ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ನಶಿಸಿ ಹೋಗುತ್ತಿದೆ ದೇಶೀಯ ಜನಪದ ಜೀವನಶೈಲಿ: ಪ್ರೊ.ಕೆ.ಎಸ್‌.ಕೌಜಲಗಿ

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ನಶಿಸಿ ಹೋಗುತ್ತಿದೆ ದೇಶೀಯ ಜನಪದ ಜೀವನಶೈಲಿ: ಪ್ರೊ.ಕೆ.ಎಸ್‌.ಕೌಜಲಗಿ  Indigenous folk lifestyle is disappearing due to the influence of Western culture: Prof. K.S. Kouzal


ಬೆಳಗಾವಿ 10: ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗೂ ಜಿಲ್ಲಾ ಘಟಕ ಬೆಳಗಾವಿ ಇವುಗಳ ಸಹಯೋಗದಲ್ಲಿ ಇಂದು ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಬೆಳಗಾವಿಯ ಶಿವಬಸವ ನಗರದ ಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ  ಜರುಗಿತು.  

ಸಮಾರಂಭದ ಉದ್ಘಾಟನೆ ನೆರವೇರಿಸಿದ ಕನ್ನಡ ಜಾನಪದ ಪರಿಷತ್ ಬೆಂಗಳೂರು ರಾಜ್ಯ ಕಾರ್ಯದರ್ಶಿ ಪ್ರೊ.ಕೆ.ಎಸ್‌.ಕೌಜಲಗಿ ಇವರು ಮಾತನಾಡಿ ಆಧುನಿಕ ಜೀವನ ಕ್ರಮವು ಭಾರತೀಯ ಗ್ರಾಮೀಣ ಸಾಮಾಜಿಕ ಜೀವನದ ಇತಿಹಾಸ ಮತ್ತು ಪರಂಪರೆಯನ್ನು ನಾಶದ ಅಂಚಿಗೆ ತಂದಿದೆ. ಹಬ್ಬ-ಹರಿದಿನಗಳು, ಆಚರಣೆ, ಉತ್ಸವಗಳು ಆಡಂಬರದ ಕಾರ್ಯಕ್ರಮಗಳಾಗಿ ಬಿಂಬಿಸುವ ಸೊಗಸಾದ ಜನಪದ ಜೀವನದ ಸೊಗಡನ್ನು ನಾಶಮಾಡುತ್ತಿವೆ. ಅದಕ್ಕಾಗಿ ಕನ್ನಡ ಜಾನಪದ ಪರಿಷತ್ ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿವ ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಬೇಕಿದೆ ಎಂದು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಶ್ರಾಂತ ಪ್ರಾಚಾರ್ಯ ಪ್ರೊ.ಯು.ಎನ್‌.ಸಂಗನಾಳಮಠ ಇವರು ಮಾತನಾಡಿ ಜನಪದ, ಜಾನಪದ ಜೀವನವು  ಸಂಘಟನೆ, ಸಹಕಾರ ಮತ್ತು ಸಹಜೀವನವನ್ನು ಕಲಿಸುವ, ಅನುಭವಿಸುವ ವ್ಯವಸ್ಥೆಯನ್ನು ತಿಳಿಸುತ್ತದೆ ಎಂದರು.  

