ಭಾರತ ಎಲ್ಲರ ಹಿತವನ್ನು ಬಯಸುವ ದೇಶವಾಗಿದೆ: ತಿಪ್ಪೇಸ್ವಾಮಿ

ಭಾರತ ಎಲ್ಲರ ಹಿತವನ್ನು ಬಯಸುವ ದೇಶವಾಗಿದೆ: ತಿಪ್ಪೇಸ್ವಾಮಿ  India is a country that seeks the welfare of all: Thippeswamy

ಭಾರತ ಎಲ್ಲರ ಹಿತವನ್ನು ಬಯಸುವ ದೇಶವಾಗಿದೆ: ತಿಪ್ಪೇಸ್ವಾಮಿ  

ತಾಳಿಕೋಟೆ 04: ಭಾರತ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಉತ್ತಮ ಸಂಸ್ಕೃತಿಯನ್ನು ಕೊಟ್ಟಂತಹ ಸಂಪದ್ಭರಿತ ದೇಶವಾಗಿತ್ತು, ಭಾರತ ವಿಶ್ವಗುರುವಾಗಿತ್ತು. ನಾವೆಂದು ಬೇರೆಯವರ ಮೇಲೆ ಸೈನಿಕ ಆಕ್ರಮಣ ಮಾಡಲಿಲ್ಲ, ನಮ್ಮ ಸಂಸ್ಕೃತಿಯಿಂದ, ವಿಚಾರದಿಂದ ಸನಾತನ ಧರ್ಮದಿಂದ ಇಡೀ ಜಗತ್ತಿನ ಮನಸ್ಸುಗಳನ್ನು ಗೆದ್ದಿತ್ತು. ಭಾರತ ಇಡೀ ಜಗತ್ತನ್ನು ಒಂದು ಕುಟುಂಬದಂತೆ ಒಂದಾಗಿ ನೋಡಿತು. ಎಲ್ಲರೂ ಸುಖದಿಂದ ಇರಬೇಕು ಎಂದು ನಮ್ಮ ದೇಶದ ಸಂತರು ಸಾಧುಗಳು ಋಷಿಮುನಿಗಳು ಬಯಸಿದರು. ಅದರಂತೆ ನಾವು ನಡೆದುಕೊಂಡಿದ್ದೇವೆ ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ನ.ತಿಪ್ಪೆಸ್ವಾಮಿ ಹೇಳಿದರು.ಅವರು ಎಸ್‌.ಕೆ.ಕಾಲೇಜು ಮೈದಾನದಲ್ಲಿ ನಡೆದ ವಿರಾಟ ಹಿಂದೂ ಸಮಾವೇಶದಲ್ಲಿ ಮಂಗಳವಾರ ಮಾತನಾಡಿದರು.. ಜಗತ್ತಿಗೆ ವೇದವನ್ನು, ಯೋಗವನ್ನು, ಆಯುರ್ವೇದ ಸೇರಿದಂತೆ ಹಲವು ಜ್ಞಾನಗಳನ್ನು ನೀಡಿದ್ದೇವೆ.ಜಾಗೃತ ಸಮಾಜ, ಸಂಘಟಿತ ಸಮಾಜ ಮಾತ್ರ ಎಲ್ಲ ಸಮಸ್ಯೆಗಳನ್ನು ಎದುರಿಸಿನಿಲ್ಲಬಹುದು ಆದ್ದರಿಂದ ಹಿಂದೂ ಸಮಾಜವನ್ನು ಬಂಧುಗಳನ್ನು ಒಗ್ಗೂಡಿಸುವ ಕೆಲಸ ನಡೆಯುತ್ತಿದೆ. ಜಗತ್ತಿನಲ್ಲಿ ಎಲ್ಲೂ ಇಲ್ಲದ ಶ್ರೇಷ್ಠ ವ್ಯವಸ್ಥೆ, ಅದು ಕುಟುಂಬ ವ್ಯವಸ್ಥೆ. ಇವತ್ತು ಈ ಕುಟುಂಬಗಳನ್ನು