ಇಂಡಿ ನಿಂಬಗೆೆ ತನ್ನ ವಿಶಿಷ್ಟ ಗುಣಮಟ್ಟದಿಂದ ವಿಶ್ವದೆಲ್ಲೆಡೆ ಬೇಡಿಕೆ: ಡಾ ಬಿ ಫಕ್ರುದ್ದೀನ್‌

ಇಂಡಿ ನಿಂಬಗೆೆ ತನ್ನ ವಿಶಿಷ್ಟ ಗುಣಮಟ್ಟದಿಂದ ವಿಶ್ವದೆಲ್ಲೆಡೆ ಬೇಡಿಕೆ: ಡಾ ಬಿ ಫಕ್ರುದ್ದೀನ್‌ Indi Nimbage is in demand all over the world due to its unique quality: Dr B Fakhruddin


ಲೋಕದರ್ಶನ ವರದಿ 

 ಇಂಡಿ 12 :  ನಿಂಬೆ ಕಣಜ ಎಂದೇ ಪ್ರಸಿದ್ಧಿ ಪಡೆದಿರುವ ಇಂಡಿ ನಿಂಬೆಗೆ ಜಿ ಐ ಮಾನ್ಯತೆ ಪಡೆದ ಹಿನ್ನಲೆಯಲ್ಲಿ ಇಂಡಿ ನಿಂಬೆಗೆ ವಿಶ್ವದೆಲ್ಲೆಡೆ ಬೇಡಿಕೆ ಎಂದು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರು ಮತ್ತು ಯೋಜನಾ ಸಂಯೋಜಕರಾದ ಡಾ ಬಿ.ಫಕ್ರುದ್ದಿನ್ ಹೇಳಿದರು. ಅವರು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಶ್ರೀ ಮರುಳಸಿದ್ದೇಶ್ವರ ಮಂಗಲ ಕಾರ್ಯಲಯ ಆವರಣದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಹಾಗೂ ರಾಜ್ಯ 20 ಜಿಐ ಟ್ಯಾಗ್ ಹೊಂದಿರುವ ಬೆಳೆಗಳು ಹಾಗೂ ಇತರೆ ದೇಸಿ ತಳಿಗಳ ಬೀಜ ಬ್ಯಾಂಕ್ ಸ್ಥಾಪನೆ ಯೋಜನೆ ತೋಟಗಾರಿಕೆ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಇಂಡಿ -ವಿಜಯಪೂರ ಇವರ ಸಹಯೋಗದಲ್ಲಿ ಒಂದು ದಿನದ ತರಬೇತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ವಿಜಯಪುರ ಜಿಲ್ಲೆಯ ಇಂಡಿ ನಿಂಬೆ ತನ್ನ ವಿಶಿಷ್ಟ ಗುಣಮಟ್ಟ, ತೆಳುವಾದ ಸಿಪ್ಪೆ, ಮತ್ತು ಹೆಚ್ಚಿನ ರಸಭರಿತತೆಗೆ ಹೆಸರುವಾಸಿಯಾಗಿದ್ದು, ಜಿಐ ಟ್ಯಾಗ್  ಮಾನ್ಯತೆ ಪಡೆದಿದೆ. 

