ಇಂಡಿಗೋದಿಂದ ನಿರ್ವಹಣಾ ವೈಫಲ್ಯ :ತನಿಖೆಗೆ ಕೇಂದ್ರ ಸಚಿವರಿಗೆ ಪತ್ರ

ಇಂಡಿಗೋದಿಂದ ನಿರ್ವಹಣಾ ವೈಫಲ್ಯ :ತನಿಖೆಗೆ ಕೇಂದ್ರ ಸಚಿವರಿಗೆ ಪತ್ರ IndiGo management failure: Letter to Union Minister for investigation

 ಹುಬ್ಬಳ್ಳಿ   06: ಇಂಡಿಗೋ ಏರ್‌ಲೈನ್ಸ್ನಲ್ಲಿ ಮುಂದುವರಿಯುತ್ತಿರುವ ಗಂಭೀರ ಅವ್ಯವಸ್ಥೆ ಮತ್ತು ಕಾರ್ಯಾಚರಣಾ ವೈಫಲ್ಯ ದೇಶದಾದ್ಯಂತ ಪ್ರಯಾಣಿಕರಲ್ಲಿ ತೀವ್ರ ಆಕ್ರೋಶವನ್ನು ಉಂಟುಮಾಡಿದೆ. ದೊಡ್ಡ ಪ್ರಮಾಣದ ಫ್ಲೈಟ್ ರದ್ದು, ಗಂಟೆಗಳ ವಿಳಂಬ ಮತ್ತು ಪ್ರಯಾಣಿಕ ನಿರ್ವಹಣೆಯ ವೈಫಲ್ಯದ ಪರಿಣಾಮವಾಗಿ ಸಾವಿರಾರು ಪ್ರಯಾಣಿಕರು ವಿವಿಧ ವಿಮಾನ ನಿಲ್ದಾಣಗಳಲ್ಲಿ ಅವಮಾನಕರ ಪರಿಸ್ಥಿತಿ ಎದುರಿಸಬೇಕಾಗುತ್ತಿದೆ ಎಂದು ಪ್ರವಾಸಿ ಪ್ರಯಾಣಿಕರ ಸಂಘ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಸುಭಾಷ್ ಡಂಕ್ ಹೇಳಿದ್ದಾರೆ. ಪ್ರಸಕ್ತ ಕಾಲವು ಮದುವೆ ಹಾಗೂ ಇತರ ಶುಭ ಕಾರ್ಯಗಳು ಪ್ರಸಕ್ತವಾಗಿದ್ದು ಇಂಡಿಗೋ ವಿಮಾನ ಕಾರ್ಯಾಚರಣಾ ಸಮಸ್ಯೆಗಳ ಕಾರಣದಿಂದ ಪ್ರಯಾಣಿಕರು ಅನೇಕ ಗಂಟೆಗಳ ಕಾಲ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ.

ಮಕ್ಕಳಿಗೆ, ಮಹಿಳೆಯರಿಗೆ, ವಯೋವೃದ್ಧರಿಗೆ, ರೋಗಿಗಳಿಗೆ ಮತ್ತು ವ್ಯಾಪಾರಿಗಳಿಗೆ ವಿಶೇಷವಾಗಿ ಹೆಚ್ಚು ತೊಂದರೆ ಉಂಟಾಗಿದೆ ಎಂದಿದ್ದಾರೆ. ಈ ಪರಿಸ್ಥಿತಿ “ಪ್ರಯಾಣಿಕರ ಹಕ್ಕುಗಳ ಗಂಭೀರ ಉಲ್ಲಂಘನೆ” ಎಂದು ಹೇಳಿರುವ ಡಂಕ್ ಅವರು ನಾಗರಿಕ ವಿಮಾನಯಾನ ಖಾತೆ ಸಚಿವರಿಗೆ ಪತ್ರ ಬರೆದು ಇಂಡಿಗೋನ ವ್ಯಾಪಕ ಕಾರ್ಯಾಚರಣಾ ವೈಫಲ್ಯದ ಸಮಗ್ರ ತನಿಖೆ, ಎಲ್ಲಾ ಪ್ರಭಾವಿತ ಪ್ರಯಾಣಿಕರಿಗೆ ಕಡ್ಡಾಯ ಪರಿಹಾರ, ಭವಿಷ್ಯದಲ್ಲಿ ಇಂತಹ ಗೊಂದಲಗಳನ್ನು ತಪ್ಪಿಸಲು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳು, ಎಲ್ಲಾ ಏರ್‌ಲೈನ್ಸ್ಗಳಲ್ಲಿ ಪ್ರಯಾಣಿಕರ ಹಕ್ಕುಗಳ ಕಟ್ಟುನಿಟ್ಟಿನ ಜಾರಿಗೆ ವ್ಯವಸ್ಥೆ ತನಿಖೆಗೆ ಒತ್ತಾಯಿಸಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಭಾರತದ ವಿಮಾನಯಾನ ಕ್ಷೇತ್ರದಲ್ಲಿನ ಪ್ರಮುಖ ನಿರ್ವಹಣಾ ವೈಫಲ್ಯವಾಗಿದ್ದು ಕೂಡಲೆ ಕ್ರಮಕ್ಕೆ ಪತ್ರದಲ್ಲಿ ಒತ್ತಾಯಿಸಿದ್ದಾರೆ    

