ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಿ: ಬಸಪ್ಪ ಸುಣಧೋಳಿ
Inculcate sportsmanship among students: Basappa Sunadholi
ಲೋಕದರ್ಶನ ವರದಿ
ಕ್ರಾಂತಿ ಮಹಿಳಾ ಮಂಡಲ ಹಾಗೂ ಉಮಾ ಸಂಗೀತ ಪ್ರತಿಷ್ಠಾನದಿಂದ ವಿಶೇಷ ಚೇತನರ ದಿನಾಚರಣೆ
ಬೆಳಗಾವಿ 24: ಓದಿನೊಂದಿಗೆ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಬೇಕು. ಒಬ್ಬ ವ್ಯಕ್ತಿಯ ಸವಾಂರ್ಗೀಣ ವ್ಯಕ್ತಿತ್ವರೂಪಗೊಳ್ಳಬೇಕಾದರೆ ಕ್ರೀಡೆಯ ಪಾತ್ರ ಅನನ್ಯವಾಗಿದೆ ಎಂದು ವಿಶ್ವಾಸ್ ಸಂಸ್ಥೆಯ ಸಂಸ್ಥಾಪಕ, ಕಾರ್ಯದರ್ಶಿ ಬಸಪ್ಪ ಸುಣಧೋಳಿ ಅವರು ಹೇಳಿದರು.
ನಗರದ ಹಿಂದುವಾಡಿಯಲ್ಲಿ ಕ್ರಾಂತಿ ಮಹಿಳಾ ಮಂಡಲ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ಕಿಲ್ಲಾದಲ್ಲಿರುವ ಆರಾಧನಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ,
ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕ್ರೀಡಾಭಿಮಾನ ಬೆಳಸಬೇಕು . ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸದೃಢತೆ ಹೆಚ್ಚುತ್ತದೆ. ಪಾಠದಷ್ಟೇ ಪಠ್ಯೇತರ ಚಟುವಟಿಕೆಗಳಿಗೆ ಗಮನ ಕೊಡಬೇಕು. ಮಕ್ಕಳಲ್ಲಿ ಹುದುಗಿರುವ ಕ್ರೀಡಾ ಪ್ರತಿಭೆ ಗುರುತಿಸಿ ಪ್ರೊ?ತ್ಸಾಹಿಸುವುದು. ಶಿಕ್ಷಕ ಹಾಗೂ ಪಾಲಕರ ಜವಾಬ್ದಾರಿಯಾಗಿದೆ. ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟಗಳನ್ನು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಏರಿ್ಡಸಬೇಕಿದೆ.
ಪ್ರತಿ ವರ್ಷವೂ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ ಈ ಎರಡು ಸಂಸ್ಥೆಗಳು ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ವಿಶ್ವವಿಕಲಾಂಗ ಚೇತನ ದಿನಾಚರಣೆಯನ್ನು ಆಚರಿಸುತ್ತಿರುವುದು ನಿಜಕ್ಕೂ ಬಹಳ ಅರ್ಥಪೂರ್ಣವಾಗಿದೆ.
ಸಮಾಜದಲ್ಲಿ ಇಂದು ಕ್ರೀಡಾಕೂಟಕ್ಕೆ ಹೆಚ್ಚಿನ ಮಹತ್ವದ್ದುದರಿಂದ ನಮ್ಮ ಸಂಘಟನೆಯಲ್ಲಿಯೂ ಕೂಡ ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡಿದ್ದೇವೆ ಎಲ್ಲ ವಿಕಲಚೇತನರು ಯಾರ ಮೇಲೂ ಅವಲಂಬನೆ ಯಾಗದೆ ಸ್ವಾವಲಂಬಿಗಳಾಗಿ ಬದುಕಲು ಪ್ರಯತ್ನಿಸಬೇಕು. ಇಂದು ನಮ್ಮ ಸಂಘಟನೆಯಲ್ಲಿ ನಾಲ್ಕು ಜನ ಸದಸ್ಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಆದ್ದರಿಂದ ವಿಕಲಚೇತನರು ಕೂಡ ಮನಸು ಮಾಡಿದರೆ ಸಾಮಾನ್ಯರಂತೆ ಸಾಧನೆಯನ್ನು ಮಾಡಿ ಸ್ವಾವಲಂಬಿಗಳಾಗಿ ಬದುಕಬಹುದು ಎಂಬುದನ್ನು ಹೇಳಿದರು.
