ಹೊಸ ದರೋಜಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿಯ ನೂತನ ದೇವಸ್ಥಾನ ಪ್ರಾರಂಭೋತ್ಸವ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ
Inauguration of the new temple of Lord Ayyappa and installation of a new idol at New Daroji
ಕಂಪ್ಲಿ 06: ತಾಲೂಕು ಸಮೀಪದ ಹೊಸ ದರೋಜಿ ಗ್ರಾಮದಲ್ಲಿ ಶ್ರೀಧರ್ಮಶಾಸ್ತ್ರಾ ಅಯ್ಯಪ್ಪ ಸೇವಾ ಸಮಿತಿವತಿಯಿಂದ ಶ್ರೀ ಕರೂರು ವಾದಿರಾಜ ಆಚಾರ್ ಪಂಚಾಗ ಕರ್ತರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪಸ್ವಾಮಿಯ ನೂತನ ದೇವಸ್ಥಾನ ಪ್ರಾರಂಭೋತ್ಸವ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ ಶುಭ ಶುಕ್ರವಾರಂದು ಶ್ರದ್ಧೆ, ಭಕ್ತಿ ಜೊತೆಗೆ ಸಡಗರ ಸಂಭ್ರಮದಿಂದ ನೆರವೇರಿತು. ಇಲ್ಲಿನ ದೇವಸ್ಥಾನದಲ್ಲಿ ಬೆಳಗಿನ ಜಾವದಲ್ಲಿ ಪ್ರತಿಷ್ಠಾಂಗ ಹೋಮ, ಪ್ರತಿಷ್ಠಾಪನೆ ನ್ಯಾಸ ಹೋಮಗಳ ಪೂರ್ಣಾವತಿ, ಕಳಶಾಬೀಕ್ಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಸ್ತವಾಗಿ ನಡೆದವು.
ನಂತರ ಇಲ್ಲಿ ಭಕ್ತರಿಗೆ ಅನ್ನಸಂತಾರೆ್ಣ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಗುರುಸ್ವಾಮಿಗಳಾದ ವಿ.ಜನಾರ್ಧನ, ವುಳ್ಳಿ ವೆಂಕಟೇಶ, ಕೆ.ನಾಗರಾಜ, ವಿ.ನಾಗರಾಜ, ಡಿ.ವಿ.ಮಂಜುನಾಥ ಸೇರಿದಂತೆ ಶ್ರೀಧರ್ಮಶಾಸ್ತ್ರಾ ಅಯ್ಯಪ್ಪ ಸೇವಾ ಸಮಿತಿ ಸದಸ್ಯರು ಹಾಗೂ ಅಯ್ಯಪ್ಪ ಮಾಲಾಧಾರಿಗಳು ಮತ್ತು ಸ್ಥಳೀಯ ಹಾಗೂ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು. ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆ ದೇವಸ್ಥಾನದಲ್ಲಿ ಫೆ.4ರಂದು ಬೆಳಿಗ್ಗೆ ಪುಣ್ಯಾವಾಚನ, ದೀಪ ಸ್ಥಾಪನೆ, ಅಂಗುರಾರೆ್ಣ, ಕಳಸ ಸ್ಥಾಪನೆ, ಗಣಪತಿ ಹೋಮ, ನವಗ್ರಹ ಹೋಮ, ಸಂಜೆ ರಕ್ಷೊಘ್ನ ಹೋಮ, ಧಾನ್ಯಾಧಿ ಬಾಸ ಹೋಮ, ಮಹಾಮಂಗಳಾರತಿ, ಫೆ.5ರಂದು ಬೆಳಿಗ್ಗೆ ಕಳಸ ದೇವತಾ ಹೋಮ, ಜಲಾದಿವಾಸ ಮಹಾಮಂಗಳಾರತಿ, ಸಂಜೆ ವಾಸ್ತು ಹೋಮ, ಸುದರ್ಶನ ಹೋಮ, ಪುಷ್ಪಾದಿವಾಸ, ಶಯಾದಿವಾಸ, ಮಹಾಸ್ಥಾಪನೆ ಮಂಗಳಾರತಿ. ಹೀಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ಜರುಗಿದವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 