ಕ್ಷೀಣಿಸುವ ರೀತಿಯಲ್ಲಿ ನಮ್ಮ ಸಂಸ್ಕೃತಿಯನ್ನು ಕ್ಷೀಣಿಸುವ ರೀತಿಯಲ್ಲಿ ಸಂಸ್ಕೃತಿಯನ್ನು ಹಾಳು ಮಾಡುವ ರೀತಿಯಲ್ಲಿ ನಮ್ಮ ಯುವಕರನ್ನು ಹಾಳು ಮಾಡುವ ರೀತಿಯಲ್ಲಿ ನಮ್ಮ ಸಮಾಜದಲ್ಲಿ ಅನೇಕ ಸಂಗತಿಗಳು ನಡೆಯುತ್ತಿವೆ ಇವುಗಳ ಬಗ್ಗೆ ಜಾಗೃತಿಯನ್ನು ವಹಿಸಬೇಕಾಗಿರುವುದು ನಮ್ಮಗಳ ಕರ್ತವ್ಯವಾಗಿದೆ. ನಮ್ಮ ಅಸ್ಮಿತೆಯನ್ನು ಉಳಿಸಬೇಕಿದೆ. ನಮಗೆ ಅರಿವಿಲ್ಲದೇ ಪಾಶ್ಚಿಮಾತ್ಯ ಅನುಕರಣೆಯನ್ನು ಮಾಡುತ್ತಿದ್ದೇವೆ ನಾವಿಂದು ಡೇ ಗಳಿಗೆ ಅಂಟಿಕೊಂಡಿದ್ದೇವೆ. ಬರ್ಥಡೇ, ವಾಲೈಂಟೈನ್, ಮದರ್, ಫಾದರ ಡೇ.. ಮೊದಲಾದವು ಇವು ನಮ್ಮ ಸಂಸ್ಕೃತಿಯಲ್ಲ, ಪಾಶ್ಚಾತ್ಯರಲ್ಲಿ ಒಟ್ಟಿಗೆ ಬಾಳುವ ಸಂಸ್ಕೃತಿಯಿಲ್ಲ. ಆದರೆ ನಮ್ಮಲ್ಲಿ ಪರಸ್ಪರ ಒಟ್ಟಿಗೆ ಬಾಳುವ ಸಂಸ್ಕೃತಿ ಇದೆ ಮನೆಯಲ್ಲಿ ಕಷ್ಟದಲ್ಲಿದ್ದರೆ ಖಾಯಿಲೆಯ ಬಂದರೆ ಇಡೀ ಮನೆಯವರು ಅದರೆಡೆಗೆ ಗಮನ ನೀಡುತ್ತಾರೆ ಇದು ಈ ನೆಲದ ಸಂಸ್ಕೃತಿ, ಪರೋಪಕಾರ ನಮ್ಮ ಸಮಾಜದ ಬಗ್ಗೆ, ದೇಶ ಜಗತ್ತಿನ ಹಿತದೃಷ್ಟಿಯ ಬಗ್ಗೆ ನಾವು ಗಮನಿಸುತ್ತವೆ. ಈ ಗುಣವನ್ನು ನಮ್ಮ ಕುಟಂಬಗಳಲ್ಲಿ ನಡುವಳಿಕೆಯಾಗಿ ಬೆಳೆಯಬೇಕಿದೆ. ಕುಟುಂಬ ವ್ಯವಸ್ಥೆ ಶಿಥಿಲವಾಗುತ್ತಿದೆ. ಮದುವೆ ಬೇಡ ಎನ್ನುವ, ಲಿವಿಂಗ ಟುಗೇದರ, ಸಲಿಂಗ ಕಾಮಿಗಳ ಮದುವೆಯಂತಹ ಅಸಂಪ್ರದಾಯಿಕ ಸಂಗತಿಗಳನ್ನು ತಡೆಯಬೆಕಿದೆ. ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳು ಈ ನೆಲದಲ್ಲಿವೆ. ಆದರೆ ಇಂದು ಈ ಪ್ರತಿಭೆಗಳನ್ನು ನಾಶ ಮಾಡುವ ವ್ಯವಸ್ಥೆ ಹುನ್ನಾರ ನಡೆದಿದೆ. ಶಾಲೆಗಳ ಪಕ್ಕದಲ್ಲಿ ಡ್ರಗ್ಸ್‌ ಮಾರಾಟ ನಡೆದಿದೆ. ಹಳ್ಳಿಗಳಲ್ಲಿ ಕುಡಿತದ ವ್ಯಸನಿಗಳಾಗಿ ಯುವಕರೇ ಹೆಚ್ಚಾಗಿ ಸಾವೀಗೀಡಾಗುತ್ತಿದ್ದಾರೆ.