ಪ್ರಧಾನಿ ಮೋದಿ ದಕ್ಷ ಆಡಳಿತ ವಿಶ್ವ ಗುರುವಾಗುವತ್ತ ಭಾರತ: ನ್ಯಾಯವಾದಿ ಬಾಬು ಹಿಪ್ಪರಗಿ
India on track to become world guru with PM Modi's efficient governance: Lawyer Babu Hipparagi
ವಿಜಯಪುರ 23: ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತದಿಂದ ದೇಶ ಅಭಿವೃದ್ದಿಯತ್ತ ಶರವೇಗದಲ್ಲಿ ಸಾಗುತ್ತಿದ್ದು ಕೆಲವೇ ವರ್ಷಗಳಲ್ಲಿ ಭಾರತ ವಿಶ್ವಗುರುವಾಗುವುದು ಖಚಿತ ಎಂದು ಖ್ಯಾತ ನ್ಯಾಯವಾದಿ ಬಾಬು ಹಿಪ್ಪರಗಿ ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚೆಗೆ ಯೋಗಾಪು ರದ ಶ್ರೀ ಸತ್ಯ ಸಾಯಿಬಾಬಾ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ ಹಾಗೂ ಯುಥ್ ಯುನಿವರ್ಸಲ್ ವ್ಹಾಲೆಂಟರಿ ಅಸೋಸಿಯೇಶನ್ (ಯುವ) (ರಿ) ವಿಜಯಪುರ ಇವರ ಸಂಯುಕ್ತಾಶ್ರ ಯದಲ್ಲಿ ಭಾರತದ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ 75 ನೆಯ ಜನ್ಮ ದಿನಾಚರಣೆಯ ಅಂಗವಾಗಿ "ವಿಕಾಸ ದಿವಸ 2025 ಹಾಗೂ ವಿದ್ಯಾರ್ಥಿಗ ಳಿಗೆ ಪ್ರಬಂಧ ಸ್ಪರ್ಧೆ" ಕಾರ್ಯಕ್ರ ಮವನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.
ಶತ್ರುವಿಗೆ ಶತ್ರು, ಮಿತ್ರರಿಗೆ ಮಿತ್ರ ಎನ್ನುವ ಘಟ್ಟಿ ನಿಲುವುಗಳೊಂದಿಗೆ ಪ್ರಧಾನಿ ಮೋದಿ ಅವರು ವಿಶ್ವದ ವಿವಿಧ ರಾಷ್ಟ್ರಗಳೊಂದಿಗೆ ಸೌಹಾರ್ಧ ಸಂಬಂಧ ಬೆಸೆದಿದ್ದು, ಸಭಕಾ ಸಾಥ್ ಸಭಕಾ ವಿಕಾಸ, ವಿಕಸಿತ ಭಾರತ. ಡಿಜಿಟಲ್ ಇಂಡಿಯಾ ಕೌಶಲ್ಯ ಭಾರತ್ ಮಿಷನ್ ನಂತಹ ಯೋಜನೆ ಗಳಿಂದ ಕ್ರಾಂತಿಕಾರಕ ಬದಲಾವಣೆ ತರಲಾಗಿದ್ದು ಮಹಿಳೆಯರು, ಮಕ್ಕಳು, ಹಿರಿಯರು, ಯುವಕರು, ವಿದ್ಯಾರ್ಥಿ ಗಳು ರೈತರು ಕಾರ್ಮಿಕರು ಎಲ್ಲರ ಪ್ರಗತಿಗೆ ಮುನ್ನುಡಿ ಬರೆದಿದ್ದಾರೆ. ಅವರ ಜನ್ಮ ದಿನವಾದ ಇಂದು ವಿಕಾಸ ದಿವಸ ಎಂದು ಆಚರಿಸಲಾಗು ತ್ತಿದ್ದು. ಅವರು ನೂರಾರು ವರ್ಷ ಬಾಳಲಿ. ದೇಶವನ್ನು ಆಳಲಿ. ಪ್ರಗತಿಯತ್ತ ಮುನ್ನಡೆಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಸಿರು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಕಾಶ ರಜಪೂತ ಮಾತನಾಡಿ ಯುವ ಶಕ್ತಿಯೇ ವಿಶ್ವ ಶಕ್ತಿಯಾಗಿದ್ದು, ಪ್ರಪಂಚದ ಅರ್ಧಕ್ಕಿಂತ ಹೆಚ್ಚಿನ ಜನಸಂಖ್ಯೆ ಯುವಕರೇ ಆಗಿದ್ದು, ಬದಲಾವಣೆಗೆ ಮುನ್ನುಡಿ ಬರೆದವರು ಯುವಕರೇ ಆಗಿದ್ದಾರೆ ಕಾರಣ ವಿದ್ಯಾರ್ಥಿ ಜೀವನದಲ್ಲಿ ಯುವಕ ಯುವತಿ ಯರು ಅಡ್ಡದಾರಿ ತುಳಿಯದೆ ವಿದ್ಯೆ ವಿನಯ. ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ದೇಶದ ಪ್ರಗತಿಗೆ ನಾಂದಿ ಹಾಡಿ. ಹೆತ್ತ ತಂದೆ ತಾಯಿ. ಕಲಿಸಿದ ಗುರುಗಳು, ಬಂಧು ಮಿತ್ರರಿಗೆ ನಾಡಿಗೆ ಕೀರ್ತಿ ತರಬೇಕು. ಕಾರ್ಮಿಕರ ಜೀವನ ಸುಧಾರಿಸಲು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಕಾರ್ಮಿಕರ ಗುರುತಿನ ಪತ್ರ ಹೊಂದಿರುವ ತಂದೆ ತಾಯಿಯ ಮಕ್ಕಳಿಗೆ ಸ್ಕಾಲರ್ ಶಿಪ್ ಯೊಜನೆಯನ್ನು ಕಾರ್ಮಿಕರ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಪರಶುರಾಮ ಮಾದರ ಅವರು ಯುವ ಜನತೆಯಲ್ಲಿ ದೇಶಪ್ರೇಮ, ಸಮಾಜಸೇವೆ, ಮಾನವೀಯ ಮೌಲ್ಯಗಳನ್ನು ಬಿತ್ತುವ ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಉತ್ಸಾಹ, ಸ್ಪರ್ಧಾ ಮನೋಭಾವ, ನಾಯಕತ್ವಗುಣ, ಸ್ವಾವಲಂಬಿ ಜೀವನ ಬೆಳೆಯಲು ಸಾದ್ಯವಾಗುತ್ತದೆ. ನಮ್ಮ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಇಂಥಹ ಕಾರ್ಯಕ್ರಮಗಳಿಗೆ ತೆರೆದ ಮನಸ್ಸು ತೆರೆದ ಬಾಗಿಲಿನ ತುಂಬು ಹೃದಯದ ಸ್ವಾಗತವಿದೆ. ಮೇರಾ ಯುವ ಭಾರತ್ ಮತ್ತು ಯುವಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ಸಮಾರಂಭ ನಮ್ಮಲ್ಲಿ ಹೊಸ ಹುಮ್ಮಸ್ಸು, ಚೈತನ್ಯ ತಂದಿದೆ ಕಾರಣ ಕೌಶಲ್ಯಾಭಿವೃದ್ಧಿ. ವ್ಯಕ್ತಿತ್ವ ವಿಕಸನ, ಶಿಕ್ಷಣ ವಿಜ್ಞಾನ, ತಂತ್ರಜ್ಞಾನ ಮಹತ್ವ ಕುರಿತು ಮಾತನಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಯುಥ್ ಯುನಿವರ್ಸಲ್ ವ್ಹಾಲೆಂಟರೆ ಅಸೋಸಿಯೇಶನ್ (ಯುವ) ಸಂಸ್ಥೆ ಅಧ್ಯಕ್ಷ ನ್ಯಾಯವಾದಿ ದಾನೇಶ ಅವಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈ ಭಾರತ್ ಇಲಾಖೆಯ ಗಣಕ ತಂತ್ರಜ್ಞ ಸೃಜನ್ ರೆಡ್ಡಿ, ಸಮಾಜ ಕಾರ್ಯಕರ್ತ ಅವಿನಾಶ್ ನಾಯಕ, ಆನಂದ ರಜಪೂತ, ಮಹಾತ್ಮಾ ಗಾಂಧಿ ನಗರದ ಸಿಸ್ಟರ್ ನಿವೇದಿತಾ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲಾ ಅವಟಿ. ವೇದಿಕೆಯಲ್ಲಿ ಉಪಸ್ಥಿತರಿದ್ದು ಸಾಂದರ್ಭಿಕವಾಗಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರಿ್ಡಸಿ, ವಿಜೇತರಿಗೆ ಗ್ರಂಥ ಮತ್ತು ಪದಕ ಬಹುಮಾನ ನೀಡಿ ಗೌರವಿಸಲಾಯಿತು. ಶಿಕ್ಷಕರಾದ ಬಿ.ಜಿ. ಒಡೆಯರ, ಕಲ್ಲೇಶ ತಳವಾರ, ಹೇಮಂತ ಅವಟಿ ಮುಂತಾದವರು ಉಪಸ್ಥಿತರಿದ್ದರು.
ಕುಮಾರಿ ಭಾಗ್ಯಶ್ರೀ ರಜಪೂತ, ಶ್ರಿದೇವಿ ಕೆರೂರ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ನಿರೂಪಿಸಿ ಶಂಕ್ರಮ್ಮ ಕಗ್ಗೋಡ ನಿರೂಪಿಸಿದರು. ರೂಪ ಬಸಣ್ಣವರ ವಂದಿಸಿದರು. ಅಲ್ಪೊಪ ಹಾರ ವಿತರಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 