ಸ್ವಾರ್ಥರಹಿತ ಭಕ್ತಿಯಿಂದ ಸದ್ಗುಣ ಬೆಳೆಸಿಕೊಳ್ಳಿ

 ಸ್ವಾರ್ಥರಹಿತ ಭಕ್ತಿಯಿಂದ ಸದ್ಗುಣ ಬೆಳೆಸಿಕೊಳ್ಳಿ Cultivate virtues through selfless devotion.

ಲೋಕದರ್ಶನ ವರದಿ

ಬೆಳಗಾವಿ  ೨೪: ಸ್ವಾರ್ಥರಹಿತ ಭಕ್ತಿಯಿಂದ ದೇವರನ್ನು ಆರಾಧಿಸುವ ಮೂಲಕ ಸದ್ಗುಣಗಳನ್ನು ಬೆಳೆಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಶಿವ ಬಸವನಗರ ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಹೇಳಿದರು. 

ನಗರದ ವಲಯದ ಪುಲಾಬಾಗಿಲಿನ ಕಮಲಪುಷ್ಪ ಮಂಗಲ ಕಾರ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಶ್ರೀ ವರಮಹಾಲಕ್ಷಿö್ಮÃ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಯುತ್ತಿರುವ ವಿವಿಧ ಸಮಾಜಮುಖಿ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ ಎಂದು ಶ್ರೀಗಳು ಹೇಳಿದರು. ಭಕ್ತಿಯೊಂದಿಗೆ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಬದುಕಬೇಕು ಎಂದರು. 

ಸಿಪಿಐ ಜೆ.ಎಂ. ಕಾಲಿವರ್ಮ ಮಾತನಾಡಿ, ಕುಟುಂಬದ ಏಳಿಗೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದು, ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ಸಂತಸದ ಸಂಗತಿ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದು, ಮಹಿಳಾ ಸಬಲೀಕರಣಕ್ಕೂ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ೬೦೦ಕ್ಕೂ ಅಧಿಕ ಮಹಿಳೆಯರು ಸಾಮೂಹಿಕ ವರಮಹಾಲಕ್ಷಿö್ಮÃ ಪೂಜೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರು. ಯೋಜನೆಯ ಬೆಳಗಾವಿ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ಮುಖ್ಯ ಅತಿಥಿ ಅಂಜನಾ ರಾಯ್ಕರ್, ಸಭಾಧ್ಯಕ್ಷ ಅಂಜು ಹಿರೇಮಠ, ಕೃಷಿ ಮೇಲ್ವಿಚಾರಕ ಶಂಕರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗೀತಾ ನಿರೂಪಿಸಿದರು. ವಲಯ ಮೇಲ್ವಿಚಾರಕ ಸೋಮಲಿಂಗ ವಂದಿಸಿದರು.