ಇಂಡಿ ಸಿ ವ್ಹಿ ರಾಮನ್ ಪಿಯು ಕಾಲೇಜ್ ವಿದ್ಯಾರ್ಥಿ ಎಂಬಿಬಿಎಸ್ ಆಯ್ಕೆ
Indi C V Raman PU College Student Selected for MBBS
ಇಂಡಿ 21: ನಗರದ ಸಿ ವ್ಹಿ ರಾಮನ್ ಕಾಲೇಜಿನ ವಿದ್ಯಾರ್ಥಿ ಅಮರ್ ಮುಸ್ತಫಾ ನಾಗೂರ ಓಇಇಖಿ (ನೀಟ್) ಪರೀಕ್ಷೆಯಲ್ಲಿ ಯಶಸ್ವಿಗೊಳಿಸಿ ಮಂಗಳೂರಿನ ಪ್ರತಿಷ್ಠಿತ ಕಣಚೂರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರುತ್ತಾನೆ ಇವನು ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ವಿಶಾಲಾಕ್ಷಿ ಕಾಮಗೊಂಡವರು ಹರ್ಷ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಯನ್ನು ಸತ್ಕರಿಸಿ ಕಾಲೇಜಿನ ಸಂಸ್ಥಾಪಕರಾದ ಶಿವಾನಂದ್ ಕಾಮಗೊಂಡ ಇತ್ತೀಚಿನ ದಿನಗಳಲ್ಲಿ ಪಾಲಕರಲ್ಲಿ ಹೆಚ್ಚಾಗಿ ಮಂಗಳೂರು ಧಾರವಾಡ. ಬಿಜಾಪುರದ ದಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳು ಡಾಕ್ಟರ್ ಇಂಜಿನಿಯರ್ ಆಗುತ್ತಾರೆ ಅನ್ನುವಂತ ತಪ್ಪು ವಿಚಾರಗಳಿಗೆ ಅಮರ್ ಒಬ್ಬ ಉತ್ತಮ ಉದಾಹರಣೆ (ನಿದರ್ಶನ) ಅನ್ನುವಂತ ಮಾತುಗಳನ್ನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಮಹಾವೀರ್ ವರ್ಧಮಾನ ಸಾಧನೆ ನಿರಂತರ ಪರಿಸರಮದಿಂದ ಸಾಧ್ಯ ಎಂದು ಹೇಳಿ ಶಿಕ್ಷಕರಿಗೆ ಅಭಿನಂದನೆಗಳು ತಿಳಿಸಿದರು.
ಸಂಸ್ಥೆಯ ನಿರ್ದೇಶಕರಾದ ಸನ್ಮತಿ ಹಳ್ಳಿಯವರು ವಿದ್ಯಾರ್ಥಿಯ ಸಾಧನೆಯನ್ನು ಕೊಂಡಾಡಿದರು. ವಿದ್ಯಾರ್ಥಿಯ ತಂದೆ ಮುಸ್ತಫ ನಾಗೂರ್ ಮೂಲತಃ ಒಬ್ಬ ಓಷಧಿ ವ್ಯಾಪಾರಿ ಅವರಿಗೂ ಅಭಿನಂದನೆಗಳು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶೈಲೇಶ್ ಬೀಳಗಿ, ಪ್ರಸನ್ನ ಕುಮಾರ್ ನಾಡಗೌಡ, ಶೈಲಜಾ ಜಾಗೀರ್ದಾರ್, ಶೋಭಾ ನಾರಾಯಣಕರ, ಡಾ ಸೋಮಶೇಖರ್ ಹುದ್ದಾರ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 