ಸಾಮೂಹಿಕ ವಿವಾಹ ಹೆಚ್ಚು ಹೆಚ್ಚು ನಡೆಯುವುದರಿಂದ ಐಕ್ಯತೆಯ ಸಂದೇಶ ಸಿಗಲಿದೆ
Increasing number of mass marriages will send a message of unity
ಹಾನಗಲ್ 12 :ಸಾಮೂಹಿಕ ವಿವಾಹವು ಸಮಾಜದಲ್ಲಿ ಸರಳತೆ ಮತ್ತು ಸಮಾನತೆ ಸಾರುವ ಮಹತ್ವದ ಸಂಪ್ರದಾಯವಾಗಿದೆ. ಸಾಮೂಹಿಕ ವಿವಾಹ ಹೆಚ್ಚು ಹೆಚ್ಚು ನಡೆಯುವುದರಿಂದ ಐಕ್ಯತೆಯ ಸಂದೇಶ ಸಿಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಕಲಕೇರಿ ಗ್ರಾಮದಲ್ಲಿ ಬಸವಣ್ಣ ದೇವರ ರಥೋತ್ಸವ ಹಾಗೂ ವೀರಭದ್ರೇಶ್ವರ ಗುಗ್ಗಳ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ 6 ಜೋಡಿ ನವವಧುವರರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಜಿಪಂ ಮಾಜಿ ಸದಸ್ಯರಾದ ಮಹದೇವಪ್ಪ ಬಾಗಸರ, ಟಾಕನಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಅಜ್ಜಪ್ಪ ಹಿರಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಶಿವನಾಗಪ್ಪ ಬಿಷ್ಟಣ್ಣನವರ, ಬಸವಂತಪ್ಪ ಶೇಷಗಿರಿ, ಪ್ರಕಾಶ ಬಣಕಾರ, ಸುರೇಶ ಕೊಂಡೋಜಿ, ಭರಮಣ್ಣ ಶಿವೂರ, ಬವಸರಾಜ ಗೌರಕ್ಕನವರ, ನಾಗಪ್ಪ ಮೆಳ್ಳಿಹಳ್ಳಿ, ವೀರ್ಪ ಮೆಳ್ಳಿಹಳ್ಳಿ, ಸುರೇಶ ಬಿಷ್ಟಣ್ಣನವರ, ಮಹಲಿಂಗಯ್ಯ ಹಿರೇಮಠ, ಶಿವಾನಂದಪ್ಪ ಬಣಕಾರ, ಮಲ್ಲಿಕಾರ್ಜುನ ಕಳ್ಳಿ, ಬಸನಗೌಡ ಗೋರೇಗೌಡ್ರ, ಶಾಂತಪ್ಪ ಕೊಪ್ಪದ, ಹೇಮಣ್ಣ ಅಡಿಗಣ್ಣವರ, ಮೂಕಪ್ಪ ಕೊಪ್ಪದ, ಮಾರ್ತಾಂಡಪ್ಪ ಗೋರೇಗೌಡ್ರ, ಮಾರ್ತಾಂಡ ಗೌಡರ ಸೇರಿದಂತೆ ಇನ್ನೂ ಹಲವರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 