ಆಗಸ್ಟ್ 13 ರಿಂದ ಮೊದಲ ಸುತ್ತಿನ ಇಂದ್ರಧನುಷನ್ ಲಸಿಕಾ ಕಾರ್ಯಕ್ರಮ ಮಕ್ಕಳಿಗೆ ಏಳುಬಾರಿ ಲಸಿಕೆ ಕಡ್ಡಾಯ: ಆಸ್ಪತ್ರೆ ಶುಚಿತ್ವಕ್ಕೆ ಆದ್ಯತೆ ನೀಡಿ: ಡಿಸಿ
ಹಾವೇರಿ10: ಲಸಿಕಾ ವಂಚಿತ ಪ್ರತಿ ಮಗು ತಾಯಂದಿರಿಗೆ ಮುಂದುವರೆದ ಗ್ರಾಮ ಸ್ವರಾಜ್ ಅಭಿಯಾನದ ಸಂಪೂರ್ಣ ಲಸಿಕೆ ಹಾಕುವ ಮಿಷನ್ ಇಂದ್ರಧನುಷ್ ವಿಶೇಷ ಲಸಿಕಾ ಕಾರ್ಯಕ್ರಮ ಇದೇ ಆಗಸ್ಟ್ 13 ರಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು ವಿಶೇಷ ಕಾಳಜಿ ಮತ್ತು ಜವಾಬ್ದಾರಿಯಿಂದ ಲಸಿಕಾ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಸೂಚಿಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಮುಂದುವರಿದ ಗ್ರಾಮ ಸ್ವರಾಜ್ ಅಭಿಯಾನದಡಿ ಸಂಪೂರ್ಣ ಲಸಿಕೆ ಹಾಕುವ ಕಾರ್ಯಕ್ರಮದ ಜಿಲ್ಲಾ ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಮಕ್ಕಳು ಹಾಗೂ ತಾಯಂದಿಯರು ನಿಯಮಿತವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಕಾರಣಾಂತಗಳಿಂದ ಲಸಿಕೆ ವಂಚಿತ ಹಾಗೂ ಲಸಿಕೆ ಹಾಕಿಸುವಲ್ಲಿ ಅಂತರಕಾಯ್ದುಕೊಂಡ ತಾಯಿ ಮತ್ತು ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಲು ಈ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ರಾಯಚೂರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ತೀವ್ರತರ ಲಸಿಕಾ ಅಭಿಯಾನವನ್ನು ಸಕರ್ಾರ ಮುಂದುವರಿದ ಗ್ರಾಮ ಸ್ವರಾಜ್ ಅಭಿಯಾನದಡಿ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನವನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿದೆ ಎಂದು ಹೇಳಿದರು.
ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗೂವಿನ ಹಕ್ಕು. ಐದು ವರ್ಷಗಳಲ್ಲಿ ಏಳುಬಾರಿ ಒಂದು ಬಾರಿ ತಪ್ಪಿಸದೇ ಲಸಿಕೆ ಹಾಕಿಸಿದರೆ ಆರೋಗ್ಯಕರ ಜೀವನಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಹುಟ್ಟಿದ ಕೂಲಡೇ ಬಿಸಿಜಿ, ಓಪಿವಿ-0, ಹೆಪಟೈಟಿಸ್ಬಿ, ಹುಟ್ಟಿದ ಒಂದುವರೆ ತಿಂಗಳಲ್ಲ್ಲಿ ಓಪಿವಿ-1, ಐಪಿವಿ-1, ಪೆಂಟಾವೆಲೆಂಟ್1, ಹುಟ್ಟಿದ ಎರಡುವರೆ ತಿಂಗಳಲ್ಲಿ ಓಪಿವಿ-2, ಪೆಂಟಾವೆಲೆಂಟ್2, ಹುಟ್ಟಿದ ಮೂರುವರೆ ತಿಂಗಳಲ್ಲಿ ಓಪಿವಿ-3, ಐಪಿವಿ-3, ಪೆಂಟಾವೆಲೆಂಟ್3, ಹುಟ್ಟಿದ ಒಂಭತ್ತು ತಿಂಗಳಲ್ಲಿ ದಡಾರ ರುಬೆಲ್ಲಾ-1, ಜೆಇ1, ಹುಟ್ಟಿದ ಒಂದುವರೆ ವರ್ಷದಲ್ಲಿ ದಡಾರ ರುಬೆಲ್ಲಾ-2, ಜೆಇ ವರ್ಧಕ ಓಪಿವಿ ವರ್ಧಕ, ಡಿಪಿಟಿ ವರ್ಧಕ1, ಐದರಿಂದ ಆರು ವರ್ಷದಲ್ಲಿ ಡಿಪಿಟಿ ವರ್ಧಕ2, 10 ರಿಂದ 16 ವರ್ಷದಲ್ಲಿ ಟಿಟಿ ಲಸಿಕೆಗಳನ್ನು ಹಾಕಿಸುವುದು ಕಡಾಯವಾಗಿದೆ. ಈ ಕುರಿತಂತೆ ಕರಪತ್ರಗಳ ಮೂಲಕ ತಾಯಂದಿರಿಗೆ, ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ತಾಯಂದಿರಿಗೆ ಈ ವಿಷಯ ಕಂಠಪಾಠವಾಗಬೇಕು ಎಂದು ಸಲಹೆ ನೀಡಿದರು.
