10ನೇ ದಿನಕ್ಕೆ ಇಂಡಿಗೊ ಬಿಕ್ಕಟ್ಟು: ಬೆಂಗಳೂರಲ್ಲಿ 61ವಿಮಾನ ಹಾರಾಟ ರದ್ದು
IndiGo crisis enters 10th day: 61 flights cancelled in Bengaluru
ನವದೆಹಲಿ: ಇಂಡಿಗೊ ವಿಮಾನಗಳ ಸಂಚಾರದಲ್ಲಿ ಉಂಟಾಗಿರುವ ವ್ಯತ್ಯಯವು ಇಂದು (ಬುಧವಾರ) 10ನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಮತ್ತು ಇಲ್ಲಿಂದ ಹೊರಡಬೇಕಿದ್ದ 61 ವಿಮಾನಗಳ ಹಾರಾಟ ರದ್ದಾಗಿದೆ.
ಬೆಂಗಳೂರಿಗೆ ಬರಬೇಕಿದ್ದ 35 ಮತ್ತು ಇಲ್ಲಿಂದ ಹೊರಡಬೇಕಿದ್ದ 26 ವಿಮಾನಗಳ ಕಾರ್ಯಾಚರಣೆ ರದ್ದು ಮಾಡಲಾಗಿದೆ. ಸಹಾಯ ಕೇಂದ್ರ ಬಳಿ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿದೆ.
ವಿಮಾನಗಳ ಹಾರಾಟವು ಸಾಮಾನ್ಯ ಸ್ಥಿತಿಗೆ ಮರಳಿದೆ. ಸಮಸ್ಯೆಗೆ ಒಳಗಾದ ಗ್ರಾಹಕರ ಅಗತ್ಯವನ್ನೂ ಪೂರೈಸಲಾಗುತ್ತಿದೆ ಎಂದು ಇಂಡಿಗೊ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ಹೇಳಿದ್ದರೂ ಕೂಡ ಸಮಸ್ಯೆ ಹಾಗೆಯೇ ಮುಂದುವರಿದಿದೆ.
ವಿಮಾನಗಳ ಹಾರಾಟ ರದ್ದಾದ ಕಾರಣ ಬೆಂಗಳೂರು, ಅಹಮದಾಬಾದ್ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.
ಇಂಡಿಗೊ ವಿಮಾನಯಾನ ಸಂಸ್ಥೆಯು ತನ್ನ ಒಟ್ಟು ವಿಮಾನಗಳ ಹಾರಾಟಗಳಲ್ಲಿ ಶೇ 10ರಷ್ಟು ಹಾರಾಟವನ್ನು ಕಡಿತ ಮಾಡಬೇಕು ಎಂದು ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರು ಮಂಗಳವಾರ ಸೂಚಿಸಿದ್ದರು.
‘ಚಳಿಗಾಲದಲ್ಲಿ ಹಾರಾಟ ನಡೆಸುವ ಮಾರ್ಗಗಳಲ್ಲಿ ಶೇ 5ರಷ್ಟು ವಿಮಾನಗಳ ಹಾರಾಟವನ್ನು ಕಡಿತ ಮಾಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶ ನಾಲಯವು (ಡಿಜಿಸಿಎ) ಇಂಡಿಗೊ ಸಂಸ್ಥೆಗೆ ಸೋಮವಾರ ಸೂಚನೆ ನೀಡಿತ್ತು. ವಿಮಾನಗಳ ಹಾರಾಟವನ್ನು ಕಡಿತ ಮಾಡಿದ ಬಳಿಕ, ಪರಿಷ್ಕೃತ ವೇಳಾಪಟ್ಟಿಯನ್ನು ಬುಧವಾರದ (ಡಿ.10) ಒಳಗೆ ನೀಡಬೇಕು ಎಂದೂ ಹೇಳಿತ್ತು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 