ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅನಿರ್ಧಿಷ್ಠಾವಧಿ ಮುಷ್ಕರ
Indefinite strike demanding fulfillment of various demands
ಕಂಪ್ಲಿ 16: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಪತ್ರ ಬರಹಗಾರರ ಒಕ್ಕೂಟದಿಂದ ಪಟ್ಟಣದ ಪುರಸಭೆ ಎದುರುಗಡೆಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹಿರಿಯ ಉಪ ನೋಂದಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಅನಿರ್ಧಿಷ್ಠಾವಧಿ ಮುಷ್ಕರ ನಡೆಸಿ, ನಂತರ ಉಪನೋಂದಣಾಧಿಕಾರಿ ಎಸ್.ಬಿ.ಶ್ರೀನಿವಾಸ್‌ಗೆ ಮನವಿ ಪತ್ರ ಸಲ್ಲಿಸಿದರು. ನಂತರ ಹಿರಿಯ ಪತ್ರ ಬರಹಗಾರ ಕೆ.ಮೆಹಬೂಬ್ ಮಾತನಾಡಿ, ಕಾವೇರಿ-2 ಪ್ರಕ್ರಿಯೆಯಲ್ಲಿ ಕೆಲ ಬದಲಾವಣೆಗೆ ಎಲ್ಲಾ ಉಪ-ನೋಂದಣಿ ಕಛೇರಿಗಳಲ್ಲಿ ನೋಂದಣಿ ಕಾರ್ಯಗಳು ಕುಂಠಿತಗೊಂಡಿವೆ. ಸ್ವತ್ತಿನ ವಿವರಣೆಯಲ್ಲಿ ಮೂಲ ಕರುಡುಪ್ರತಿಯಲ್ಲಿ ಇರುವ ಅಂಶಗಳು ಸಂಪೂರ್ಣವಾಗಿ ಅನ್‌ಲೈನ್‌ನಲ್ಲಿ ನಮೂದು ಆಗದೇ ಇರುವುದರಿಂದ ನೋಂದಣಿ ಪ್ರಕ್ರಿಯೆಯಲ್ಲಿ ಶೇ.100ಕ್ಕೆ 95ಅ ಪತ್ರಗಳು ಸ್ಥಗಿತಗೊಂಡಿರುತ್ತವೆ.
ಇದರಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಆದ್ದರಿಂದ ತಂತ್ರಂಶದಲ್ಲಿ ಆಗುತ್ತಿರುವ ತೊಂದರೆಗಳನ್ನು ಆದಷ್ಟು ಬೇಗನೆ ಸರಿಪಡಿಸಿ ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದರ ಮೂಲಕ ಸಾರ್ವಜನಿಕರಿಗೆ ನೋಂದಣಿ ಮಾಡಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಪರವಾನಿಗೆ ಪಡೆದ ಭೂ-ಮಾಪಕರಿಗೆ ಅಧಿಕೃತ ಹಾಗೂ ಪ್ರಸ್ತುತ ಭೂ-ಮಾಪಕರ ಇಲಾಖೆಯಲ್ಲಿ ಪ್ರತ್ಯೇಕವಾಗಿ ಪತ್ರಗಳ ನೋಂದಣಿಗೆ ಬಂಧಿಸಿದಂತೆ ಅಧಿಕೃತ ಜಿಲ್ಲಾ ಬರಹರಾರರಿಗೆ ಲಾಗೀನ್ ಐಡಿ ನೀಡಿರುವ ಮಾದರಿಯಲ್ಲಿ ನಮಗೂ ಸಹ ಸಿಟಿಜನ್ ಲಾಗೀನ್ ಜೊತೆಗೆ ಪ್ರತ್ಯೇಕ ಲಾಗೀನ್ ಐಡಿ ನೀಡಬೇಕು. ಅನಧಿಕೃತ ಬರಹಗಾರರ ಹಾವಳಿಯನ್ನು ಇಲಾಖೆಯ ಒಳಗೆ ಬರದಂತೆ ಕ್ರಮ ವಹಿಸಬೇಕು.
ಸೇವಾ ಭದ್ರತೆ ಜೊತೆಗೆ ಲಾಗೀನ್ ಐಡಿ ಅಥವಾ ಗುರುತಿನ ಚೀಟಿ ನೀಡಬೇಕು. ಹೀಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪತ್ರಬರಹಗಾರರಾದ ಶರ್ಮಸ್‌ವಲಿ, ಆರ್.ಚನ್ನಬಸುವ, ಜಿ.ಮಹೇಶ, ಎ.ಸತ್ಯನಾರಾಯಣಮೂರ್ತಿ, ಎಸ್.ಮಹಮ್ಮದ್ ಆಶಂ, ಡಿ.ಮಂಜುನಾಥ, ಹೆಚ್.ರಾಜಶೇಖರ, ವಿ.ಅನಂತಪದ್ಮನಾಥ, ಕೆ.ವಿ.ಸಂದೀಪ, ಸಿದ್ದರಾಮಯ್ಯ ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 