ಲಸಿಕಾ ಅಭಿಯಾನಕ್ಕೆ ವ್ಯಾಕ್ಸಿನೇಟರ್ ಕೊರತೆ ಇದ್ದರೆ ಖಾಸಗಿ ಆರೋಗ್ಯ ಸಹಾಯಕರ ಸೇವೆಯನ್ನು ಪಡೆಯುವಂತೆ ಸೂಚಿಸಿದರು. ಮುಂದುವರೆದ ಗ್ರಾಮ ಸ್ವರಾಜ್ ಅಭಿಯಾನದಡಿ ಲಸಿಕೆಯ ಜೊತೆಗೆ ಶೌಚಾಲಯಗಳ ಬಳಕೆ, ಗ್ರಾಮಗಳ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು. ಅನೈರ್ಮಲ್ಯದಿಂದ ಹಲವು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ. ಎಷ್ಟೇ ಲಸಿಕೆ ಹಾಕಿದರು ಅಶುಚಿತ್ವ ಹೊಂದಿದರೆ ಪ್ರಯೋಜನವಾಗುವುದಿಲ್ಲ. ವಿವಿಧ ಇಲಾಖೆಯ ಸಮನ್ವಯದಿಂದ ಸ್ವಚ್ಛತಾ ಜಾಗೃತಿಗೆ ಅರಿವು ಮೂಡಿಸಲು ಸೂಚಿಸಿದರು.
ತಾಲೂಕಾ ಆಸ್ಪತ್ರೆ ಸೇರಿದಂತೆ ಜಿಲ್ಲಾ ಆಸ್ಪತ್ರೆಗಳ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವಿಶೇಷವಾಗಿ ಲೇಬರ್ ವಾಡರ್್ಗಳನ್ನು ಹೈಟೆಕ್ ವಾಡರ್್ಗಳನ್ನಾಗಿ ರೂಪಿಸಬೇಕು. ದೇವಾಲಯಗಳ ಮಾದರಿಯಲ್ಲಿ ಲೇಬರ್ ವಾಡರ್್ಗಳನ್ನು ಕಾಣಬೇಕು. ಜಿಲ್ಲೆಯ ಎಲ್ಲ ಆಸ್ಪತ್ರೆ ಒಳಗೊಂಡಂತೆ 49 ಲೇಬರ್ ವಾಡರ್್ಗಳಿವೆ. ಅತ್ಯುತ್ತಮ ನಿರ್ವಹಣೆಯ ಜಿಲ್ಲೆಯ ಮೂರು ಆಸ್ಪತ್ರೆ ಲೇಬರ್ ವಾಡರ್್ಗಳಿಗೆ ಬಹುಮಾನ ನೀಡುವುದಾಗಿ ಘೋಷಿಸಿದರು.
ತಾಯಂದಿರಿಗೆ ಎದೆಹಾಲು ಉಣಿಸುವ ಕುರಿತಂತೆ ಜಾಗೃತಿ ಮೂಡಿಸಬೇಕು. ವಿಶೇಷವಾಗಿ ಮೊದಲ ಹೆರಿಗೆಯ ಸಂದರ್ಭದಲ್ಲಿ ತಾಯಂದಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ತಾಯಂದಿರು ಹಾಗೂ ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಬೇಕು. ಈ ಕುರಿತಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಏಡ್ಸ್ ಪ್ರಕರಣಗಳು, ಎಚ್.ಐ.ವಿ.ಸೋಂಕು ಹಾಗೂ ಟಿಬಿ ಕಾಯಿಲೆಗಳ ಕುರಿತಂತೆ ವಿಶೇಷ ಗಮನಹರಿಸಬೇಕು. ಪ್ರತಿ ತಿಂಗಳು ಆತೋಗ್ಯ ಇಲಾಖೆ ಸಭೆಯಲ್ಲಿ ಪರಿಶೀಲನೆಗೆ ಮಾಹಿತಿ ಒಗಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಟಿಬಿ ಕಾಯಿಲೆ ಮುಕ್ತ ಜಿಲ್ಲೆ ಮಾಡುವ ನಿಟ್ಟಿನಲ್ಲಿ ರೋಗಿಗಳಿಗೆ ಪೌಷ್ಠಿಕ ಆಹಾರ ಸೇವನೆಗಾಗಿ ನೀಡುವ ಭತ್ಯೆಯ ಸದ್ಬಳಕೆ, ನಿಯಮಿತ ಔಷಧಿಗಳ ಬಳಕೆ ಕುರಿತಂತೆ ಕೌನ್ಸಲಿಂಗ ನಡೆಸಬೇಕು ಎಂದು ಸಲಹೆ ನೀಡಿದರು.
