127ನೇ ದಿನ ಪೂರೈಸಿದ ಬಲ್ಡೋಟ ಕಾರ್ಖಾನೆ ತೊಲಗಿಸಿ ಅನಿರ್ಧಿಷ್ಟ ಧರಣಿ
Indefinite sit-in to remove Baldota factory completes 127th day
ಕೊಪ್ಪಳ 06: ಕೊಪ್ಪಳ ಭಾಗ್ಯನಗರ ಬಂದ್ ಹೋರಾಟ, ಜಿಲ್ಲೆಗೆ ಹೊಸ ದಿಕ್ಸೂಚಿ ನೀಡಿದೆ ಎಂದು ಖ್ಯಾತ ಸುಗಮ ಸಂಗೀತ ಗಾಯಕ ಸದಾಶಿವ ಪಾಟೀಲ್ ಹೇಳಿದರು. ಅವರು ನಗರಸಭೆ ಆವರಣದಲ್ಲಿ 127ನೇ ದಿನದಿಂದ ಮುಂದುವರಿದ ಬಲ್ದೋಟ ಹಟಾವೋ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ, ಸ್ಪಾಂಜ್ ಐರನ್ ಕಾರ್ಖಾನೆ, ಸಿಮೆಂಟ್, ವಿಷ ರಸಾಯನ ತಯಾರಿಸುವ ಕಾರ್ಖಾನೆಗಳು ಎಗ್ಗಿಲ್ಲದೆ ಮಾಲಿನ್ಯ ಮಾಡಿ, ಮುಗ್ಧ ರೈತರು ಪ್ರಶ್ನೆ ಮಾಡಿದರೆ ಗೂಂಡಾಗಿರಿ ಮಾಡುತ್ತಿವೆ ಎಂಬ ಮಾಹಿತಿ ಹಳ್ಳಿ ಜನರಿಂದ ಕೇಳಿ ಬೇಸರವಾಯಿತು,
ಅನಾಥ ಭಾವದಿಂದ ಸಂತ್ರಸ್ತರಾಗಿ ಹಳ್ಳಿಗರು ಗೊಳೋ ಎಂದು ಅಳುತ್ತಿರುವ ಜನರ ಕಣ್ಣೊರೆಸುವ ಕೆಲಸವನ್ನು ಶಾಸಕರು ಜಿಲ್ಲಾಧಿಕಾರಿಗಳು ಯಾವತ್ತೋ ಮಾಡಬೇಕಿತ್ತು, ಈಗಲಾದರೂ ರೈತರ ನೆರವಿಗೆ ಹೋಗಿರುವುದು ಸ್ವಾಗತಾರ್ಹವಾಗಿದೆ. ಶಾಸ್ವತ ಪರಿಹಾರ ಎಂದರೆ ಆ ಮಾಲಿನ್ಯಕಾರಕ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಬೇಕು ಇಲ್ಲವೆ, ಅಲ್ಲಿನ ಜನರ ಜೀವ ಉಳಿಸಲು ಶಾಶ್ವತವಾಗಿ ಮುಚ್ಚಬೇಕು ಎಂದರು.
ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ಶನಿವಾರ ಬೆಳಗ್ಗೆ 10 ಗಂಟೆಗೆ ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ನಡೆಯುವ ಬೆಂಗಳೂರು ಚಲೋ ಪೂರ್ವ ಸಿದ್ಧತಾ ಸಭೆ ಕರೆಯಲಾಗಿದೆ. ತಪ್ಪದೇ ಬಾಧಿತ ಹಳ್ಳಿಯ ರೈತರು, ಕೊಪ್ಪಳ, ಭಾಗ್ಯನಗರದ ಪುರ ಪ್ರಮುಖರು, ಸಂಘ ಸಂಸ್ಥೆಗಳ ಮುಖಂಡರು ಹಾಗೂ ಫೆ.24ರಂದು ಬಂದ್ ಯಶಸ್ವಿಗೊಳಿಸುವಲ್ಲಿ ಮುಂದಾಳತ್ವವಹಿಸಿದ್ದ ಎಲ್ಲಾ ಸಂಘಟಕರು, ಮಹಿಳಾ ಮುಖಂಡರು ಈ ಸಭೆಗೆ ಆಗಮಿಸಿ ಮುಂದಿನ ಹೋರಾಟದ ರೂಪುರೇಷೆ ಮಾಡಲು ಸಲಹೆ, ಸೂಚನೆ ನೀಡಬೇಕೆಂದು ಕೋರಿದರು.
ಧರಣಿಯಲ್ಲಿ ಮಾನವ ಬಂಧುತ್ವ ವೆದಿಕೆಯ ವಿಭಾಗೀಯ ಸಂಚಾಲಕ ಭೀಮಪ್ಪ ಹವಳಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಎಲ್.ಎಫ್. ಪಾಟೀಲ್, ಜಿ.ಬಿ. ಪಾಟೀಲ್, ರವಿ ಕಾಂತನವರ, ಗಂಗಾಧರ ಖಾನಾಪೂರ, ಮಹಾದೇವಪ್ಪ ಮಾವಿನಮಡು, ಬಸವರಾಜಪ್ಪ ಶೆಟ್ಟರ್, ವೈ ಸತ್ಯನಾರಾಯಣ, ಮಲ್ಲಪ್ಪ ಎಚ್. ಮಾಜಿ ನೂರು, ನಾಗರಾಜ ಕುಷ್ಟಗಿ, ವೈ.ಎಚ್. ಹಳ್ಳಿಕೇರಿ, ಶಿವಪ್ಪ ಜಲ್ಲಿ, ಮಂಗಳೇಶ ರಾಠೋಡ್, ವೈ.ಎಚ್. ಹಳ್ಳಿಕೇರಿ, ರೇವಣಸಿದ್ದಪ್ಪ ಚಿತ್ರಗಾರ, ಇಂದ್ರೇಶ್ ಪೂಜಾರ, ಹನುಮಂತಪ್ಪ ಕಟಿಗಿ, ವಿಜಯ ಮಹಾಂತೇಶ ಹಟ್ಟಿ, ಸುಭಾನ್ ಸಾಬ್ ನೀರಲಗಿ, ಮಂಜುನಾಥ ಸಿ, ರತ್ನಮ್ಮ ದೊಡ್ಡಮನಿ ಮುಂತಾದ ಸತ್ಯಾಗ್ರಹಿಗಳು ಇದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 