ಸಾವಳಗಿ ಶಿವಲಿಂಗೇಶ್ವರ ನೂತನ ಗೋಪೂರ ಉದ್ಘಾಟನೆ
Inauguration of the new gopuram at Savalagi Shivalingeshwara
ಆಲಮೆಲದ 18: ಪಟ್ಠಣದ ಸಾವಳಗಿ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.
ಶ್ರಾವಣ ಮಾಸದಲ್ಲಿ 11 ದಿನಗಳವರೆಗೆ ಗುಡ್ಡಾಪುರ ದಾನಮ್ಮದೇವಿ ಜೀವನ ದರ್ಶನ ಪ್ರವಚನ ಸಾಗಿ ಇಂದು ಮಹಾಮಂಗಲಗೊಂಡಿತು. ಅರ್ಚಕ ಚೆನ್ನಯ್ಯ ಸಾರಂಗಮಠವರು ವಿಶೇಷ ಪೂಜೆ ನೆರವೇರಿಸಿ ನೈವೇದ್ಯ ಸರ್ಮಪಿಸಿ ಪುಷ್ಪಾರ್ಚನೆ ಮಾಡಿದರು. ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಬಳಿಕ ಶಾಸಕ ಅಶೋಕ ಮನಗೂಳಿ ನೂತನ ಕಟ್ಟಿಸಿದ ಗೋಪುರವನ್ನು ಉದ್ಘಾಟಿಸಿದರು. 50 ಸಾವಿರ ರೂ. ದೇವಸ್ಥಾನ ಕಮೀಟಿಗೆ ದೇಣಿಗೆ ಸಲ್ಲಿಸಿದರು. ನಂತರ ನೂತನ ಬೆಳ್ಳಿಯ ಮೂರ್ತಿ ಪ್ರತಿಷ್ಟಾಪನೆ ಕಳಸರೋಹಣವನ್ನು ಚಂದ್ರಶೇಖರ ಶಿವಾಚಾರ್ಯರು ನೆರವೆರಿಸಿದರು. ಶಿವಲಿಂಗೇಶ್ವರ ಪಲ್ಲಕ್ಕಿ ಉತ್ಸವದಲ್ಲಿ 101 ಮಹಿಳೆಯರು ಕುಂಭದೊಂದಿಗೆ ಹೆಜ್ಜೆ ಹಾಕುತ್ತ ದೇವರ ನಾಮಸ್ಮರಣೆಯೊಂದಿಗೆ ವಾದ್ಯ ವೈಭವ ಗ್ರಾಮದಲ್ಲಿ ಜರುಗಿತು.
ಸಾವಳಗಿ ಶ್ರೀಗಳು, ಸಂಗನಬಸವ ಶ್ರೀಗಳು, ಮಲ್ಲಿಬೊಮ್ಮ ಶ್ರೀಗಳು, ಶ್ರೀಶೈಲ ಮಠ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ವಿದ್ಯಾಧರ ರಸ್ತಾಪುರ ಮಠ ಯಲ್ಲಿಪ ಬುರಡ ರಮೇಶ ಅಪಜಲಪೂರ ಭಕ್ತಿ ಸೇವೆ ಸಲ್ಲಿಸಿದರು. ಸಂತೋಷ ಅಮರಗೊಂಡ, ವಿನಾಯಕ ಕಲಶೆಟ್ಟಿ ನಿರೂಪಣೆ ಚೆಂದು ಹಳಿಮನಿ ವಂದನಾರೆ್ಣ ಮಾಡಿದರು.
ಗ್ರಾಮದ ಗಣ್ಯರಾದ ಅರವಿಂದ ಅಲೊಣಿ, ಅಲೋಕ ಕುಮಾರ ಬಡದಾಳ, ಪಾರ್ಷ್ವನಾಥ ಶಂಕರ ಹಳಿಮನಿ, ನಾನಗೌಡ ಅಫಜಲಪೂರ, ಹಂಪಣ್ಣ ನಾವಿ, ಸಂಗಪ್ಪ ಸೊನ್ನದ, ಅಜಯ ಬಂಟನೂರ, ಸಾಗರ ಅಲೋಣಿ, ಗುಣದಾರ ಒಣಕುದರಿ, ಭಕ್ತ ವೃಂದ ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 