ಅರಿಹಂತ ಪಿಯು ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ಸಂಭ್ರಮ
Independence Day celebrations at Arihant PU and Graduate College
ಮುದ್ದೆಬಿಹಾಳ 16: ಮುದ್ದೇಬಿಹಾಳದ ಅರಿಹಂತ ಪಿಯು ಹಾಗೂ ಪದವಿ ಮಹಾವಿದ್ಯಾಲಯದಲ್ಲಿ 79 ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವವನ್ನು ಅತ್ಯಂತ ಗೌರವ ಹಾಗೂ ಸಂಭ್ರಮದೊಂದಿಗೆ ಆಚರಿಸಲಾಯಿತು.
ಸಂಸ್ಥೆಯ ಅದ್ಯಕ್ಷ ಮಹಾವೀರ ಬ. ಸಗರಿಯವರು ಧ್ವಜಾರೋಹಣವನ್ನು ನೆರೆವೇರಿಸಿ, ರಾಷ್ಟ್ರನಾಯಕರು ಸ್ವಾತಂತ್ರ್ಯ ಹೋರಾಟಗಾರರು, ವೀರಯೋಧರನ್ನು ಗೌರವಿಸಿ ನಿತ್ಯವು ದೇಶಕ್ಕಾಗಿ ದುಡಿಯುವ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ, ದೇಶ ನಿನಗೇನು ಮಾಡಿದೆ ಎನ್ನುವದಕ್ಕಿಂತ, ದೇಶಕ್ಕಾಗಿ ನೀನೇನು ಮಾಡೀದೀಯ ಎಂಬುದು ಮುಖ್ಯ ಎಂದು 1999 ರಿಂದ 2025 ರವರೆಗೆ ಸತತ 26 ನೇ ಬಾರಿಗೆ ಧ್ವಜಾರೋಹಣವನ್ನು ನೆರೆವೇರಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ, ಹೀಗೆ ತಾಯಿ ಭಾರತಾಂಭೆಯ ಸೇವೆಗೈಯುವ ಅವಕಾಶ ವಿದ್ಯಾರ್ಥಿಗಳಿಗೂ ಸಿಗಲಿ ಮತ್ತು ಈಗ ಜಗತ್ತೆ ಭಾರತದತ್ತ ತಿರುಗಿ ನೋಡುವಂತೆ ಮಾಡುವ ಶಕ್ತಿ ಪ್ರತಿಯೊಬ್ಬ ಭಾರತೀಯನಲ್ಲಿಯೂ ಇದೆ, ರಾಷ್ಟ್ರಗೀತೆ, ರಾಷ್ಟ್ರಧ್ವಜ ನಮ್ಮ ರಾಷ್ಟ್ರಾಭಿಮಾನದ ಸಂಕೇತ ಎಂದು ಮಾತನಾಡಿದರು.
ನಂತರ ಕಾಲೇಜಿನ ಪ್ರಾಚಾರ್ಯರಾದ ಪ್ರೊ ವಿ. ಎಂ. ಸಗರಿ, ಉಪನ್ಯಾಸಕರಾದ ಪ್ರೊ ಹೆಚ್. ಎಸ್. ಗೌಡರ ಮತ್ತು ಪ್ರೊ ರಾಜನಾರಾಯಣ ನಲವಡೆ ಅವರು ಭಾರತಕ್ಕೆ ಹೇಗೆ ಸ್ವಾತಂತ್ರ್ಯ ಬಂತು, ಇತಿಹಾಸವನ್ನು ಮೆಲಕು ಹಾಕಿ ವಿದ್ಯಾರ್ಥಿಗಳಿಗೆ ಮನ ಮಟ್ಟುವಂತೆ ಮಾತನಾಡಿದರು ಹಾಗೂ ದೇಶಪ್ರೇಮ ಎಲ್ಲರಲ್ಲಿಯೂ ಬಿತ್ತರಿಸಲಿ ಎಂದು ಮಾತನಾಡಿದರು.
ಉಪನ್ಯಾಸಕರಾದ ಜಿ.ಡಿ. ಬಡಿಗೇರ, ಅಶೋಕ ಹಡಪದ, ಶರೀಫ್ ನದಾಫ್, ಸಮೀರ ಬಾಗವಾನ, ಖಾಜಿ, ಪ್ರಭಾಕರ್, ಬಸವರಾಜ ಕತ್ತಿ, ಅಕ್ಷತಾ ಕುಟ್ಟೆ, ರೋಹಿನಿ ನಾಯ್ಕೋಡಿ, ಬಸಮ್ಮಾ ಹಲವರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 