ಸಂಗೀತ ರಸ ಸಂಜೆ ಕಾರ್ಯಕ್ರಮದ ಉದ್ಘಾಟನೆ: ಬಿ ಪಿ ಮರೇಗೌಡರ
Inauguration of the Sangeetha Rasa Evening Program: B. P. Maregowda
ಕೊಪ್ಪಳ 23: ಸ್ವರ ಸೌರಭ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆಯವತಿಯಿಂದ ಕೊಪ್ಪಳದ ಷಡ್ಜ ಸಂಗೀತ ಸಭಾ ಭವನದಲ್ಲಿ ಸಂಗೀತ ರಸ ಸಂಜೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಬಿ ಪಿ ಮರೇಗೌಡರ ಮಾತೆಂಬುದು ಜ್ಯೋತಿಲಿಂರ್ಗ ಸ್ವರವೆಂಬುದು ಪರತತ್ತ್ವ ಎಂಬ ಅಲ್ಲಮಪ್ರಭುಗಳ ವಚನ ಇಲ್ಲಿ ಸಾಕ್ಷಾತ್ಕಾರವಾಗಿದೆ ಏಕೆಂದರೆ ಪರಮಾತ್ಮನ ಸನ್ನಿಧಿಯನ್ನು ನೇರವಾಗಿ ಸೇರುವ ಏಕೈಕ ಮಾರ್ಗ ಸಂಗೀತವಾಗಿದೆ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಅನೇಕ ಸಂಸ್ಥೆಗಳು ಕಾರ್ಯ ಪ್ರವೃತ್ತವಾಗಿವೆ, ಸಂಸ್ಥೆಗಳಿಗೆ ಸಂಸ್ಕೃತಿ ಇಲಾಖೆಯ ಬೆಂಬಲವು ದೊರೆತರೆ ಇನ್ನು ವಿಶಿಷ್ಟ ಕಾರ್ಯಕ್ರಮಗಳು ಸಂಸ್ಥೆಗಳಿಂದ ಆಯೋಜಿಸಲು ಸಾಧ್ಯವಾಗುತ್ತದೆ,
ಇಂತಹ ಸಂಗೀತ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ನನ್ನ ಪುಣ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಚಂದ್ರ್ಪ ಉಪ್ಪಾರ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಜಡೆಪ್ಪ ಎಮ್ಮಿಗನೂರು ಹಾಗೂ ಅನಂತ ಪಾವಣಸ್ಕರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಭಿಷೇಕ ಚಿತ್ರಗಾರ ಹಾಗೂ ಕಿಶನ ಪೂಜಾರರ ಬಾನ್ಸೂರಿ ವಾದನ, ಬಿ ಪಿ ಮರೇಗೌಡರರವರ ವಚನ ಸಂಗೀತ, ಕೀರ್ತಿ ಮೇಟಿ ಹಾಗೂ ಆರತಿ ಮೇಟಿಯವರಿಂದ ಸಮೂಹ ಗೀತೆಗಳು ವಿಜಯಲಕ್ಷ್ಮಿ ಹಂಚಿನಾಳರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿದವು. ನಾಗರಾಜ ಶ್ಯಾವಿಯವರ ಕೊಳಲಿನಲ್ಲಿ ಭೈರವಿ ರಾಗದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರ್ಪ ಉಪ್ಪಾರ, ತಬಲದಲ್ಲಿ ಮಾರುತಿ ದೊಡ್ಡಮನಿ ಹಾಗೂ ಅನಂತ ಪಾವಣಸ್ಕರ ಮತ್ತು ರಿಧಮ ಪ್ಯಾಡನಲ್ಲಿ ಸಂಜನ ಬೆಲ್ಲದ ಮೆರುಗು ನೀಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 