ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಭಾರತ ಮೂರನೇಯ ಸ್ಥಾನ
India ranks third in artificial intelligence technology
ವಿಜಯಪುರ: ಇಂದು ಕೃತಕ ಬುದ್ಧಿಮತ್ತೆ (ಎ.ಐ) ಇಡೀ ಜಗತ್ತಿನ ಎಲ್ಲ ಕ್ಷೇತ್ರಗಳನ್ನು ಆವರಿಸಿದ್ದು, ತಾಂತ್ರಿಕ ಜಗತ್ತು ಬಹಳಷ್ಟು ಬದಲಾವಣೆಗೆ ಒಡ್ಡಿಕೊಳ್ಳುತ್ತಿದೆ. ಆರೋಗ್ಯ ಸೇವೆಯಿಂದ ಹಿಡಿದು ಹಣಕಾಸು ವಲಯದವರೆಗೆ ತನ್ನ ಪ್ರಭಾವವನ್ನು ಬೀರುತ್ತಿದ್ದು, ಉದ್ಯೋಗಾಕಾಂಕ್ಷಿಗಳು ವಿನೂತನವಾದ ಕೌಶಲ್ಯಗಳನ್ನು ಹೊಂದಬೇಕಾಗಿರುವದು ಇಂದಿನ ಅಗತ್ಯತೆಯಾಗಿದೆ. ಸ್ಪರ್ಧಾತ್ಮಕತೆಯೊಂದಿಗೆ ಹೊಂದಿಕೊಳ್ಳಲು ತಾಂತ್ರಿಕ ವೃತ್ತಪರರು ವಿಶೇಷವಾಗಿ ಮಷಿನ್ ಲರ್ನಿಂಗ್, ಎ.ಐ.ಕಾನ್ಸೆಪ್ಟ್, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯುರಿಟಿನಂತಹ ಮಲ್ಟಿಸ್ಕಿಲ್ಕಗಳನ್ನು ಪಡೆದುಕೊಳ್ಳಬೇಕಾಗಿದೆ. ಇತ್ತೀಚಿನ ವರದಿ ಪ್ರಕಾರ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಭಾರತ ವಿಶ್ವದ ಮೂರನೇಯ ಶ್ರೇಯಾಂಕ ಪಡೆದಿದೆ ಎಂದು ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯ ಸಂಗಮೇಶ್ವರನಗರದ ಎಂ.ಕೆ.ಎಸ್. ಕಾಲೇಜಿನಲ್ಲಿ ಮಾರ್ಚ 24 ್ಘ 25 ರಂದು ನಡೆದ ರಾಷ್ಟ್ರೀಯ ವಿಚಾರಸಂಕೀರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು. ಅವರು ಮಾತನಾಡುತ್ತಾ, ಕಾರ್ೋರೇಟ್ ಜಗತ್ತಿನಲ್ಲಿ ಉದ್ಯೋಗಿಗಳು ತಮ್ಮ ಸ್ವಂತ ಭಾವನೆಗಳನ್ನು ಅರ್ಥೈಸಿಕೊಂಡು ಇತರ ಸಹದ್ಯೋಗಿಗಳ ಶಕ್ತಿ-ಸಾಮರ್ಥ್ಯ ಗುರುತಿಸಿ, ಒತ್ತಡ ನಿವಾರಣೆ, ಪರಿಣಾಮಕಾರಿ ಸಂವಹನ, ಸಹಾನುಭೂತಿ ಮತ್ತು ಸವಾಲುಗಳನ್ನು ನಿಭಾಯಿಸಲು ಭಾವನಾತ್ಮಕ ಬುದ್ಧಿಮತ್ತೆ ಪ್ರಮುಖ ಪಾತ್ರವಹಿಸುತ್ತದೆ.
ಕಂಪನಿಯಲ್ಲಿ ಸಹದ್ಯೋಗಿಗಳ ಸಮಸ್ಯೆಗಳು, ಭಾವನೆಗಳು, ಮಾನಸಿಕ ಆಲೋಚನೆ, ಚಿಂತನೆ, ಕೆಲಸದ ಸಂತೃಪ್ತಿ, ಗುಣಮಟ್ಟದ ಕಾರ್ಯನಿರ್ವಹಣೆಗೆ ಉತ್ತಮ ಪರಿಸರವನ್ನು ನಿರ್ಮಿಸುವುದರ ಮೂಲಕ ಭಾವನಾತ್ಮಕ ಸಂಬಂಧವನ್ನು ಹೊಂದಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ವಿಷಯ ಬುದ್ದಿಮತ್ತೆಗಿಂತಲೂ ಭಾವನಾತ್ಮಕ ಬುದ್ಧಿಮತ್ತೆಯು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ. ಭಾರತದ ವೇಗವಾಗಿ ಬೆಳೆಯುತ್ತಿರುವ ಕಾರ್ೋರೇಟ್ ಕ್ಷೇತ್ರದಲ್ಲಿ ಕೇವಲ ತಾಂತ್ರಿಕ ಕೌಶಲ್ಯಗಳು ಸಾಲದು ಎಂದರು.
ವಿಚಾರ ಸಂಕೀರಣದ ಉದ್ಘಾಟನೆಯನ್ನು ಪುಣೆ ವಿಶ್ವವಿದ್ಯಾಲಯದ ಕುಲಪತಿ ಡಾ. ಪರಾಗ ಕಾಳ್ಕರ ಅವರು ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಶ್ರೀ ಸತೀಶರಾವ್ ಕಾಕಡೆ, ಫರಗಷನ್ ಕಾಲೇಜಿನ ಡ. ಶ್ಯಾಮ್ ಮುಡೆ, ಎರಡನೇಯ ಗೋಷ್ಠಿಯ ಸಂಪನ್ಮೂಲ ವ್ಯಕ್ತಿ ಡಾ. ವಿರೇಂದ್ರಕುಮಾರ ನರಸಲಗಿ, ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ವಾಯದಂಡೆ, ಡಾ, ಸಂಜು ಜಾಧವ, ರಾಹುಲ ಖರಾತ ಇನ್ನಿತರರು ಸಹ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಈ ರಾಷ್ಟ್ರೀಯ ವಿಚಾರಸಂಕೀರಣದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 300 ಕ್ಕೂ ಹೆಚ್ಚು ಪ್ರಾಧ್ಯಾಪಕರು ಹಾಗೂ ಸಂಶೋಧನಾರ್ಥಿಗಳು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 