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಶ್ರಾಂತ ಪ್ರಾಚಾರ್ಯರಾದ ಡಾ.ಬಿ.ಜಿ.ಧಾರವಾಡ ಇವರು ಮಾತನಾಡಿ ಕನ್ನಡ ಜಾನಪದ ಪರಿಷತ್ ನ ಜವಾಬ್ದಾರಿಗಳು ಹಾಗೂ ಕರ್ತವ್ಯ ಗುರುತರವಾಗಿದೆ. ಪರಿಷತ್‌ನ ಕಾರ್ಯಕ್ರಮಗಳು ಸರ್ಕಾರದ ಗಮನ ಸೆಳೆಯುವಂತಾಗಬೇಕು. ಈ ನಿಟ್ಟಿನಲ್ಲಿ ತಾಲೂಕು ಹಾಗೂ ಜಿಲ್ಲಾ ಘಟಕದ ಸಹಯೋಗದಲ್ಲಿ ಜಾಗ್ರತ ಕಾರ್ಯಕ್ರಮಗಳು ಗ್ರಾಮೀಣ ಶಾಲಾ ಕಾಲೇಜು ಮಟ್ಟದಿಂದ ನಗರ ಮಟ್ಟದ ವರೆಗೂ ಜರುಗಿಸಬೇಕು ಎಂದರು. 

ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಗುಂಡ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಿ.ಪಿ.ಲಮಾಣಿ ಇವರು ಸರ್ವರನ್ನು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಆರಿ​‍್ಪ.ಪಾಟೀಲ, ಆರಿ​‍್ಬ.ಬನಶಂಕರಿ, ಕಾಡಪ್ಪನವರ, ಸದಾನಂದ ಎಂ ಬೆಂಗಳೂರು ಸುಳಕೂಡೆ, ಕಲಾವಿದರಾದ ಅದ್ರೃಷ್ಯ ಅಂತಣ್ಣವರ, ಗಣಪತಿ ದೇಗಾನಟ್ಟಿ ಹಾಗೂ ಹಲವು ಸಾಹಿತಿಗಳು, ಕಲಾವಿದರು, ಅನ್ನಪೂರ್ಣೇಶ್ವರಿ ಹ್ಯುಮ್ಯಾನಿಟಿ ಫೌಂಡೇಶನ್ ಅಧ್ಯಕ್ಷ ಮಹಾಂತೇಶ್ ಕಡಲಗಿ  ಪಾಲ್ಗೊಂಡಿದ್ದರು.  

ನೂತನ ಪದಾಧಿಕಾರಿಗಳು ಬಿ.ಪಿ. ಲಮಾಣಿ ಅಧ್ಯಕ್ಷರು, ಆರತಿ ನಂದಿ ಪ್ರಧಾನ ಕಾರ್ಯದರ್ಶಿ, ಲಕ್ಷ್ಮಣ ಲಮಾಣಿ ಪತ್ರಿಕೆ ಕಾರ್ಯದರ್ಶಿ, ರಾಮಪ್ಪ ಬನಶಂಕರಿ ಜಂಟಿ ಕಾರ್ಯದರ್ಶಿ, ಪ್ರಕಾಶ್ ರಾಠೋಡ್ ಸಂಘಟನಾ ಕಾರ್ಯದರ್ಶಿ, ರಾಜಕುಮಾರ್ ನಾಯಕ್ ಸಲಸಂಚ ಚಾಲಕರು, ವಿನೋದ್ ಪಾಟೀಲ್, ಅರ್ಜುನ್ ರಾಠೋಡ, ಹನುಮಂತ ರಾಠೋಡ ಸದಸ್ಯರಾಗಿ, ರಾಮಪ್ಪ ಪೂಜಾರಿ ಪದನಿಮಿತ್ಯ ಸದಸ್ಯರಾಗಿ ಹನುಮಂತ್ ಪಮ್ಮಾರ್ ಅತಿಥಿಗಳನ್ನು ಸನ್ಮಾನಿಸಿದರು. ಪ್ರೇಮಾ ರಾಠೋಡ ಪ್ರಾರ್ಥಿಸಿದರು. ಪ್ರಾಧ್ಯಾಪಕಿ ಅಶ್ವಿನಿ ಪಡಿಯಣ್ಣವರ ನಿರೂಪಿಸಿದರು. ಆರ್ ಬಿ ಬನಶಂಕರಿ ಅವರು ವಂದನಾರೆ​‍್ಣ ನೆರವೇರಿಸಿದರು