ವಿಜ್ಞಾನದ ಯುಗದಲ್ಲಿ ಬಂಜೆತನ ಸಮಸ್ಯೆಯೇ ಅಲ್ಲ: ಡಾ. ಸಚಿನ್ ಸುಗಣ್ಣವರ

ವಿಜ್ಞಾನದ ಯುಗದಲ್ಲಿ ಬಂಜೆತನ ಸಮಸ್ಯೆಯೇ ಅಲ್ಲ: ಡಾ. ಸಚಿನ್ ಸುಗಣ್ಣವರ Infertility Is No Longer a Problem in the Age of Modern Science: Dr. Sachin Sugannavar

ಕಾಗವಾಡ, ಆ. 19: ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಯಾಗಿರುವುದರಿಂದ ಬಂಜೆತನದ ಸಮಸ್ಯೆ ಕುರಿತು ದಂಪತಿಗಳು ಆತಂಕಪಡಬೇಕಾಗಿಲ್ಲ ಎಂದು ಮಿರಜ್‌ನ ಸಚಿನ್ ಟೆಸ್ಟ್ಟ್ಯೂಬ್ ಬೇಬಿ ಸೆಂಟರ್‌ನ ವೈದ್ಯ ಡಾ. ಸಚಿನ್ ಸುಗಣ್ಣವರ ಹೇಳಿದರು.

ಮಿರಜ್‌ನ ಸಚಿನ್ ಟೆಸ್ಟ್ಟ್ಯೂಬ್ ಬೇಬಿ ಸೆಂಟರ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಂಜೆತನ ನಿವಾರಣೆ ಹಾಗೂ ಸ್ತ್ರೀರೋಗಗಳ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದೇಶಗಳಲ್ಲಿ ಬಂಜೆತನ ನಿವಾರಣೆಗೆ ಬಳಸಲಾಗುತ್ತಿರುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಸಚಿನ್ ಆಸ್ಪತ್ರೆಯಲ್ಲಿ ಲಭ್ಯವಿವೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದ ಸಾವಿರಾರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂತಾನ ಭಾಗ್ಯ ಪಡೆದಿದ್ದಾರೆ ಎಂದು ತಿಳಿಸಿದರು.

ಬಂಜೆತನದ ಸಮಸ್ಯೆಯಿಂದ ಬಳಲುತ್ತಿರುವವರು ಪರಿಹಾರಕ್ಕಾಗಿ ಮೊ. 09765010834 ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಡಾ. ನೇಹಾ ಸುಗಣ್ಣವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.