ಭಾರತ ಭವ್ಯವಾದ ಸಂಸ್ಕೃತಿ ಹೊಂದಿರುವ ರಾಷ್ಟ್ರಕನ್ನಾಳ

ಭಾರತ ಭವ್ಯವಾದ ಸಂಸ್ಕೃತಿ ಹೊಂದಿರುವ ರಾಷ್ಟ್ರಕನ್ನಾಳ India is a nation with a magnificent culture

 ಲೋಕದರ್ಶನ ವರದಿ 

ಇಂಡಿ 26 : ಜಾನಪದ ಸಂಸ್ಕೃತಿಯ ವಿಶಾಲವಾದ ತಳಹದಿಯಲ್ಲಿ ಬೆಳೆದು ಬಂದಿದೆ. ಮಾತೃ ಸಂಸ್ಕೃತಿಯ ಗಟ್ಟಿ ನೆರಳು ಜಾನಪದದಲ್ಲಿ ಕಾಣುತ್ತೇವೆ ಎಂದು  ನಿವೃತ್ತ ಪ್ರಚಾರ್ಯರಾದ ಎಸ್‌.ಎಸ್‌.ಕನ್ನಾಳ ಹೇಳಿದರು. ಅವರು ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ಗುರು ಹಜರತ ದಾವಲಮಲೀಕ ದೇವರ ಜಾತ್ರಾ ಮಹೋತ್ಸವದಲ್ಲಿ ಸಂಜು ಮೇಲೋಡಿಸ ಕಲಾ ತಂಡದ ವತ್ತಿಯಿಂದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ  ಅವರು ಜಾನಪದದಲ್ಲಿ ಸಾರ್ವತ್ರಿಕ ಮೌಲ್ಯಗಳು ಅಡಗಿವೆ. ಅಂತಹ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ, ಪ್ರತಿಯೊಂದು ಜಾನಪದ ಸೂಕ್ತಿ, ತ್ರಿಪದಗಳಲ್ಲಿ ಉತ್ತಮ ಬದುಕಿನ ಸಂದೇಶವಿದೆ. ಈ ಸಂದೇಶ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ಜಾನಪದ ಕಲೆ ಉಳಿಯಬೇಕಾದರೆ ಕಲಾವಿದರನ್ನು ನಾವು ಮೇಲಕ್ಕೇತ್ತಬೇಕು ಇಲ್ಲವಾದಲ್ಲಿ ಅದು ನಿಧಾನವಾಗಿ ನಶಿಸಿ ಹೊಗುತ್ತದೆ,

ರಸಮಂಜರಿ ಕಾರ್ಯಕ್ರಮ, ಜಾನಪದ ಕಲೆಗಳು, ಸೋಬಾನ ಪದಗಳು ಹಾಗೂ ಗೀಗಿ ಪದಗಳು ಸೇರಿದಂತೆ ಎಲ್ಲ ಉಳಿಸಬೇಕಾಗಿದೆ ಅವು ಈಗ ವಾಣಿಜ್ಜೀಕರನ ಆಗುವ ಅವಶ್ಯಕತೆ. ದೂರದರ್ಶನ ಹಾಗೂ ಚಲನಚಿತ್ರ ಆಧುನಿಕ ದಿನಗಳಲ್ಲಿ ದಾಪುಗಾಲು ಇರಿಸಿದ ಪ್ರಭಾವದಿಂದಾಗಿ ಗ್ರಾಮೀಣ ಸೊಗಡಿನ ಪ್ರತಿಬಿಂಬವಾಗಿದ್ದ ಜಾನಪದ ಕಲೆ ಅಳವಿನ ಅಂಚಿನಲ್ಲಿದೆ ಎಂದು ವಿಷಾದಿಸಿದರು. ಈ ಕಾರ್ಯಕ್ರಮದಲ್ಲಿ ಮಲ್ಲಯ್ಯ ಸಾರಂಗಮಠ, ಗ್ರಾಮ ಪಂಚಾಯಿತಿ ಸದಸ್ಯರಾದ ಅಪ್ಪಣ್ಣ ಕಲ್ಲೂರ, ರಾಚಪ್ಪ ಗಳೇದ, ರಾಮಚಂದ್ರ ದೊಡಮನಿ, ಏಗಪ್ಪ ಹೊರಪೇಟಿ, ಪರಸು ಬಿಸನಾಳ, ಉಮೇಶ ನಾಟೀಕಾರ, ಮಹಮ್ಮದ ಧಡೆದ, ಮತ್ತು  ಶಕರ ಗಂಗನಳ್ಳಿ,  ದೇವಪ್ಪ ತದ್ದೇವಾಡಿ, ಮುನ್ನಾ ನಾಗಠಾಣ, ಜಕ್ಕಪ್ಪ ತ. ಹತ್ತಳ್ಳಿ, ಸತೀಶ ಹಿರೇಕುರಬರ ಬಸಪ್ಪ ಚಿಂಚೋಳ್ಳಿ, ನೀಲಪ್ಪ ಕಿಣಗಿ ಶ್ರೀಧರ ಉಕ್ಕಲಿ, ಶರಣು ಕಾಂದೆ, ರಾಕೇಶ ಕಿಣಗಿ, ರಾಜಾಸಾಬ ಬಡಿಗೇರ, ಬಂದು  ಇಂಡಿ, ಬಸವರಾಜ ಹದರಿ, ಗುರ​‍್ಪ ಗೊಂಗಿ,  ಸಲಿಂ ಚಿಕ್ಕಗಸಿ, ನಾಗಪ್ಪ ಗೊಂಗಿ, ಬಸನಿಂಗ ಕುಂಬರ, ಅನೇಕರು ಉಪಸ್ಥಿತರಿದ್ದರು.