ಅಡುಗೆ, ಉಡುಗೆ ತೊಡುಗೆಯಲ್ಲಿ ಭಾರತೀಯರು ಶ್ರೀಮಂತರು: ಸಪನಾ ಅನಿಗೋಳ

ಅಡುಗೆ, ಉಡುಗೆ ತೊಡುಗೆಯಲ್ಲಿ ಭಾರತೀಯರು ಶ್ರೀಮಂತರು: ಸಪನಾ ಅನಿಗೋಳ  Indians are rich in their culinary and sartorial traditions: Sapana Anigol

ಲೋಕದರ್ಶನ ವರದಿ 

ಮಹಾಲಿಂಗಪುರ   05: ಅಡುಗೆ, ಉಡುಗೆ ತೊಡುಗೆಯಲ್ಲಿ ಭಾರತೀಯರು ಶ್ರೀಮಂತರು ಈ ಯಾವ ವಿಷಯದಲ್ಲಿಯೂ ವಿದೇಶಿಯರ ಅನುಕರಣೆ ಬೇಡ ಎಂದು ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತಿ ಸಂಪನ್ಮೂಲ ವ್ಯಕ್ತಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಡಾ.ಸಪನಾ ಅನಿಗೋಳ ಹೇಳಿದರು. ಸ್ಥಳೀಯ ಕೆಎ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ರೂಪ, ಹಣಕ್ಕಿಂತ ಹೆತ್ತವರಿಗೆ ಹೆಸರು ತರುವುದೇ ಸಾಧನೆ, ಜಗತ್ತಿನ ಶ್ರೀಮಂತ ವ್ಯಕ್ತಿ ಎಲಾನ್ ಮಾಸ್ಕ್‌  ಮತ್ತು ಜಗತ್ತಿನ ಸ್ಫುರದ್ರೂಪಿ ನಾಯಕ ನಟ ಹೃತಿಕ್ ರೋಷನ್ ಈರ್ವರೂ ತಮ್ಮ ಹೆಂಡತಿಯಿಂದ ಡೈವೋರ್ಸ್‌ ಪಡೆದಿದ್ದಾರೆ ಅಂದರೆ ಬದುಕಿನ ಸೌಂದರ್ಯ, ಆನಂದ ಸಂಸ್ಕಾರದಲ್ಲಿದೆ. ಹೆತ್ತವರು ಮತ್ತು ಹಿರಿಯರ ಮಾರ್ಗದರ್ಶನದಲ್ಲಿದೆ ಆದ್ದರಿಂದ ಸಾಧನೆಗೆ ಅಡ್ಡಿಯಾಗುವ ಎಲ್ಲಾ ನಕಾರಾತ್ಮಕ ಚಟುವಟಿಕೆಗಳಿಂದ ದೂರ ಇರಿ ಎಂದರು. 

ರಾಷ್ಟ್ರೋತ್ಥಾನ ಜಿಲ್ಲಾ ಸಹ ಸಂಚಾಲಕ ನಾರನಗೌಡ ಉತ್ತಂಗಿ ಮಾತನಾಡಿ, ತಂದೆ, ತಾಯಿ, ಗುರು ಹಿರಿಯರ ಆಶೀರ್ವಾದ ಭಗವಂತನ ಆಶೀರ್ವಾದ ಇದ್ದಂತೆ. ಹೆತ್ತವರು, ಗುರು, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು ಎಂದರು. ಸಿವಿಲ್ ವಿಭಾಗದ ಮುಖ್ಯಸ್ಥ ಎಸ್‌.ಎಂ.ಮೂಶಿ ಮಾತನಾಡಿ,ಕೌಶಲ್ಯಗಳಿಂದ ಮಾತ್ರ ಈ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಸಾಧ್ಯ, ಸಂಸ್ಕಾರದೊಂದಿಗೆ ಉತ್ತಮ ಕೌಶಲ್ಯ ಬೆಳೆಸಿಕೊಳ್ಳಿ ಎಂದರು. ಕಾಲೇಜಿನ ಪ್ರಾಚಾರ್ಯ ಎಸ್‌.ಐ.ಕುಂದಗೋಳ ಅಧ್ಯಕ್ಷತೆ ವಹಿಸಿದ್ದರು. ಡಿಪ್ಲೊಮಾ ಎಲ್ಲಾ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು. ವಿಜ್ಞಾನ ವಿಭಾಗದ ಉಪನ್ಯಾಸಕಿ ಬೋರಮ್ಮ ಸೊಂಡಿ ಸ್ವಾಗತಿಸಿ, ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಯು.ಡಿ. ಹಾದಿಮನಿ ಪರಿಚಯಿಸಿ, ಸಿಎ??? ವಿಭಾಗದ ಮುಖ್ಯಸ್ಥೆ ಸುಮನ್ ಖೋತ್ ನಿರೂಪಿಸಿದರು.