ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ, ಒಂದೇ ದಿನದಲ್ಲಿ 44 ಪ್ರಕರಣ

ಬೆಂಗಳೂರು,  ಏ 17, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ  ಆತಂಕಕಾರಿಯಾಗಿ ಏರಿಕೆಯಾಗುತ್ತಲೇ ಇದೆ. ಶುಕ್ರವಾರ ರಾಜ್ಯದಲ್ಲಿ 44  ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 359ಕ್ಕೇರಿಕೆಯಾಗಿದ್ದು, 13 ಮಂದಿ ಮೃತಪಟ್ಟಿದ್ದಾರೆ. ಒಟ್ಟು 88 ಜನರು ಚೇತರಿಕೆ ಕಂಡಿದ್ದಾರೆ. ಬೆಂಗಳೂರು ನಗರದ 11 ವರ್ಷದ ಹೆಣ್ಣು ಮಗು, 55 ವರ್ಷದ ವೃದ್ಧನಲ್ಲಿ ಸೋಂಕು ಇರುವುದು ವರದಿಯಾಗಿದೆ. ಮೈಸೂರು  ನಂಜನಗೂಡಿನಲ್ಲಿ  ಒಟ್ಟು 10 ಜನರು ಸೋಂಕಿಗೆ ಗುರಿಯಾಗಿದ್ದಾರೆ.50, 33, 33, 22,  38,26,28,22, 29, 26 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಬಳ್ಳಾರಿ ಹೊಸಪೇಟೆಯ 10 ವರ್ಷದ ಮಗು ಸೇರಿ  39, 68 21,48,50,24 ವರ್ಷ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ.
ಬೆಳಗಾವಿಯಲ್ಲಿ 127ನೇ ರೋಗಿಯ ಸಂಪರ್ಕ ಹೊಂದಿದ್ದ 34, 17, 46, 37, 38 ವರ್ಷದ ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿದೆ. ಮೈಸೂರಿನಲ್ಲಿ  41, 38 ವರ್ಷದ ಮಹಿಳೆ,ಮಂಡ್ಯ ಮಳವಳ್ಳಿ 25, 29 ಹಾಗೂ 45 ವರ್ಷದ ವ್ಯಕ್ತಿಗಳು,ದಕ್ಷಿಣ  ಕನ್ನಡದ ಉಪ್ಪಿನಂಗಡಿಯಲ್ಲಿ 39 ವರ್ಷದ ಪುರುಷ,ಬೆಂಗಳೂರು ನಗರದ 6 ವರ್ಷದ ಗಂಡು ಮಗು,  25 ವರ್ಷದ ಮಹಿಳೆ,ಬೀದರ್ ನ 18 ವರ್ಷದ ಯುವಕ,ವಿಜಯಪುರದಲ್ಲಿ 6 ವರ್ಷ ಗಂಡು ಮಗು, 28  ವರ್ಷದ ಮಹಿಳೆಯರು, ಚಿಕ್ಕಬಳ್ಳಾಪುರದ 9 ವರ್ಷದ ಮಗು ಸೇರಿ 36, 20 ವರ್ಷದ  ವ್ಯಕ್ತಿಗಳು,ಬೆಂಗಳೂರು ನಗರದ 64 ವರ್ಷದ ವೃದ್ಧೆ, 32, 23, 28, 21 ವರ್ಷದ  ಪುರುಷರು, 65 ವರ್ಷದ ವೃದ್ಧೆಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಇದರಿಂದ ಬೆಂಗಳೂರು ನಗರ 86 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಮೈಸೂರು 73 ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಬೆಳಗಾವಿ 41 ಪ್ರಕರಣಗಳಿದ್ದು ಮೂರನೇ ಸ್ಥಾನದಲ್ಲಿದೆ.