ಸ್ವಾತಂತ್ರ್ಯ ದೊರೆತ ದಿನ ಪ್ರತಿಯೊಬ್ಬ ಭಾರತೀಯನಿಗೂ ಸಂಭ್ರಮದ ದಿನ: ಡಾ. ಸುಶೀಲ್ ಕುಮಾರ್ ಕಲಾಲ್

ಸ್ವಾತಂತ್ರ್ಯ ದೊರೆತ ದಿನ ಪ್ರತಿಯೊಬ್ಬ ಭಾರತೀಯನಿಗೂ ಸಂಭ್ರಮದ ದಿನ: ಡಾ. ಸುಶೀಲ್ ಕುಮಾರ್ ಕಲಾಲ್  Independence day is a day of celebration for every Indian: Dr. Sushil Kumar Kalal


ಕೊಪ್ಪಳ, 17: ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನ ಪ್ರತಿಯೊಬ್ಬ ಭಾರತೀಯನೂ ಸಂಭ್ರಮಿಸುವ ದಿನವಾಗಿದೆ ಎಂದು ಕೊಪ್ಪಳ ಸದ್ಭಾವನಾ ವೇದಿಕೆಯ ಅಧ್ಯಕ್ಷ ಡಾ. ಸುಶೀಲ್ ಕುಮಾರ್ ಕಲಾಲ್ ಹೇಳಿದರು.  

ಕೊಪ್ಪಳ ಸದ್ಭಾವನಾ ವೇದಿಕೆ ವತಿಯಿಂದ ಆಯೋಜಿಸಿದ್ದ 80ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 1947ರ ಆಗಸ್ಟ್‌ 15 ಭಾರತ ಬ್ರಿಟಿಷರ ಸುಮಾರು ಎರಡು ಶತಮಾನಗಳ ದಾಸ್ಯದಿಂದ ಮುಕ್ತವಾದ ಐತಿಹಾಸಿಕ ದಿನವಾಗಿದೆ. ಸ್ವಾತಂತ್ರ್ಯವು ಭವಿಷ್ಯದೊಂದಿಗೆ ನಿರಂತರ ಅನುಸಂಧಾನ ಹೊಂದಿದ್ದು, ದೇಶದಲ್ಲಿ ಹೊಸ ಕನಸು ಹಾಗೂ ಹೊಸ ಭರವಸೆಗೆ ನಾಂದಿ ಹಾಡಿತು ಎಂದು ಹೇಳಿದರು.  

ದೇಶದ ಮಹಾನ್ ನಾಯಕರ ಆದರ್ಶಗಳನ್ನು ಪಾಲಿಸಿ, ಜಾತಿ-ಧರ್ಮದ ಭೇದ ಮರೆತು ಎಲ್ಲರೂ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸಬೇಕು. ಪರಸ್ಪರ ಸಹಕಾರದಿಂದ ಬದುಕು ಕಟ್ಟಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.  

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಿ.ಎಸ್‌. ಗೋನಾಳ ಮಾತನಾಡಿ, ಮಹಾತ್ಮ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.  

ಸಾಹಿತಿ ಮಂಜುನಾಥ ಚಿತ್ರಗಾರ, ಯುವ ನಾಯಕ ನೀತೀಶ್ ಕುಮಾರ್ ಪುಲಸ್ಕರ್, ಉರ್ದು ಸಾಹಿತಿ ಅನ್ವರ್ ಹುಸೇನ್, ಕವಿ ಎಂ. ವಿಚಾರತ್ ಅಲಿ ತಾಯರ್ ಹಾಗೂ ಅಲ್ಪಸಂಖ್ಯಾತ ಸಮುದಾಯದ ಯುವ ನಾಯಕ ಮೊಹಮ್ಮದ್ ಫಯಾಜ್ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿ, ಸಮಾನತೆ, ಶಾಂತಿ ಹಾಗೂ ದೇಶಪ್ರೇಮ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಎಂ. ಲಾಯಕ್ ಅಲಿ, ಶಾಂತರಾಜ್, ಸಾಧಿಕ್ ಹುಸೇನ್, ಮೆಹಬೂಬ್ ಸಾಬ್ ಮಗಳಾಪುರ, ನಜೀರ್ ಮುದುಗಲ್, ಜಮೀರ್ ಖಾದ್ರಿ, ಉಪನ್ಯಾಸಕ ಎಂ.ಎ. ಕೈಯುಮ್, ನಿವೃತ್ತ ಶಿಕ್ಷಕ ಅಮೀರ್ ಹಮ್ಜಾ ನದಾಫ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಹಿರಿಯ ಪತ್ರಕರ್ತ ಎಂ. ಸಾಧಿಕ್ ಅಲಿ ಸ್ವಾಗತಿಸಿದರು. ವೇದಿಕೆಯ ಕಾರ್ಯದರ್ಶಿ ಸೈಯದ್ ಹಿದಾಯತ್ ಅಲಿ ವಂದಿಸಿದರು.