ಸಂಸ್ಕೃತದಲ್ಲಿ ಶಿಖರ ತಲುಪಿದ ಮುಗಳಿಹಾಳದ ಋತು: ರಾಜ್ಯಮಟ್ಟದ ಗೌರವಕ್ಕೆ ಪಾತ್ರ
Infosys Award for Rutu
ದೀಕ್ಷಾಂತದಲ್ಲಿ ಋತುಗೆ ಇನ್ಫೋಸಿಸ್ ಪ್ರಶಸ್ತಿ
ಯರಗಟ್ಟಿ 12: ತಾಲೂಕಿನ ಮುಗಳಿಹಾಳ ಗ್ರಾಮದ ಪ್ರತಿಭೆ ಸಂಸ್ಕೃತ ವಿದ್ಯಾಭ್ಯಾಸದಲ್ಲಿ ಅಪೂರ್ವ ಸಾಧನೆಗೈದ ಋತು ಜಿ. ಗಂಗರಡ್ಡಿ ಅವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹನ್ನೆರಡು ಹಾಗೂ ಹದಿಮೂರನೇ ದೀಕ್ಷಾಂತ ಘಟಿಕೋತ್ಸವದಲ್ಲಿ ಪ್ರತಿಷ್ಠಿತ “ಇನ್ಫೋಸಿಸ್ ದತ್ತಿನಿಧಿ” ನಗದು ಪುರಸ್ಕಾರವನ್ನು ಸ್ವೀಕರಿಸಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಭವ್ಯ ಸಮಾರಂಭವು ವಿದ್ಯಾರ್ಥಿಗಳ ಸಾಧನೆಗೆ ಸಾಕ್ಷಿಯಾದ ಮಹತ್ವದ ವೇದಿಕೆಯಾಗಿತ್ತು. ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳ ಪರಿಶ್ರಮವನ್ನು ಕೊಂಡಾಡಿದರು.ಉನ್ನತ ಶಿಕ್ಷಣ ಸಚಿವರಾದ ಎಮ್ ಸಿ ಸುಧಾಕರ್ ಅವರು ವಿಶಿಷ್ಟ ಅತಿಥಿಯಾಗಿ ಭಾಗವಹಿಸಿ, ಶ್ರೇಷ್ಠ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಖ್ಯಾತ ಹೃದ್ರೋಗ ತಜ್ಞರು ಹಾಗೂ ಸಂಸದರಾದ ಸಿ ಎನ್ ಮಂಜುನಾಥ್ ಅವರು ದೀಕ್ಷಾಂತ ಭಾಷಣದ ಮೂಲಕ ಯುವಜನತೆಗೆ ಗುರಿ ಸಾಧನೆಗೆ ಪ್ರೇರಣಾದಾಯಕ ಸಂದೇಶ ನೀಡಿದರು.2023-24ನೇ ಸಾಲಿನ ಆಚಾರ್ಯ (ಎಂ.ಎ.) ಅದ್ವೈತ ವೇದಾಂತ ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಋತು ಗಂಗರಡ್ಡಿ ಅವರು ಈ ಗೌರವಕ್ಕೆ ಪಾತ್ರರಾಗಿದ್ದು, ತಮ್ಮ ನಿರಂತರ ಪರಿಶ್ರಮ, ಶಿಸ್ತಿನ ಅಧ್ಯಯನ ಮತ್ತು ವಿಷಯದ ಮೇಲಿನ ಆಳವಾದ ಆಸಕ್ತಿಯಿಂದ ಈ ಸಾಧನೆಯನ್ನು ಸಾಧಿಸಿದ್ದಾರೆ. ವೇದವಿಜ್ಞಾನ ಶೋಧ ಸಂಸ್ಥಾನ ಸಂಸ್ಕೃತ ಮಹಾಪಾಠಶಾಲೆಯ ವಿದ್ಯಾರ್ಥಿನಿಯಾಗಿರುವ ಇವರ ಸಾಧನೆ ಸಂಸ್ಥೆಯಿಗೂ ಹೆಮ್ಮೆಯ ವಿಷಯವಾಗಿದೆ.ಪುರಸ್ಕಾರ ಸ್ವೀಕರಿಸುವ ಸಂದರ್ಭದಲ್ಲಿ ಸಭಾಂಗಣದಲ್ಲಿ ಮೊಳಗಿದ ಅಭಿನಂದನೆಗಳು, ಋತು ಅವರ ಸಾಧನೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದವು. ಅವರ ಈ ಸಾಧನೆ ಕೇವಲ ವೈಯಕ್ತಿಕ ಯಶಸ್ಸಲ್ಲದೆ, ಸಂಸ್ಕೃತ ಮತ್ತು ವೇದ ವಿದ್ಯೆಯ ಮೇಲಿನ ಆಸಕ್ತಿಯನ್ನು ಯುವಜನರಲ್ಲಿ ಹೆಚ್ಚಿಸುವಂತಾಗಿದೆ.ಹೇಳಿಕೆ:1 ಮುಗಳಿಹಾಳ“ಋತು ಗಂಗರಡ್ಡಿ ಅವರ ಈ ಸಾಧನೆ ಮುಗಳಿಹಾಳ ಗ್ರಾಮದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಶ್ರಮಕ್ಕೆ ಸದಾ ಯಶಸ್ಸು ಸಿಗುತ್ತದೆ ಎಂಬ ಸಂದೇಶವನ್ನು ಅವರು ಸಮಾಜಕ್ಕೆ ತೋರಿಸಿದ್ದಾರೆ.ಅಶೋಕ ಪಟ್ಟಣಶೆಟ್ಟಿ
ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು,
”ಹೇಳಿಕೆ: 2 ಮುಗಳಿಹಾಳ“ಗ್ರಾಮೀಣ ವಿದ್ಯಾರ್ಥಿಗಳೂ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಋತು ತೋರಿಸಿದ್ದಾರೆ. ಅದ್ವೈತ ವೇದಾಂತದಲ್ಲಿ ಅತ್ಯಧಿಕ ಅಂಕಗಳೊಂದಿಗೆ ಉತ್ತೀರ್ಣರಾದ ಅವರ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯಾಗಿದೆ.ರಾಮನಗೌಡ ಗಂಗರಡ್ಡಿ
ಮಾಜಿ ಗ್ರಾಮ ಪಂಚಾಯತ್ ಸದಸ್ಯರು,
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 