ಪ್ರಾಚಾರ್ಯ ವಿ.ಬಿ. ದೊಡಮನಿ, ಪ್ರೊ. ಎ.ಕೆ ಪಾಟೀಲ್, ಸ್ವಾಗತಿಸಿ, ನಿರೂಪಿಸಿದರು. ಶರಣ ರಾಜು ಪಡಗುರಿ ಗ್ರಂಥ ಪುಷ್ಪ ಸಮರ​‍್ಿಸಿದರು  ಕುಮಾರೇಶ್ವರ ಸಂಗೀತ ಪಾಠ ಶಾಲೆಯ ಮಕ್ಕಳಿಂದ ವಚನ ಪ್ರಾರ್ಥಿಸಿದರು. ವಕೀಲರಾದ ವಿ. ಕೆ. ಪಾಟೀಲ ಶರಣು ಸಮರೆ​‍್ಣ ಮಾಡಿದರು.