ಪ್ರೊ. ಅಶೋಕ ಪಾಟೀಲರಿಗೆ ಭಾರತೀಯ ಸಾಧಕರ ಪ್ರಶಸ್ತಿ
Indian Achievers Award for Prof. Ashoka Patil
ಧಾರವಾಡ 05: ಸಾರ್ವಜನಿಕ ಬದುಕಿನ ಮೇರು ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಸ್ಥೆಯಾದ ಭಾರತೀಯ ಸಾಧಕರ ವೇದಿಕೆಯು ಕೊಡಮಾಡುವ 2025ರ ‘ಭಾರತೀಯ ಸಾಧಕರ ಪ್ರಶಸಿ’್ತಯು ಜಾರ್ಖಂಡ ರಾಜ್ಯದ ರಾಂಚಿಯ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ರಾಮಚಂದ್ರ ಪಾಟೀಲ ಅವರಿಗೆ ಲಭಿಸಿದೆ.
ಮೂಲತಃ ಧಾರವಾಡದವರೇ ಆಗಿರುವ ಡಾ. ಅಶೋಕ ಪಾಟೀಲ ಅವರು ನಗರದ ಖ್ಯಾತ ಮಕ್ಕಳ ಸಾಹಿತಿ ಹಾಗೂ ಡಯಟ್‌ನ ವಿಶ್ರಾಂತ ಉಪನ್ಯಾಸಕ ದಿ. ರಾಮಚಂದ್ರ ಪಾಟೀಲ ಅವರ ಪುತ್ರರು. ಕ.ವಿ.ವಿ. ಮೂಲಕ ಮೊದಲ ರಾ್ಯಂಕ್ದೊಂದಿಗೆ ಎಲ್.ಎಲ್.ಎಂ. ಪದವಿ ಪಡೆದಿರುವ ಇವರು, ಕಾನೂನು ವಿಷಯದಲ್ಲಿಯೇ ಪಿ.ಎಚ್‌ಡಿ. ಪದವಿ ಸಂಪಾದಿಸಿದ್ದಾರೆ. ಶ್ರೇಷ್ಠ ಶಿಕ್ಷಣ ತಜ್ಞರಾಗಿ ಮತ್ತು ಕಾನೂನು ವಿದ್ವಾಂಸರಾಗಿ ಕಳೆದ 27 ವರ್ಷಗಳಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕ ಕಾನೂನು, ಸಾರ್ವಜನಿಕ ನೀತಿ ಮತ್ತು ಕಾನೂನು ಶಿಕ್ಷಣದ ವಿಕಾಸಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಗ್ರಾಹಕರ ಕಲ್ಯಾಣ, ಅಪರಾಧ ಹಾಗೂ ವಿಮಾ ಕಾನೂನುಗಳಲ್ಲಿ ವ್ಯಾಪಕ ಪರಿಣತಿ ಹೊಂದಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 