ನಮ್ಮ ಮನೆಯಲ್ಲಿ ಸಂಸ್ಕಾರ ಸಿಗಬೆಕು. ನಮ್ಮಜೀವನ ಮೌಲ್ಯಗಳನ್ನು ಕುಟುಂಬದಲ್ಲಿ, ಶಾಲೆಯಲ್ಲಿ ಸಮಾಜದಲ್ಲಿ ರೂಪಿಸುವ ಅಗತ್ಯತೆ ಇದೆ. ಉತ್ತಮ ವ್ಯಕ್ತಿಗಳನ್ನು ರೂಪಿಸಬೇಕಿದೆ. ಹಿಂದು ಎಂದರೆ ಸಂಕುಚಿತವಲ್ಲ, ಜಾತಿಯಲ್ಲ, ಮತವಲ್ಲ, ಅದು ಜೀವನಕ್ರಮ, ಈ ದೇಶದಲ್ಲಿ ವಾಸ ಮಾಡುವವರೆಲ್ಲರೂ ಹಿಂದೂಗಳೇ. ಇದು ಸಂಘ ಹೇಳಿದ್ದಲ್ಲ, ನಮ್ಮ ಪುರಾತನ ಕಾವ್ಯಗಳು ಹೇಳಿವೆ. ದೇಶವೆಂದರೆ ಭೂಭಾಗ ಮಾತ್ರ. ರಾಷ್ಟ್ರೀಯತೆ ಎಂದರೆ ನಮ್ಮ ಮನೆಯಿದ್ದಂತೆ. ಸಮಾಜದಲ್ಲಿರುವ ಎಲ್ಲರನ್ನು ಸೇರಿಸಿ ಸಂಘಟನೆ ಮಾಡುವುದೇ ಇದರ ಉದ್ದೇಶಸಮಾಜದ ಎಲ್ಲರನ್ನು ಸೇರಿಸಿಕೊಂಡು ಎಲ್ಲರ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿ ನಮ್ಮದಾಗಿದೆ.ಸ್ವಾತಂತ್ರ್ಯಾ ನಂತರವೂ ಸಮಾಜದಲ್ಲಿ ಅಸ್ಪೃಶ್ಯತೆ ಮುಂದುವರೆದಿರುವುದು ನೋವಿನ ಸಂಗತಿ. ಒಟ್ಟಿಗೆ ಸಹಜೀವನ, ಸಮಭೋಜನ, ಸಹಕೂಟ ನಡೆಯಬೇಕು. ಸರ್ವ ಸಮಾನತೆ, ಸಾಮರಸ್ಯಯುಕ್ತ ಸಮಾಜ ನಿರ್ಮಾಣ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ನೀರು ಮಿತವ್ಯಯ ಬಳಸಿ, ಗಿಡಗಳನ್ನು ಹಚ್ಚಿ ಬೆಳೆಸಿ ಸ್ವದೇಶಿ ಜೀವನಶೈಲಿ ರೂಢಿಸಿಕೊಳ್ಳಿ, ಮನೆಗಳಲ್ಲಿ ತಯಾರಿಸುವ, ಗ್ರಾಮದಲ್ಲಿ ತಯಾರಿಸುವ ಆಹಾರ, ವಸ್ತುಗಳನ್ನು ಬಳಸಿ ಶಕ್ತಿಶಾಲಿ ಭಾರತ,ವಾಗಳು ಸ್ವಾವಲಂಭಿಯಾಗಲು ಸ್ವದೇಶಿ ಜೀವನ ಅನುಸರಿಸಿ. ನಮ್ಮ ಹಬ್ಬಗಳು, ನಮ್ಮ ಉಡುಗೆ ತೊಡುಗೆ, ನಮ್ಮ ಸಂಸ್ಕಾರ, ನಮ್ಮ ಮಾತೃಭಾಷೆಗಳನ್ನು ಬಳಸಿ, ನಮ್ಮ ಸಂಬಂಧಗಳ ಪಾವಿತ್ರ್ಯತೆ ಉಳಿಸಿ. ಮೌಲ್ಯಗಳಾದ ಹೆತ್ತವರಿಗೆ, ಹಿರಿಯರಿಗೆ ಅತಿಥಿಗಳಿಗೆ ಗೌರವಿಸುವುದು, ಪರೋಪಕಾರಗಳಂತಹ ನಮ್ಮ ವ್ಯಕ್ತಿತ್ವವನ್ನು ರೂಪಿಸುವಂತಹ ಗುಣಗಳನ್ನು ವಿಕಸಿತಗೊಳಿಸಬೇಕು. ಕಾನೂನು ಪಾಲನೆಯ ನಿಯಮಗಳನ್ನು ಮನಸಾರೆ ಆಚರಿಸಬೇಕು ಎಂದರು. ಮಹಿಳಾ ಪ್ರತಿನಿದಿಯಾಗಿದ್ದ ಸ್‌.