ಬಿ.ಕೆ.ಗುಪ್ತಾ ಪ್ರೌಢಶಾಲೆ ಮಕ್ಕಳಿಗೆ ಇನ್ನರ್ ವ್ಹಿಲ್- ಎಂ.ಎಂ. ಪಿ. ಸಂಸ್ಥೆಯಿಂದ ಸೈಕಲ್ ವಿತರಣೆ
Inner Wheel- M.M.P. distributes bicycles to children of B.K.Gupta High School
ಬಿ.ಕೆ.ಗುಪ್ತಾ ಪ್ರೌಢಶಾಲೆ ಮಕ್ಕಳಿಗೆ ಇನ್ನರ್ ವ್ಹಿಲ್- ಎಂ.ಎಂ. ಪಿ. ಸಂಸ್ಥೆಯಿಂದ ಸೈಕಲ್ ವಿತರಣೆ
ರಾಣೇಬೆನ್ನೂರು 14 : ಎಲ್ಲ ದಾನಗಳಿಗಿಂತಲೂ ಅತ್ಯಂತ ಶ್ರೇಷ್ಠವಾದಧಾನ. ವಿದ್ಯಾ ಧಾನವಾಗಿದೆ. ಇಂದಿನ ಮಕ್ಕಳಿಗೆ ಅನೇಕ ಸವಲತ್ತುಗಳು ಬೇಕಾಗಿದೆ ಬೇಕಾಗಿರುವ ಎಲ್ಲ ಅಗತ್ಯ ಸವಲತ್ತುಗಳನ್ನು ಪಡೆಯುವುದು ಎಲ್ಲರಿಗೂ ಸುಲಭ ಸಾಧ್ಯವಿಲ್ಲ. ಅದಕ್ಕಾಗಿ ಅತೀ ಬಡತನದಲ್ಲಿರುವ ಕೆಲವು ವಿದ್ಯಾರ್ಥಿಗಳಿಗೆ ಇನ್ನರ್ ವ್ಹಿಲ್ ಸಂಸ್ಥೆಯ ಪರವಾಗಿ ಬೈಸಿಕಲ್ ಕೊಡಲಾಗಿದೆ ಎಂದು ಸಂಸ್ಥೆಯ ಡಾ. ದೀಪಾಲಿ ಪುನೀತ್ ಹೇಳಿದರು. ಅವರು ಇಲ್ಲಿನ ಬಿ.ಕೆ.ಗುಪ್ತಾ ಪ್ರೌಢಶಾಲೆಯಲ್ಲಿ ಎಂ. ಎಂ.ಪಿ ಸೇವಾ ಸಂಸ್ಥೆ- ಇನ್ನರ್ ವ್ಹಿಲ್ ಸೇವಾ ಸಂಸ್ಥೆ ಆಯೋಜಿಸಿದ್ದ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಜನೆ ಮಾಡುವ ಪ್ರತಿಯೊಬ್ಬ ಮಕ್ಕಳಿಗೂ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಪ್ರೋತ್ಸಾಹಿಸಬೇಕಾದ ಇಂದಿನ ಅಗತ್ಯವಿದ್ದು, ಅದಕ್ಕಾಗಿ ಸರ್ಕಾರ ಸೈಕಲ್ ವಿತರಣೆ ಯೋಜನೆ ಪುನ: ಜಾರಿಗೆ ತರಬೇಕು.ಇದರಿಂದಾಗಿ ಶಾಲಾ ಮಕ್ಕಳಿಗೆ ನಿಗದಿತ ಸಮಯದಲ್ಲಿ, ಪಾಠ ಪ್ರವಚನಗಳಿಗೆ ಹಾಜರಾಗಲು ತುಂಬಾ ಸಹಕಾರಿಯಾಗಲಿದೆ ಎಂದರು. ಕಾರ್ಯದರ್ಶಿ ಪುಷ್ಪಾ ಮಾಳಗಿ ಅವರು ಮಾತನಾಡಿ, ಸಂಸ್ಥೆಯು ಕೊಡ ಮಾಡಿರುವ ಸೈಕಲ್ ಗಳನ್ನು ಸರಿಯಾದ ರೀತಿಯಲ್ಲಿ ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಎಂದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಭಾರತಿ ಕುಮಾರ ಜಂಬಿಗಿ, ಮೀನಾ ವಾಸುದೇವ ಗುಪ್ತಾ, ನಿರ್ಮಲಾ ಪುನೀತ್, ಸಂಜನಾ ಕುರುವತ್ತಿ, ಕಾರ್ಯದರ್ಶಿ ಪುಷ್ಪಾ ಮಾಳಗಿ, ಸದಸ್ಯರಾದ ಮಂಗಳಗೌರಿ ಅರುಣಕುಮಾರ ಪೂಜಾರ, ಆಶಾ ಅಗರವಾಲ್, ಪ್ರಿಯಾ ಸಾಹುಕಾರ, ಸುಜಾತಾ ಮಿಣಜಗಿ, ಸರೋಜಾ ಜಡೆ, ರೂಪಾ ಶ್ರೀನಿವಾಸ್ ಕಾಕಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 