ಚಿಕ್ಕೋಡಿಯಲ್ಲಿ ಆರಂಭವಾಗದ ಇಂದಿರಾ ಕ್ಯಾಂಟಿನಗಳು

ಚಿಕ್ಕೋಡಿಯಲ್ಲಿ ಆರಂಭವಾಗದ ಇಂದಿರಾ ಕ್ಯಾಂಟಿನಗಳು Indira Cantinas not started in Chikkodi

                                 ಚಿಕ್ಕೋಡಿ 28 : ಕಾಂಗ್ರೆಸ್ ಸರ್ಕಾರದ ಪ್ರಮುಖ ಸಾಮಾಜಿಕ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ಚಿಕ್ಕೋಡಿ ಪಟ್ಟಣಕ್ಕೆ ಸಿಗುವ ನೀರೀಕ್ಷೆ ಈವರೆಗೂ ಈಡೇರಿಕೆಯಾಗಿಲ್ಲ.ಇದರಿಂದ ಸಾರ್ವಜನಿಕರು ಸರಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.ಚಿಕ್ಕೋಡಿ ಪಟ್ಟಣದಲ್ಲಿ ಎರಡು ಇಂದಿರಾ ಕ್ಯಾಂಟೀನ್ ಕಟ್ಟಡಗಳು ಪೂರ್ಣಗೊಂಡಿದ್ದರೂ, ಯಾವುದೇ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಬಡ, ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಸಸ್ಯಾಹಾರ, ಮಧ್ಯಾಹ್ನ ಭೋಜನ ಸೇವೆ ಲಭ್ಯವಾಗುವ ಸಾಧ್ಯತೆ ಇಲ್ಲವಾಗಿದೆ.ಜಿಲ್ಲಾ ಕೇಂದ್ರದ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ಪಟ್ಟಣದಲ್ಲಿ ಕಟ್ಟಡಗಳು ಪೂರ್ಣಗೊಂಡು ವರ್ಷ ಕಳೆದಿವೆ.ಆದರೂ ಉದ್ಘಾಟನೆಯ ವ್ಯವಸ್ಥೆ ಇಲ್ಲದೆ ನಿಂತಿರುವುದು ಸೂಕ್ಷ್ಮ ಪ್ರಶ್ನೆ ಎದ್ದಿದೆ.

                         ಇತ್ತೀಚೆಗೆ, ನಿರ್ಮಾಣಗೊಂಡಿರುವ ಕಟ್ಟಡವನ್ನು ಕೆಲ ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿವೆ ಎಂಬ ಮಾಹಿತಿ ಕೂಡ ಹೊರಬಂದಿದೆ. ಆದರೆ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಇಂದಿರಾ ಕ್ಯಾಂಟೀನ್ ಯೋಜನೆಗೆ ಸೂಕ್ತ ಉತ್ತೇಜನ ನೀಡಿಲ್ಲ ಎನ್ನುವುದು ಸಾರ್ವಜನಿಕ ಕುತೂಹಲಕ್ಕೆ ವಿಷಯವಾಗಿದೆ.ಪಟ್ಟಣದ ಮಿನಿ ವಿಧಾನಸೌಧ, ತಾಲೂಕು ಪಂಚಾಯತಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬರುವ ಬಡ ಜನರಿಗೆ ಅನುಕೂಲವಾಗಲು, ಬಿಇಒ ಕಚೇರಿ ಹತ್ತಿರ ಒಂದು ಕ್ಯಾಂಟೀನ್ ಕಟ್ಟಡ ನಿರ್ಮಿಸಲಾಗಿದೆ. ಇನ್ನು ಸಾರ್ವಜನಿಕ ಆಸ್ಪತ್ರೆಗಳಿಗೆ ಬರುವ ಜನರಿಗೆ ಸಹಾಯವಾಗಲು ಹೆಸ್ಕಾಂ ಬಳಿಯಲ್ಲಿಯೂ ಮತ್ತೊಂದು ಕ್ಯಾಂಟೀನ್ ಕಟ್ಟಡ ನಿರ್ಮಾಣವಾಗಿದೆ. ಆದರೆ, ಈ ಕಟ್ಟಡಗಳ ಕಾರ್ಯಗತಗೊಳಿಸುವ ಪ್ರಕ್ರಿಯೆಯಲ್ಲಿ ನಿರಂತರ ವಿಳಂಬ ಉಂಟಾಗುತ್ತಿರುವುದು,

                     ಯೋಜನೆಯ ಮೂಲ ಉದ್ದೇಶವನ್ನು ಸಮರ​‍್ಕವಾಗಿ ಸಾಧಿಸಲು ಅಡ್ಡಿಪಡಿಸುತ್ತಿದೆ. ಸಾರ್ವಜನಿಕರು ಸವಾಲಿನಲ್ಲಿದ್ದು, ಜಿಲ್ಲಾಡಳಿತದಿಂದ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.ಕೋಟ್‌ಪಟ್ಟಣದಲ್ಲಿ ಎರಡು ಸ್ಥಳಗಳಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡ ಮತ್ತು ಆಹಾರ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ರಾಜ್ಯ ಮಟ್ಟದಲ್ಲಿ ನಡೆಯುತ್ತವೆ. ಪುರಸಭೆಯು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಮಾತ್ರ ಹೊಂದಿದೆ. ಮುಂದಿನ ಕೆಲವು ದಿನಗಳಲ್ಲಿ ಇದು ಉದ್ಘಾಟನೆಗೊಳ್ಳಲಿದೆ.-ಜಗದೀಶ್ ಈಟಿ ಮುಖ್ಯಾಧಿಕಾರಿ ಚಿಕ್ಕೋಡಿಪೋಟೋ: ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ ಪೂರ್ಣವಾದ ಕಟ್ಟಡಗಳು.