ಸಾಂಸ್ಕೃತಿಕ ಕಲರವ ಸಮಾರಂಭ ಉದ್ಘಾಟನೆ
Inauguration of the cultural festival
ರಾಣಿಬೆನ್ನೂರ 24: ಯಾವುದೇ ಕವಿಯ ತಾಕತ್ತು ಮತ್ತು ಪ್ರಭಾವವನ್ನು ದ,ರಾ ಬೇಂದ್ರೆ ಅವರಲ್ಲಿ ಕಾಣಬೇಕು ಅಂತಹ ಸಾಹಿತ್ಯದ ತಾಕತ್ತು ಅದಾಗಿತ್ತು ಬ್ರೀಟೀಷರ ವಿರುದ್ಧ ಕವನವನ್ನು ರಚಿಸಿದ್ದಾರೆ ಎಂದು ತಿಳಿದು ಅವರನ್ನು ಜೈಲಿಗೆ ಕಳಿಸಿದರು ಇದರ ಮೇಲೆ ತಿಳಿಯುತ್ತದೆ ಅವರ ಸಾಹಿತ್ಯದ ಪ್ರಭಾವ ಎಷ್ಟು ಇತ್ತು ಎಂಬುವುದು ಅದರಂತೆ ಕವಿಯ ಭಾಷೆ ಶೈಲಿ ಅವರ ಧೈರ್ಯ ಇವೆಲ್ಲಾ ಸಾಹಿತ್ಯದ ಮೂಲಕ ಈ ರೀತಿ ಬರೆದು ಬ್ರಿಟೀಷರಿಗೆ ಭಯ ಹುಟ್ಟಿಸಿದ್ದರು ಎಂದು ಆಕಾಶವಾಣೀಯ ನಿವೃತ್ತಿ ನಿರ್ದೇಶಕ ಶಶಿಧರ ನರೇಂದ್ರ ಹೇಳಿದರು.
ನಗರದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಸಾಂಸ್ಕಾರ ಭಾರತೀ ಸೇವಾ ಸಂಸ್ಥೆ ವತಿಯಿಂದ ಎರಿ್ಡಸಿದ ಸಾಂಸ್ಕೃತಿಕ ಕಲರವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿ ಉಳಿಯ ಬೇಕಾದರೆ ಮೊದಲು ಮಕ್ಕಳಿಗೆ ಮೂಬೈಲ್ ಬೀಡಿಸಿ ನಂತರ ಮಾದಕ ವಸ್ತುಗಳಿಂದ ದೂರ ವಿಡಬೇಕು ಇಂತಹ ಸಂಸ್ಕೃತಿ, ಸಂಸ್ಕಾರ ನೀಡುವಂತಾ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಡಾಽ ಆರ್.ಎಂ. ಕುಬೇರ್ಪ ಮಾತನಾಡಿ, ಇಂದನ ಮಕ್ಕಳು ಮನರಂಜನೆ ಅಂದರೆ ಮೂಬೈಲ್ ಅಂತ ತಿಳಿದು ಕೊಂಡಿದ್ದಾರೆ ಅವುಗಳಿಂದ ದೂರವಿದ್ದು ದೇಶಿಯ ಸಂಸ್ಕೃತಿ ಬೆಳಿಸಿ ಕೊಂಡು ನಮ್ಮ ದೇಶದ ಪರಂಪರೆಯನ್ನು ಕಾಯಬೆಕು ಎಂದರು.
ಡಿವೈಎಸ್‌ಪಿ ಲೋಕೇಶ, ಸಂಸ್ಕಾರ ಭಾರತೀಯ ಜಿಲ್ಲಾ ಅಧ್ಯಕ್ಷ ಮಾರುತಿ ಶಿಡ್ಲಾಪುರ, ಸಂತೋಷಕುಮಾರ ಪಾಟೀಲ, ನ್ಯಾಯವಾದಿ ಸಂಜೀವ ಶಿರಹಟ್ಟಿ, ಸಂಸ್ಕಾರ ಭಾತೀಯ ಉಪಾಧ್ಯಕ್ಷರಾದ ಮಮತಾ ನಾಡಗೇರ ಮಾತನಾಡಿದರು.
ಡಾಽ ಸಂಜಯ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವೀಣಾ ಜೋಶಿ, ಪತ್ರಕರ್ತ ಗುರುರಾಜ. ಶಿರಹಟ್ಟಿ ಮತ್ತಿತರರು ಇದ್ದರು. ಮಾರ್ತಾಂಡ ನೃತ್ಯ ಸಂಸ್ಥೆ ಮತ್ತು ಶಾರದಾ ನಾಟ್ಯ ಕಲಾ ಸಂಸ್ತೆ ಶಾಲೆ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು. ಕುಮಾರಿ ರಜನಿ ಕರಿಗಾರ ದಾಸವಾಣಿ ಸಂಗೀತ ಕಾರ್ಯಕ್ರಮ ನಡಿಸಿ ಕೊಟ್ಟರು.
ಫೋಟೊ:24ಆರ್‌ಎನ್‌ಆರ್02ರಾಣಿಬೆನ್ನೂರ: ನಗರದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಸಾಂಸ್ಕಾರ ಭಾರತೀ ಸೇವಾ ಸಂಸ್ಥೆ ವತಿಯಿಂದ ಎರಿ್ಡಸಿದ ಸಾಂಸ್ಕೃತಿಕ ಕಲರವ ಸಮಾರಂಭವನ್ನು ಆಕಾಶವಾಣೀಯ ನಿವೃತ್ತಿ ನಿರ್ದೇಶಕ ಶಶಿಧರ ನರೇಂದ್ರ ಉದ್ಘಾಟಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 