ನೂತನ ಡಾ.ಬಿ.ಆರ್.ಅಂಬೇಡ್ಕರ ಭವನದ ಉದ್ಘಾಟನೆ


ಲೋಕದರ್ಶನ ವರದಿ

ಬ್ಯಾಡಗಿ17: ಪಟ್ಟಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ ಭವನಕ್ಕೆ ವಿದ್ಯುತ್ ಸೌಲಭ್ಯ ಹಾಗೂ ಕಂಪೌಂಡ ಗೋಡೆ ಕಟ್ಟಡಕ್ಕೆ ಅಗತ್ಯವಿರುವ ಅನುದಾನವನ್ನು ನೀಡುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಪಟ್ಟಣದ ಜನತೆಗೆ ಭರವಸೆ ನೀಡಿದರು.

      ಅವರು ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಹಾಗೂ ನಿಮರ್ಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಿಮರ್ಿಸಿದ 1 ಕೋಟಿ ರೂ.ಗಳ ವೆಚ್ಚದ ನೂತನ ಡಾ.ಬಿ.ಆರ್.ಅಂಬೇಡ್ಕರ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕಳೆದ ವಾರ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಾಜ್ಯದ ನೂತನ ಕಮೀಟಿ ರಚನೆಯಾಗಿದೆ. ಅದರಲ್ಲಿ ನನ್ನನ್ನು ನಿದರ್ೇಶಕರನ್ನಾಗಿ ನೇಮಿಸಲಾಗಿದೆ. ಇದರಿಂದಾಗಿ ಹಿಂದೂಳಿದ ಸಮಾಜದ ಜನತೆಯ ಬೇಕು ಬೇಡಿಕೆಗಳನ್ನು ಈಡೇರಸಲು ಬೇಕಾಗಿರುವ ಅನುದಾನವನ್ನು ಪಡೆಯಲು ಸಹಕಾರಿಯಾಗಲಿದೆ. ಇದನ್ನು ಬಳಸಿಕೊಂಡು ಇಂದು ಲೋಕಾರ್ಪಣೆಗೊಡಿರುವ ಡಾ.ಬಿ.ಆರ್.ಅಂಬೇಡ್ಕರ ಭವನಕ್ಕೆ ಮೂಲಭೂತ ಸೌಲಭ್ಯ ಒದಗಿಸಿಕೊಡಲು 50 ಲಕ್ಷ ರೂ.ಗಳ ಅವಶ್ಯಕತೆಯಿದೆ. 50 ಲಕ್ಷ ಅನುದಾನವನ್ನು ಒದಗಿಸಿಕೊಡಲು ಸಮಾಜ ಕಲ್ಯಾಣ ಇಲಾಖೆಯ ಸರ್ವ ಸದಸ್ಯರ ಸಭೆಯಲ್ಲಿ ವಿವರಿಸಿ ಅನುದಾನ ತರುವುದಾಗಿ ಸಭೆಗೆ ತಿಳಿಸಿದರಲ್ಲದೇ ತಾಲೂಕಿನಲ್ಲಿಯೇ ಉತ್ತಮವಾದ ಭವ್ಯ ಕಟ್ಟಡ ಇದಾಗಿದ್ದು, ಸ್ಥಳೀಯರು ಈ ಕಟ್ಟಡವನ್ನು ಉತ್ತಮವಾಗಿ ಉಪಯೋಗಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು

