ಮಹಾಲಿಂಗಪುರದಲ್ಲಿ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನೂತನ ಶಾಖೆ ಉದ್ಘಾಟನೆ
Inauguration of the new branch of Rani Chennamma Women's Cooperative Bank in Mahalingapura.
ಲೋಕದರ್ಶನ ವರದಿ
ಮಹಾಲಿಂಗಪುರ ೨೪: ಮಹಿಳಾ ನೇತೃತ್ವದ ಸಹಕಾರಿ ಬ್ಯಾಂಕಿAಗ್ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ಗುರುತಿಸಿರುವ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತದ ಮಹಾಲಿಂಗಪುರ ಶಾಖೆಯ ಔಪಚಾರಿಕ ಉದ್ಘಾಟನೆ ಆ.೨೩ರಂದು ಭವ್ಯವಾಗಿ ನಡೆಯಿತು.
ಬ್ಯಾಂಕ್ನ ಅಧ್ಯಕ್ಷೆ ಡಾ. ಪ್ರೀತಿ ದೊಡ್ದವಾಡ ಹಾಗೂ ನಿರ್ದೇಶಕ ಮಂಡಳಿ ಸದಸ್ಯರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಮತ್ತು ಔಪಚಾರಿಕ ಕಾರ್ಯಕ್ರಮ ಜರುಗಿತು. ಮಾರ್ಚ್ ೨೦೨೬ರಿಂದಲೇ ಶಾಖೆಯು ತನ್ನ ಬ್ಯಾಂಕಿAಗ್ ವ್ಯವಹಾರವನ್ನು ಆರಂಭಿಸಿದ್ದು, ಇದೀಗ ಅಧಿಕೃತವಾಗಿ ಉದ್ಘಾಟನೆಗೊಂಡಿದೆ.
ಮಹಾಲಿಂಗಪುರ ಶಾಖೆಯು ಬ್ಯಾಂಕಿನ ಜಾಲಕ್ಕೆ ಸೇರ್ಪಡೆಯಾದ ೧೦ನೇ ಶಾಖೆಯಾಗಿದ್ದು, ಪ್ರಸಕ್ತ ವರ್ಷದ ಮೊದಲ ತ್ರೆöÊಮಾಸಿಕದಲ್ಲಿ ಬ್ಯಾಂಕ್ ವೇಗವಾಗಿ ಬೆಳವಣಿಗೆ ಸಾಧಿಸಿದೆ. ೨೦೨೫–೨೬ ಸಾಲಿನಲ್ಲಿ ಬ್ಯಾಂಕ್ ೯.೧೯ ಕೋಟಿ ನಿವ್ವಳ ಲಾಭ ದಾಖಲಿಸಿದೆ ಎಂದು ಆಡಳಿತ ಮಂಡಳಿ ತಿಳಿಸಿತು.
ಕಾರ್ಯಕ್ರಮದಲ್ಲಿ ಆಶಾ ಪಿ. ಕೋರೆ, ರಾಜೇಶ್ವರಿ ಕವಟಗಿಮಠ, ಅರುಂಧತಿ ಪ್ಯಾಟೆಡ್ ಸೇರಿದಂತೆ ಹಲವು ಗಣ್ಯ ನಿರ್ದೇಶಕರು, ಅಧಿಕಾರಿಗಳು ಹಾಗೂ ಸ್ಥಳೀಯ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.
ಮಹಿಳೆಯರು ಹಾಗೂ ಸ್ಥಳೀಯ ವ್ಯಾಪಾರ ಸಮುದಾಯದಲ್ಲಿ ಆರ್ಥಿಕ ಸಾಕ್ಷರತೆ, ಆರ್ಥಿಕ ಸ್ವಾವಲಂಬನೆ ಮತ್ತು ಸೂಕ್ತ ಹಣಕಾಸು ಪರಿಹಾರಗಳನ್ನು ಉತ್ತೇಜಿಸುವುದು ಬ್ಯಾಂಕಿನ ಪ್ರಮುಖ ಉದ್ದೇಶವಾಗಿದೆ. ಬ್ಯಾಂಕ್ ತನ್ನ ಉತ್ತಮ ಆರ್ಥಿಕ ಶಿಸ್ತು ಹಾಗೂ ಕಾರ್ಯಕ್ಷಮತೆಯಿಂದ ವಿವಿಧ ಸಹಕಾರಿ ಬ್ಯಾಂಕಿAಗ್ ಸಂಸ್ಥೆಗಳಿAದ ಪ್ರಶಸ್ತಿ ಮತ್ತು ಉನ್ನತ ಶ್ರೇಯಾಂಕಗಳನ್ನು ಪಡೆದಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 