ಮೂರು ಹಂತದಲ್ಲಿ ಲಸಿಕಾ ಅಭಿಯಾನವನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ. ಮೊದಲ ಹಂತ ಇದೇ ಆಗಸ್ಟ್ 13,14, 17 ಮತ್ತು 18, ಎರಡನೇ ಹಂತ ಸೆಪ್ಟೆಂಬರ್ 10, 11, 14 ಹಾಗೂ 15, ಮೂರನೇ ಹಂತ ಅಕ್ಟೋಬರ್ 9, 10,12 ಮತ್ತು 15 ರಂದು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಲಸಿಕೆ ವಂಚಿತ 2170 ಗಭರ್ಿಣಿಯರು, 0 -1 ರಿಂದ ಎರಡು ವರ್ಷದ 10,512 ಮಕ್ಕಳು ಹಾಗೂ ಐದರಿಂದ ಆರು ವರ್ಷದ 8605 ಮಕ್ಕಳನ್ನು ಗುರುತಿಸಲಾಗಿದೆ. ಲಸಿಕೆ ಹಾಕಲು 510 ಇಂದ್ರಧನುಷ್ ಲಸಿಕಾ ಕೇಂದ್ರವನ್ನು ತೆರೆಯಲಾಗುವುದು. 712 ಅವಧಿ ಸಮಯವನ್ನು ನಿಗಧಿಪಡಿಸಲಾಗಿದೆ. ಲಸಿಕಾ ಕಾರ್ಯಕ್ರಮಕ್ಕೆ 201 ಕಿರಿಯ ಆರೋಗ್ಯ ಸಹಾಯಕರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಾನಂದ ಅವರು ವಿವರಿಸಿದರು.
ಮುಂದುವರಿದ ಗ್ರಾಮ ಸ್ವರಾಜ್ ಯೋಜನೆಯಡಿ ಗಭರ್ಿಣಿಯರಿಗೆ, ಮಕ್ಕಳಿಗೆ ನೂರರಷ್ಟು ಲಸಿಕೆ, ಶುಚಿತ್ವ, ಪ್ರಸವಪೂರ್ವ ಆರೈಕೆ, ಗಭರ್ಿಣಿಯರಿಗೆ ಅನಿಮಿಯ, ಎಚ್.ಐ.ವಿ., ಏಡ್ಸ್ ಕುರಿತಂತೆ ಪರೀಕ್ಷೆ, ಅಂಗನವಾಡಿ ಕೇಂದ್ರಗಳ ಶುಚಿತ್ವ, ಮಕ್ಕಳ ಹುಟ್ಟು ಬೆಳವಣಿಗೆಯ ತೊಂದರೆಗಳು, ವಿಕಲತೆ, ಸಾಂಕ್ರಾಮಿಕ ರೋಗಗಳ ಕುರಿತಂತೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ, ಒಂದರಿಂದ 19 ವರ್ಷದ ಮಕ್ಕಳಿಗೆ ಜಂತು ಹುಳು ನಿಮರ್ೂಲನೆ, ಲಕ್ಷ ಯೋಜನೆಯಡಿ ಆಸ್ಪತ್ರೆಗಳಲ್ಲಿ ಲೇಬರ್ ರೂಮ್ಗಳನ್ನು ಸ್ಚಚ್ಛವಾಗಿಟ್ಟುಕೊಳ್ಳುವುದು, ತಾಯಂದಿರಿಗೆ ಎದೆಹಾಲು ಉಣಿಸುವ ಬಗ್ಗೆ ಜಾಗೃತಿ, ಟಿಬಿ ರೋಗಿಗಳಿಗೆ ಪೌಷ್ಠಿಕ ಆಹಾರದ ನೆರವು ಗ್ರಾಮೀಣ ಸ್ವಚ್ಛತೆ, ಆರೋಗ್ಯ ಹಾಗೂ ಪೌಷ್ಠಿಕ ಕಾರ್ಯಕ್ರಮಗಳ ಅನುಷ್ಠಾನ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆರೋಗ್ಯ ಪೂರ್ಣ ಸಮಾಜ ನಿಮರ್ಾಣಕ್ಕೆ ಸಮನ್ವಯದಿಂದ ಕಾರ್ಯನಿರ್ವಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಬೆಳಗಾವಿ ವಿಭಾಗದ ಎಸ್.ಎಂ.ಓ. ಡಾ.ಸಿದ್ಧಲಿಂಗಯ್ಯ ಅವರು ತಿಳಿಸಿದರು.
ಸಭೆಯಲ್ಲಿ ಹಾವೇರಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಒಳಗೊಂಡಂತೆ ವಿವಿಧ ತಾಲೂಕು ಆರೋಗ್ಯಾಧಿಕಾರಿಗಳು, ಕಾರ್ಯಕ್ರಮ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 