ಯೋಗಕ್ಕೆ ವಿಶ್ವ ಗುರು ಭಾರತ : ಪವನ ಸೋರಗಾಂವಿ

ಯೋಗಕ್ಕೆ ವಿಶ್ವ ಗುರು ಭಾರತ : ಪವನ ಸೋರಗಾಂವಿ India is the world guru of yoga: Pawan Soragavi

ಮಹಾಲಿಂಗಪುರ 21: ಭಾರತದ ಋಷಿ ಮುನಿಗಳು ತಮ್ಮ ಜೀವನ ಗಟ್ಟಿಯಾಗರಲು ಯೋಗವನ್ನು ಕಲಿತು, ಅದನ್ನು, ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ರೋಗಮುಕ್ತ ಜೀವನ ನಡೆಸಿ ಜಗತ್ತಿಗೆ ಯೋಗದಲ್ಲಿ ಗುರುವಾದರೂ ಎಂದು ನಗರದ ಖ್ಯಾತ ವೈದ್ಯರಾದ ಡಾ ಪವನ ಸೋರಗಾಂವಿ ಹೇಳಿದರು. 

 ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಡೆದ ವಿಶ್ವದ 11 ನೇ ಯೋಗಾ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯೋಗ ಮಾಡುವ ಮೂಲಕ ಉದ್ಘಾಟಸಿ ಮಾತನಾಡಿ ಹಿಂದೆ ವಿಶ್ವದಲ್ಲಿ ಮೇಲೆ ಅನೇಕ ಬಾರಿ ಭೌತಿಕ ಮತ್ತು ಸಂಸ್ಕೃತಿಕ ದಾಳಿಗಳಿಂದ ಬಹುತೇಕ ಮಾನವ ಸಮುದಾಯಗಳು ತಮ್ಮ ಪ್ರಾಚೀನ ಚಿಂತನೆಗಳನ್ನು ಮರೆಯುವಂತಾಯಿತು.ಅಂದು ಭಾರತೀಯ ಯೋಗವನ್ನು ತಿರಸ್ಕಾರ ಭಾವದಿಂದ ನೋಡಿದ ಜಗತ್ತು ಇಂದು ಪುರಸ್ಕರಿಸಿ ಅಪ್ಪಿಕೊಂಡಿದೆ. ಇಂದು ಜಗತ್ತಿನ ಒಟ್ಟು 191 ದೇಶಗಳ ಯೋಗ ಮಾಡಿ ರೋಗವನ್ನು ಓಷಧಿ ಇಲ್ಲದೆ ಗುಣಪಡಿಸಿಕೊಳ್ಳುತ್ತಿವೆ ಎಂದರು.  

ಗಣೇಶ ಮಂದಿರದಲ್ಲಿ ಯೋಗ: ಎಪಿಎಂಸಿ ಗಣೇಶ ಮಂದಿರದ ಭವನದಲ್ಲಿ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗ ಗುರು ಶಿವಕುಮಾರ ಪಾಟೀಲ ನಾವು ಬದುಕಿರುವ ಈ ಕಾಲದಲ್ಲಿ ಇನ್ನಷ್ಟು ಹೊಳಪನ್ನು ಪಡೆದುಕೊಂಡು ಪ್ರವರ್ಧಮಾನಕ್ಕೆ ಯೋಗಶಾಸ್ತ್ರ ಬಂದಿದೆ. ಭಾರತದ ನಾನಾ ಪರಂಪರೆಗಳಲ್ಲಿ ಪ್ರಚುರವಾಗಿದ್ದ ಚಿಂತನೆಗಳನ್ನೆಲ್ಲ ಒಟ್ಟಿಗೆ ಸೇರಿಸಿ ಯೋಗಸೂತ್ರಗಳ ರೂಪದಲ್ಲಿ ಕೊಡಮಾಡಿದವರು ಪತಂಜಲಿ ಮಹರ್ಷಿಗಳು. ಸಾಮಾನ್ಯ ಶಕಪೂರ್ವದ ಮೊದಲನೆಯ ಶತಮಾನವು ಇವರ ಕಾಲ ಎಂದು ಇತಿಹಾಸಕಾರರು ಗುರುತಿಸಿದ್ದು, ಅಲ್ಲಿಂದಾಚೆ ಯೋಗವು ನಮ್ಮ ಆರು ಆಸ್ತಿಕ ದರ್ಶನಗಳ ಸಾಲಿನಲ್ಲಿ ಒಂದಾಗಿದೆ. ಯಾರು ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಬದುಕುತ್ತಾರೋ ಅವರು ರೋಗಗಳಿಂದ ದೂರ ಇರುತ್ತಾರೆ. ಆನಂದಮಯ ಜೀವನ ಹೊಂದುತ್ತಾರೆ ಎಂದರು. 