     ಸಮಾಜ ಸೇವಕ ಸುರೇಶ ಅಸಾದಿ ಮಾತನಾಡಿ ಸ್ಥಳೀಯ ಶಾಸಕರು ಈಗಾಗಲೇ ತಾಲೂಕಿನಲ್ಲಿ ಹಿಂದುಳಿದ ಜನತೆಗೆ ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಶ್ರಮಿಸುತ್ತಲಿದ್ದಾರೆ. ಕ್ಷೇತ್ರದಲ್ಲಿರುವ ಎಸ್ಸಿ ಹಾಗೂ ಎಸ್ಟಿ ಕಾಲೋನಿಗಳಲ್ಲಿಯ ಜನತೆಗೆ ಶುದ್ದ ಕುಡಿಯವ ನೀರಿನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವರ ಜೊತೆಗೆ ಈಗಾಗಲೇ ಚಚರ್ಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವರು ಹೆಚ್ಚಿನ ಅನುದಾನವನ್ನು ಕ್ಷೇತ್ರದ ಜನತೆಗೆ ಕೊಡಲಿದ್ದಾರೆ. ಅದರೊಂದಿಗೆ ಈಗಾಗಲೇ ಅನೇಕ ಗ್ರಾಮಗಳಲ್ಲಿಯ ಪರಿಶಿಷ್ಟ ಜನಾಂಗದ ಓಣಿಗಳಲ್ಲಿ ಡಾ.ಅಂಬೇಡಕರ ಭವನಗಳನ್ನು ಕಟ್ಟಲಾಗಿದೆ. ಇನ್ನೂ ಕೆಲವೊಂದು ಗ್ರಾಮಗಳಲ್ಲಿ ಕಟ್ಟಡದ ಕಾಮಗಾರಿಗಳು ನಡೆಯುತ್ತಲಿವೆ. ಎಸ್ಸಿ ಹಾಗೂ ಎಸ್ಟಿ ಕಾಲೋನಿಯ ಜನತೆ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ದೇಶದ ಸಮಗ್ರ ಅಭಿವೃದ್ದಿಗೆ ಮುಂದಾಗಬೇಕೆಂದರು.

ಪ್ರಾಸ್ತಾವಿಕವಾಗಿ ಸಮಾಜ ಕಲ್ಯಾಣಾಧಿಕಾರಿ ಹನುಮಂತಪ್ಪ ಲಮಾಣಿ  ಮಾತನಾಡಿ  ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿಯ ರಸ್ತೆಗಳನ್ನು ಕಾಂಕ್ರೀಟ್ಕರಣಗೊಳಿಸಲು ಶಾಸಕರು ಪ್ರಯತ್ನಿಸುತ್ತಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಸರಕಾರ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸುತ್ತಲಿರುವುದು ಸಂತೋಷದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಶಾಸಕರು ಸರಕಾರದ ಮೇಲೆ ಒತ್ತಡವನ್ನು ಹಾಕಿ ಸಚಿವರ ವಿಶ್ವಾಸವನ್ನು ಪಡೆದುಕೊಂಡು ತಾಲೂಕಿನಲ್ಲಿ ಹೆಚ್ಚಿನ ಅನುದಾನವನ್ನು ತರಲಿದ್ದಾರೆಂದು ವಿಶ್ವಾಸ ವ್ಯಕ್ತ ಪಡಿಸಿದರು.

       ಪುರಸಭಾ ಅಧ್ಯಕ್ಷ ಬಸವಣ್ಣೆಪ್ಪ ಛತ್ರದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ದ್ರಾಕ್ಷಾಯಣೆಮ್ಮ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಮ್ಮ ಬೇವಿನಮಟ್ಟಿ, ದುಗರ್ೇಶ ಗೋಣೆಮ್ಮನವರ, ಬಸವರಾಜ ಹಂಜಿ, ಪ್ರಶಾಂತ ಯಾದವಾಡ, ಮಲ್ಲನಗೌಡ್ರ ಭದ್ರಗೌಡ್ರ, ರೋಹಿಣಿ ಹುಣಿಸಿಮರದ, ವಿಜಯ ಮಾಳಗಿ, ಮಂಜುನಾಥ ಭೋವಿ, ಮಾರುತಿ ಹಂಜಿ, ತಿಮ್ಮಣ್ಣ ವಡ್ಡರ, ನಾಗರಾಜ ಹಾವನೂರ, ಹೊನ್ನಪ್ಪ ತಗಡಿನಮನಿ, ರವಿ ಹುಣಿಸಿಮರದ ನಿಮರ್ಿತಿ ಕೇಂದ್ರದ ಯೋಜನಾ ನಿದರ್ೇಶಕ ಎಚ್.ಡಿ.ಶಾಂತಕುಮಾರ, ರಾಮಣ್ಣ ಉಕ್ಕುಂದ, ಮಲ್ಲೇಶಪ್ಪ ಚಿಕ್ಕಣ್ಣನವರ, ಸುರೇಶ ಯತ್ನಳ್ಳಿ ಸೇರಿದಂತೆ ಇನ್ನಿತರರಿದ್ದರು. ಬಿ.ಎಫ್.ದೊಡ್ಡಮನಿ ಸ್ವಾಗತಿಸಿದರು. ಎಂ.ಎಫ್.ಕರಿಯಮ್ಮನವರ ನಿರೂಪಿಸಿದರು.