ಇಂಡಿಗೋದಿಂದ ನಿರ್ವಹಣಾ ವೈಫಲ್ಯ :ತನಿಖೆಗೆ ಕೇಂದ್ರ ಸಚಿವರಿಗೆ ಪತ್ರ ಹುಬ್ಬಳ್ಳಿ: ಇಂಡಿಗೋ ಏರ್‌ಲೈನ್ಸ್ನಲ್ಲಿ ಮುಂದುವರಿಯುತ್ತಿರುವ ಗಂಭೀರ ಅವ್ಯವಸ್ಥೆ ಮತ್ತು ಕಾರ್ಯಾಚರಣಾ ವೈಫಲ್ಯ ದೇಶದಾದ್ಯಂತ ಪ್ರಯಾಣಿಕರಲ್ಲಿ ತೀವ್ರ ಆಕ್ರೋಶವನ್ನು ಉಂಟುಮಾಡಿದೆ. ದೊಡ್ಡ ಪ್ರಮಾಣದ ಫ್ಲೈಟ್ ರದ್ದು, ಗಂಟೆಗಳ ವಿಳಂಬ ಮತ್ತು ಪ್ರಯಾಣಿಕ ನಿರ್ವಹಣೆಯ ವೈಫಲ್ಯದ ಪರಿಣಾಮವಾಗಿ ಸಾವಿರಾರು ಪ್ರಯಾಣಿಕರು ವಿವಿಧ ವಿಮಾನ ನಿಲ್ದಾಣಗಳಲ್ಲಿ ಅವಮಾನಕರ ಪರಿಸ್ಥಿತಿ ಎದುರಿಸಬೇಕಾಗುತ್ತಿದೆ ಎಂದು ಪ್ರವಾಸಿ ಪ್ರಯಾಣಿಕರ ಸಂಘ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಸುಭಾಷ್ ಡಂಕ್ ಹೇಳಿದ್ದಾರೆ. 

 ಪ್ರಸಕ್ತ ಕಾಲವು ಮದುವೆ ಹಾಗೂ ಇತರ ಶುಭ ಕಾರ್ಯಗಳು ಪ್ರಸಕ್ತವಾಗಿದ್ದು ಇಂಡಿಗೋ ವಿಮಾನ ಕಾರ್ಯಾಚರಣಾ ಸಮಸ್ಯೆಗಳ ಕಾರಣದಿಂದ ಪ್ರಯಾಣಿಕರು ಅನೇಕ ಗಂಟೆಗಳ ಕಾಲ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಮಕ್ಕಳಿಗೆ, ಮಹಿಳೆಯರಿಗೆ, ವಯೋವೃದ್ಧರಿಗೆ, ರೋಗಿಗಳಿಗೆ ಮತ್ತು ವ್ಯಾಪಾರಿಗಳಿಗೆ ವಿಶೇಷವಾಗಿ ಹೆಚ್ಚು ತೊಂದರೆ ಉಂಟಾಗಿದೆ ಎಂದಿದ್ದಾರೆ. ಈ ಪರಿಸ್ಥಿತಿ “ಪ್ರಯಾಣಿಕರ ಹಕ್ಕುಗಳ ಗಂಭೀರ ಉಲ್ಲಂಘನೆ” ಎಂದು ಹೇಳಿರುವ ಡಂಕ್ ಅವರು ನಾಗರಿಕ ವಿಮಾನಯಾನ ಖಾತೆ ಸಚಿವರಿಗೆ ಪತ್ರ ಬರೆದು ಇಂಡಿಗೋನ ವ್ಯಾಪಕ ಕಾರ್ಯಾಚರಣಾ ವೈಫಲ್ಯದ ಸಮಗ್ರ ತನಿಖೆ, ಎಲ್ಲಾ ಪ್ರಭಾವಿತ ಪ್ರಯಾಣಿಕರಿಗೆ ಕಡ್ಡಾಯ ಪರಿಹಾರ, ಭವಿಷ್ಯದಲ್ಲಿ ಇಂತಹ ಗೊಂದಲಗಳನ್ನು ತಪ್ಪಿಸಲು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳು, ಎಲ್ಲಾ ಏರ್‌ಲೈನ್ಸ್ಗಳಲ್ಲಿ ಪ್ರಯಾಣಿಕರ ಹಕ್ಕುಗಳ ಕಟ್ಟುನಿಟ್ಟಿನ ಜಾರಿಗೆ ವ್ಯವಸ್ಥೆ ತನಿಖೆಗೆ ಒತ್ತಾಯಿಸಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಭಾರತದ ವಿಮಾನಯಾನ ಕ್ಷೇತ್ರದಲ್ಲಿನ ಪ್ರಮುಖ ನಿರ್ವಹಣಾ ವೈಫಲ್ಯವಾಗಿದ್ದು ಕೂಡಲೆ ಕ್ರಮಕ್ಕೆ ಪತ್ರದಲ್ಲಿ ಒತ್ತಾಯಿಸಿದ್ದಾರೆ