ಬನಶಂಕರಿ ದೇವಸ್ಥಾನದಲ್ಲಿ : ನಗರ ಬಿಜೆಪಿ ಘಟಕದ ವತಿಯಿಂದ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ನಾಡದೇವಿ ಭಾವ ಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿ 11 ನೇ ಅಂತರರಾಷ್ಟ್ರೀಯ ಯೋಗದಿನಕ್ಕೆ ಚಾಲನೆ ನೀಡಿ ಮಾತನಾಡಿದ ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಯೋಗ ಇಂದು ವಿಶ್ವವನ್ನೇ ಆರೋಗ್ಯ ಪೂರ್ಣ ಬದುಕಿನತ್ತ ಒಯ್ಯುತ್ತಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ ವಿಶ್ವವನ್ನೇ ವ್ಯಾಪಿಸಿಕೊಂಡಿದೆ. ಹನ್ನೊಂದು ವರ್ಷದ ಹಿಂದೆ ಮೋದಿ ಅವರ ಕರೆಗೆ ಕಿವಿ ಕೊಟ್ಟ ಜಗತ್ತು ಇಂದು ಸುಮಾರು 191 ದೇಶಗಳು ಯೋಗ ಮಾಡುತ್ತಿವೆ. ಯೋಗಕ್ಕೆ ಭಾರತವೇ ವಿಶ್ವ ಗುರು ಆಗಿದೆ ಎಂದು ಹೇಳಿದರು. 

ಬಸನಗೌಡ ಪಾಟೀಲ, ಜಿ ಎಸ್ ಗೊಂಬಿ, ಬಸವರಾಜ್ ನಾಗನೂರ್, ಮಾರುತಿ ಕರೋಶಿ, ಸಂಜು ಭಾರಕೋಲ, ಶಂಕರಗೌಡ ಪಾಟೀಲ, ಚನಬಸು ಯರಗಟ್ಟಿ, ಮಲಕಾಜಪ್ಪ ಕಲ್ಯಾಣಶೆಟ್ಟಿ, ಶಂಕರ ಕೋಳಿಗುಡ್ಡ, ಮುಖಂಡರಾದ ಬಾಲಕೃಷ್ಣ ಮಾಳವದೆ, ಮಂಜುನಾಥ ಗುಂಡಾ, ಮಹಾಲಿಂಗ ತಟ್ಟಿಮನಿ, ಸುರೇಶ ಶೆಟ್ಟಿ, ಸುಧೀರ ಗುಂಡಾ, ರಾಜು ಕೋಳಿಗುಡ್ಡ, ಮಲ್ಲು ಯರಡ್ಡಿ, ರವಿ ಜವಳಗಿ, ಶಶಿಧರ ನಕಾತಿ, ಪಾಂಡಪ್ಪ ಪೆಟ್ಲುರ,ಗೋವಿಂದಗೌಡ ಪಾಟೀಲ, ಸಾಗರ ಮಠದ, ಸಂಗಮೇಶ ಹಿಡಕಲ್, ನಾಗಪ್ಪ ಹುಣಶ್ಯಾಳ,ಶಿವಲಿಂಗ ಟಿರ್ಕಿ, ಸಂಗಮೇಶ ಉಪ್ಪಲದಿನ್ನಿ, ಸಂಜು ಅಂಗಡಿ, ವಿನೋದ್ ಬಿರಾದಾರ, ಶ್ರೀಶೈಲ್ ಅಂಗಡಿ, ಈರಣ್ಣ ಚೆಮಕೇರಿ, ಶಂಕರ ಹುಕ್ಕೇರಿ, ಸೇರಿ ಹಲವರು ಇದ್ದರು. ಲಕ್ಷ್ಮಣ ಕಿಶೋರ ನಿರೂಪಿಸಿ ವಂದಿಸಿದರು. ಚನ್ನಪ್ಪ ಹುನ್ನೂರ ಪ್ರಾರ್ಥನೆ ಸಲ್ಲಿಸಿದರು.