ಇಗ್ನೊ ಅಧ್ಯಯನ ಕೇಂದ್ರದಲ್ಲಿ ದೀಕ್ಷಾ ಬೋಧನೆ
Initiation teaching at IGNOU Study Centre
ಲೋಕದರ್ಶನ ವರದಿ
ಧಾರವಾಡ 27; ಇಗ್ನೊ ವಿಶ್ವದ ಅತಿದೊಡ್ಡ ದೂರ ಶಿಕ್ಷಣದ ವಿಶ್ವವಿದ್ಯಾಲಯವಾಗಿದೆ. ಗುಣಮಟ್ಟ ಶಿಕ್ಷಣ,ಉತ್ತಮ ವಿಷಯ ಆಧಾರಿತ ಪುಸ್ತಕಗಳು ಆನ್ಲೈನ್ ಮತ್ತು ಆಪ್ಲೈನ್ ಪಾಠಗಳ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ.ಅಜಿತ್ ಪ್ರಸಾದ್ರವರು ಮುಖ್ಯ ಅತಿಥಿಗಳಾಗಿ ಜೆ.ಎಸ್.ಎಸ್. ಇಗ್ನೊ ಅಧ್ಯಯನ ಕೇಂದ್ರದಲ್ಲಿ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಧಾರವಾಡ ಅಧ್ಯಯನಕೇಂದ್ರ 1986 ರಲ್ಲಿ ಸ್ಥಾಪನೆಯಾಗಿ ನಿರಂತರ 30 ವರ್ಷ ಉತ್ತರ ಕರ್ನಾಟಕದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. 1985ರಲ್ಲಿ ದೆಹಲಿಯಲ್ಲಿ ಮುಖ್ಯ ಆಡಳಿತ ಕಚೇರಿ ಸ್ಥಾಪಿಸಿ ಸುಮಾರು 55 ಪ್ರಾದೇಶಿಕ ಅಧ್ಯಯನ ಕೇಂದ್ರಗಳು ಹಾಗೂ 2567 ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ, ದೇಶಾದ್ಯಂತ ಶಿಕ್ಷಣ ಕ್ರಾಂತಿಯನ್ನು ತರಲಾಗಿದೆ, ಅಲ್ಲದೆ 29 ಹೊರದೇಶಗಳಲ್ಲಿ ಇಗ್ನೋ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದೆ. ಅಲ್ಲಿಯ ಜನರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದಲ್ಲಿ ನೀಡುತ್ತಿರುವ ಗ್ರಂಥಾಲಯ, ಇಂಟರ್ನೆಟ್ ಸೌಕರ್ಯ ಇವುಗಳನ್ನು ವಿದ್ಯಾರ್ಥಿಗಳು ಕೂಡ ಪಡೆದು ಕೊಳ್ಳಬಹುದೆಂದು ತಿಳಿಸಿದರು. ಅಲ್ಲದೆ ಇಗ್ನೋ ವಿದ್ಯಾರ್ಥಿಗಳನ್ನು ಉದ್ಯೋಗ ಮೇಳದಲ್ಲಿ ಕೂಡ ಭಾಗವಹಿಸಲು ಕರೆ ನೀಡಿದರು ಕಾರ್ಯಕ್ರಮದಲ್ಲಿ ಇಗ್ನೋ ಸಂಯೋಜನ ಅಧಿಕಾರಿ ಡಾ. ಸೂರಜ್ ಜೈನ್ ಸ್ವಾಗತಿಸಿದರು. ಡಾ. ಆರ್.ವ್ಹಿ. ಚಿಟಗುಪ್ಪಿ ನಿರೂಪಿಸಿದರು. ಡಾ. ಮಂಜುನಾಥ ಪೂಜಾರ ವಂದಿಸಿದರು.
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ? 