ಕೆ.ಮಹಿಳಾ ಪಿಯು ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಹಿರೇಮಠ ಮಾತನಾಡಿ, ಈ ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ರೂಪಿಸಬೇಕಾಗಿರುವುದು ಮನೆಗಳಲ್ಲಿ ಅದನ್ನು ನಿರ್ವಹಿಸಬೇಕಿರುವುದು ಕುಟುಂಬದ ಕಣ್ಣಾಗಿರುವ ಹೆಣ್ಣು, ತಾಯಿ ಎಂದರು. ಸಂಚಲನಾ ಸಮಿತಿ ಅಧ್ಯಕ್ಷ ಎಸ್‌.ಎಂ.ಸಜ್ಜನ ಮಾತನಾಡಿ, ಅನಾದಿ ಕಾಲದಿಂದಲೂ ಜಗತ್ತಿನ ಗುರುವಾಗಿ ಬೆಳೆದ ಭಾರತದ ಮೇಲೆ ಹತ್ತಾರು ಆಕ್ರಮಣಗಳು ನಡೆದರೂ ಮೆಟ್ಟಿನಿಂತು ತನ್ನ ನೆಲದ ಮೂಲ ಗುಣವನ್ನು ಬಿಟ್ಟುಕೊಟ್ಟಿಲ್ಲ.ನಮ್ಮ ದೇಶವನ್ನಾಗಲಿ, ಸಂಸ್ಕೃತಿಯನ್ನಾಗಲಿ ನಾಶ ಮಾಡಲು ಸಾಧ್ಯವಿಲ್ಲ ಎಂದರು. 

ಸಾನಿದ್ಯ ವಹಿಸಿದ್ದ ಗುಂಡಕನಾಳಶ್ರೀ, ಕೆಸರಟ್ಟಿಯ ಹಿರೂರ ಅನ್ನದಾನೇಶ್ವರಮಠದ ಮುರುಗೇಶ ವಿರಕ್ತಮಠ ಇತರ ಶ್ರೀಗಳು ಮಾತನಾಡಿದರು. ವೇದಿಕೆಯಲ್ಲಿ ವಿರಾಟ ಹಿಂದೂ ಸಮಾವೇಶದಲ್ಲಿ ಗೌರವಾಧ್ಯಕ್ಷ ಡಾ.ವಿ.ಎಸ್‌.ಕಾರ್ಚಿ, ಉಪಾಧ್ಯಕ್ಷರು, ಪದಾಧಿಕಾರಿಗಳು, 49 ಸಮಾಜಗಳ ಅಧ್ಯಕ್ಷರು, ಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಪಟ್ಟಣದ ಸಾಂಭಪ್ರಭು ಶರಣಮುತ್ಯಾನ ದೇವಸ್ಥಾನದಿಂದ ಹೊರಟ ಭವ್ಯ ಶೋಭಾ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಪಟ್ಟಣದ ವಿವಿಧ ಸಮಾಜಗಳಿಂದ ನಿರ್ಮಿಸಿದ್ದ ರೂಪಕಗಳು, ಸ್ವಾತಂತ್ರ್ಯ ಹೋರಾಟಗಾರರ ವೇಷಗಳಲ್ಲಿ ಚಿಣ್ಣರು, ಗೊಂಬೆ ಕುಣಿತ ಗಮನ ಸೆಳೆದವು.