ಲೋಕದರ್ಶನ ವರದಿ
ಬಳ್ಳಾರಿ16: ಸ್ಥಳೀಯ ದೇವಿನಗದಲ್ಲಿರುವ ಜಿಲ್ಲಾ ಕುರುಬರ ಸಂಘದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಂಗೊಳ್ಳಿ ರಾಯಣ್ಣನವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಕೆ.ಎರ್ರಿಗೌಡ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಮಾತನಾಡಿದ ಎರ್ರಿಗೌಡ ಅವರು, ಭಾರತದಲ್ಲಿ ಬ್ರಿಟಿಷ್ರ ಆಡಳಿತ ಕಾಲದಲ್ಲಿ ಆಗಸ್ಟ್ 15, 1798ರಲ್ಲಿ ಜನಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನನವಾಯಿತು. ಮುಂದೊಂದು ದಿನ ಅಂದರೆ ಆಗಸ್ಟ್ 15, ಭಾರತ ಬ್ರಿಟಿಷ್ರ ಕಪಿ ಮುಷ್ಠಿಯಿಂದ ಸ್ವಾತಂತ್ರ್ಯಗೊಳ್ಳುವ ದಿನದ ಸೂಚಕವಾಗಿತ್ತು. ರಾಯಣ್ಣನ ದೇಶಭಕ್ತಿ, ಸ್ವಾಮಿನಿಷ್ಠೆ ಅನನ್ಯ. ಆತನ ಹೋರಾಟದ ದಿಟ್ಟತನದಿಂದ ಬ್ರಿಟಿಷ್ರಿಗೆ ಸಿಂಹಸ್ವಪ್ನವಾಗಿದ್ದು, ಎದುರಿಸದೇ ವಾಮ ಮಾರ್ಗದಲ್ಲಿ ಬಂಧಿಸಿ ಆತನನ್ನು ಜನವರಿ, 26, 1831ರಂದು ನಂದಗಢದಲ್ಲಿ ಗಲ್ಲಿಗೇರಿಸಿದ್ದು, ಬ್ರಿಟಿಷರ ಹೇಡಿತನದ ಪ್ರದರ್ಶನವಾಗಿತ್ತು.
ಸಂಗೊಳ್ಳಿ ರಾಯಣ್ಣನ ಜನ್ಮದಿನಾಚರಣೆ ಬರೀ ಆಚರಣೆ ಮಾಡಿದರೆ ಸಾಲದು, ಆತನ ಸ್ವಾಭಿಮಾನ ಮತ್ತು ಶೌರ್ಯವನ್ನು ಭಾರತೀಯರಾದ ನಾವು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದಶರ್ಿಯಾದ ಕೆ.ರಾಮಕೃಷ್ಣ, ಶ್ರೀಮತಿ ಜೀವೇಶ್ವರಿ, ಖಜಾಂಚಿ ಕೆ.ಮೋಹನ್, ಹೊನ್ನೂರ್ಸ್ವಾಮಿ, ಮಲ್ಲೇಶ್, ಮುಖಂಡರಾದ ವೆಂಕೋಬ, ಎಲ್ಲ ಪದಾಧಿಕಾರಿಗಳು, ಹಾಲುಮತ ಸಮಾಜದ ಮುಖಂಡರು, ಹಕ್ಕಬುಕ್ಕ ವಿದ್ಯಾಥರ್ಿನಿಯಲದ ವಿದ್ಯಾಥರ್ಿಗಳು ಭಾಗವಹಿಸಿದ್ದರು.