ಸರ್ಕಾರ ವಿಕಲಚೇತನ ಮಕ್ಕಳ ಹೆಚ್ಚಿನ ಆದ್ಯತೆ ನೀಡಬೇಕು. ಕ್ರಾಂತಿ ಮಹಿಳಾ ಮಂಡಲವು ಪ್ರತಿ ವರ್ಷವೂ ಈ ಮಕ್ಕಳಿಗೆ ಸಹಾಯ ನೀಡುತ್ತಿರುವುದು ಹೆಮ್ಮೆಯ ವಿಷಯ.
ಆರಾಧನಾ ಬುದ್ಧಿಮಾಂದ್ಯ ಶಾಲೆಯ ಪ್ರಧಾನ ಗುರುಗಳಾದ ಗಜಾನನ್ ಎಂ ಸುತಾರ್ ಅವರು, ಆರಾಧನಾ ಶಾಲೆಯ ಬುದ್ಧಿಮಾಂದ್ಯ ಮಕ್ಕಳಿಗೆ ಒಂದು ವಿಶೇಷ ತರಬೇತಿಯನ್ನು ನೀಡಿದರೆ ಅವರು ಕೂಡ ಸಾಮಾನ್ಯ ಮಕ್ಕಳಿಗಿಂತಲೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸಾಧ್ಯ ಎಂದು ತಮ್ಮ ಶಾಲೆ ಮಕ್ಕಳ ಪ್ರಗತಿಯನ್ನು ಕುರಿತು ತಿಳಿಸಿ ಹೇಳಿದರು.
ತಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ತುಂಬಾ ಖುಷಿಯಿಂದ ಹಂಚಿಕೊಂಡರು ಹಾಗೂ ನಮ್ಮ ಎರಡು ಸಂಸ್ಥೆಗಳು ಮಾಡುತ್ತಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ವಿಶ್ವಾಸ ಸಂಸ್ಥೆಯ ಬಸಪ್ಪ ಸುಣಧೋಳಿ, ಈರ್ಪ ಬಸಪ್ಪ ಪಟಗುಂದಿ, ಲಕ್ಷ್ಮಿ ಆರ್. ರಾಯಣ್ಣವರ್, ಲಲಿತಾ ಶಂಕರ್ ಗವಸ ಮತ್ತು ಆರಾಧನಾ ಶಾಲೆಯ ರಿಯಾ ರಮೇಶ ಗೋರಲ್, ಸುಷ್ಮಾಪಟಗುಂದಿ, ರಾಣಿ ನಾರಾಯಣ್ ದುರ್ಗಾಯಿ ಅವರನ್ನು ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಂಗಲಾ ಮಠದ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ರತ್ನಪ್ಗೊಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ಜಕ್ಕನ್ನವರ್, ರೇಣುಕಾ ಕಾಂಬಳೆ ಪ್ರಾರ್ಥಿಸಿದರು. ಪದ್ಮ ಚೌಗುಲೆ ಹಾಗೂ ಸಪ್ನಾ ಚೌಗುಲೆ ಅತಿಥಿಗಳ ಪರಿಚಯಿಸಿದರು. ಪ್ರೇಮ ಉಪಾಧ್ಯಾ, ಡಾ. ರಾಜೇಂದ್ರ ಮಠದ್, ಗುಡಗ್ನಟ್ಟಿ , ನೆರಳೇಕರ್, ವಿಶ್ವಾಸ್ ಫೌಂಡೇಶನದ ಸದಸ್ಯರು ನಮ್ಮ ಎರಡು ಸಂಸ್ಥೆಯ ಸದಸ್ಯರು ಮತ್ತು ಆರಾಧನಾ ಶಾಲೆಯ ಮಕ್ಕಳು ಹಾಗೂ ಶಾಲೆ ಸಿಬ್ಬಂದಿ ವರ್ಗ ದವರೆಲ್ಲರೂ ಉಪಸ್ಥಿತರಿದ್ದರು. ಶೋಭಾ ಕಾಡನ್ನವರ್ ನಿರೂಪಿಸಿದರು. ರತ್ನ ಗುಡಗನಟ್ಟಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 