ಈ ಪ್ರದೇಶವು ಕರ್ನಾಟಕದ ಸುಮಾರು 50ಅ ನಿಂಬೆ ಪೂರೈಸುತ್ತದೆ ಮತ್ತು ಇದು ಈಗ ಅಂತರರಾಷ್ಟ್ರೀಯ ಮಾರುಕಟ್ಟೆಗೆ (ಒಮಾನ್, ದುಬೈ, ಯುಕೆ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ರಫ್ತಾಗುತ್ತಿದೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಇಂಡಿ ವ್ಯವಸ್ಥಾಪಕ ನಿರ್ದೇಶಕರಾದ ರಾಹುಲಕುಮಾರ ಬಾವಿದೊಡ್ಡಿ ಮಾತನಾಡಿ ರಾಜ್ಯದಲ್ಲಿ 11 ಸಾವಿರ ಹೆಕ್ಟೆ?ರ್ನಲ್ಲಿ ನಿಂಬೆ ಬೆಳೆ ಇದ್ದರೆ, ವಿಜಯಪುರ ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೆ?ರ್, ಅದರಲ್ಲೂ ಇಂಡಿ ತಾಲೂಕಿನಲ್ಲೆ? 6 ಸಾವಿರ ಹೆಕ್ಟೆ?ರ್ನಲ್ಲಿದೆ. ಈಗ ಕಾಗ್ಜಿ ತಳಿಯ ನಿಂಬೆ ಬೆಳೆ ಕೈಗೊಳ್ಳಲು ಬೇರೆ ಜಿಲ್ಲೆ, ರಾಜ್ಯಗಳ ರೈತರು ಮುಂದಾಗಿದ್ದಾರೆ. ಹೀಗಾಗಿ ನಿಂಬೆ ಬೆಳೆಯಲ್ಲಿ ಸಾಧನೆಗೈದ ಇಂಡಿ ತಾಲೂಕಿನ ಕೆಲ ರೈತರು ನರ್ಸರಿ ಮೂಲಕ ನಿಂಬೆ ಅಗೆ ತಯಾರಿಸಿ ಮಾರಾಟ ಕೈಗೊಂಡಿದ್ದಾರೆ ಎಂದು ಹೇಳಿದರು.ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ ವೆಂಕಟೇಶಲು ಮಾತನಾಡಿದ ಇಂಡಿ ಕಾಗ್ಜಿ ನಿಂಬೆಗೆ ಜಿಐ ಟ್ಯಾಗ್ ದೊರೆತ ನಂತರ, ಬೇಡಿಕೆ ಹೆಚ್ಚಾಗಿದ್ದು,

ರೈತರು ಸಸಿಗಳನ್ನು ತಯಾರಿಸಿ ರಾಜ್ಯ ಹಾಗೂ ಹೊರರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಾಗ್ಜಿ ತಳಿಯ ನಿಂಬೆ ವರ್ಷಪೂರ್ತಿ ಫಸಲು ನೀಡುವ ಕಾರಣ, ರೈತರು ಆಸಕ್ತಿ ತೋರುತ್ತಿದ್ದಾರೆ. ಸಸಿ ಮಾರಾಟದಿಂದ ರೈತರು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ತಿಡಗುಂದಿ ತೋಟಗಾರಿಕೆ ಸಂಶೋಧನಾ ಕೇಂದ್ರ ಸಹಾಯಕ ಪ್ರಾಧ್ಯಾಪಕರು ಹಾಗೂ ಹಣ್ಣು ವಿಜ್ಞಾನ ವಿಭಾಗದ ಡಾ ಸಿದ್ದಣ್ಣ ಠೋಕೆ ಅವರು ರೈತರಿಗೆ ನಿಂಬೆ ಹಣ್ಣುಗಳನ್ನು ಹೇಗೆ ಬೆಳೆಯಬೇಕು ಹಾಗೂ ನಿರ್ವಹಣೆ ಹಾಗೂ ಸಂಸ್ಕರಣ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ತಡವಲಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ತಮ್ಮಣ್ಣ ಪೂಜಾರಿ ಸೇರಿದಂತೆ ಅನೇಕರು ಮಾತನಾಡಿದರು ಈ ಸಂದರ್ಭದಲ್ಲಿ ಪ್ರಗತಿ ಪರ ರೈತರಾದ ಮಲ್ಲನಗೌಡ ಪಾಟೀಲ (ಡೋಮನಾಳ) ರಾಜಶೇಖರ ನಿಂಬರಗಿ ಬಸವರಾಜ ಇಂಡಿ ಭೀಮರಾಯ ಹೀರಾಪೂರೆ ಅಶೋಕ ಮಿರ್ಜಿ ಮಳಸಿದ್ದಪ್ಪ ಖಸ್ಕಿ ಬಸೀರ ಬಳೇಗಾರ ಇಲಾಖೆಯ ಡಾ ಮಲ್ಲಿಕಾರ್ಜುನ ಅವಟಿ ಡಾ ರಾಘವೇಂದ್ರ ಆಚಾರಿ ಡಾ ರಾಘವೇಂದ್ರ ಅವರು ರೈತರಿಗೆ ಮಾಹಿತಿ ನೀಡಿದರು.ಈ ಕಾರ್ಯಕ್ರಮವನ್ನು ತೋಟಗಾರಿಕೆ ಸಹ ಪ್ರಾಧ್ಯಾಪಕರಾದ ಡಾ ಸತೀಶ್ ಡಿ ಸ್ವಾಗತಿಸಿದರು.ಲೇಖನ ಎಲ್ ಎಂ ನಿರೂಪಿಸಿದರು.ಅಭಿನಯ ಎಂ ವಂದಿಸಿದರು.